
ಕಲಬುರಗಿ (ಜೂ.23) ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಶುರು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರಿದ್ದಾರೆ.
ಕಲಬರಗಿ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ ಅಧಿಕಾರ ಶುರುಮಾಡಿ ಇನ್ನೂ ಸರಿಯಾಗಿ 30 ದಿನಗಳಾಗಿಲ್ಲ. ಅದಾಗಲೇ ಪಠ್ಯದಲ್ಲಿದ್ದ ಹೆಗ್ಡೇವಾರ್, ಸಾವರ್ಕರ್ ಪಾಠ ಕೈಬಿಟ್ಟಿದೆ. ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದಿದೆ. ಇವೆಲ್ಲ ದ್ವೇಷದ ಕ್ರಮಗಳಲ್ಲದೆ ಮತ್ತೇನು? ಇಂತಹ ರಾಜಕೀಯದಿಂದ ಜನ ಹಾಗೂ ಲೋಕ ಕಲ್ಯಾಣ ಸಾಧಿಸಲಾಗದು ಎಂದರು.
ಕಾಂಗ್ರೆಸ್ 5 ಗ್ಯಾರಂಟಿ(Congress guarantee scheme) ಜಾರಿಗೆಗೆ ತಿಣುಕಾಡುತ್ತಿದೆ. ಅನ್ನಭಾಗ್ಯ(Annabhagya rice)ದಲ್ಲಿ 10 ಕೆಜಿ ಅಕ್ಕಿ ಕೊಡೋದಾಗಿ ಕಾಂಗ್ರೆಸ್ ಹೇಳಿದೆ. ಆದರೆ ಇದು ಆ ಪಕ್ಷದ ಪ್ರಣಾಳಿಕೆಯೇ ಹೊರತು ಇದಕ್ಕೂ ನಮಗೂ ಸಂಬಂಧವೇ ಇಲ್ಲ. ಕಾಂಗ್ರೆಸ್ಸಿಗರು ಎಲ್ಲಾದರೂ ಅನ್ನಭಾಗ್ಯದ 10 ಕೆಜಿ ಅಕ್ಕಿಯಲ್ಲಿ ಕೇಂದ್ರದ್ದೂ 5 ಕೆಜಿ ಪಾಲಿದೆ ಅಂತ ಹೇಳಿದ್ದಾರಾ?. ಅವರು ಮೊದಲು 10 ಕೆಜಿ ಅಕ್ಕಿ ಕೊಡಲಿ. ಆ ಮೇಲೆ ಕೇಂದ್ರದಿಂದ ಕೊಡೊ 5 ಕೆಜಿ ಸೇರಿಸಿ ಒಟ್ಟು 15 ಕೆಜಿ ಕೊಡಬೇಕು ಎಂದರು.
ಜೂನ್, ಜುಲೈ ಆಯ್ತು, ಈಗ ಆಗಸ್ಟ್‌ಗೆ ಮುಂದೂಡಿಕೆಯಾದ ಅನ್ನಭಾಗ್ಯ ಯೋಜನೆ
ಕೇಂದ್ರ ಕೊರೊನಾ ವೇಳೆ 90 ಕೋಟಿ ಜನರಿಗೆ ಅಕ್ಕಿ ಕೊಟ್ಟಿದೆ. ಈಗಲೂ ಕೊಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದರಲ್ಲಿ ಹಲವರಿಗೆ ಟೆಕಿಟ್ ನೀಡಲಾಗದು ಎಂಬ ಬಿಜೆಪಿಯಲ್ಲಿನ ಚರ್ಚೆಗಳ ಬಗ್ಗೆ ಪ್ರಶ್ನಿಸಿದಾಗ ಕಟೀಲ್ ಅವರು, ಇದೆಲ್ಲ ಊಹಾ-ಪೋಹ ಕಲ್ಪಿತ ಸುದ್ದಿ. ಈಗಲೇ ಆ ಬಗ್ಗೆ ಏನೂ ಹೇಳಲಾಗದು ರಾಜ್ಯಾದ್ಯಂತ 7 ತಂಡಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಂಘಟನೆ ಬಲಗೊಳಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಕಟೀಲ್ ಹೇಳಿದರು.
ನಳೀನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ್, ಸಂಸದರಾದ ಡಾ. ಉಮೇಶ ಜಾಧವ್, ಕೊಪ್ಪಳದ ಸಂಗಣ್ಣ ಕರಡಿ, ಬೀದರ್‌ನ ಭಗವಂತ ಖೂಬಾ, ಕಲಬುರಗಿಯ ಬಿಜೆಪಿ ಎಲ್ಲಾ ಹಾಲಿ, ಮಾಜಿ ಶಾಸಕರು ಪಕ್ಷದ ಪ್ರಮುಖರು, ಜಿಲ್ಲಾ, ತಾಲೂಕು ಮಟಟದ ವಿವಿಧ ಮೋರ್ಚಾ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸದ್ಯಕ್ಕೆ ಮದ್ಯದ ದರ ಏರಿಕೆ ಇಲ್ಲ, ಏರಿಕೆ ಮಾಡಿದರೆ ತಿಳಿಸುವೆ: ಅಬಕಾರಿ ಸಚಿವ ತಿಮ್ಮಾಪುರ
ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್, ಶಶಿಲ್ ನಮೋಶಿ, ಬಿಜಿ ಪಾಟೀಲ್, ಮಾಜಿ ಶಾಸಕರಾದ ರಾಜಕಮಾರ್ ತೇಲ್ಕೂರ್, ಅÜಮರನಾಥ ಪಾಟೀಲ್, ಸುಭಾಸ ಗುತ್ತೇದಾರ್, ಮುಖಂಡರಾದ ಚಂದು ಪಾಟೀಲ್, ಮೇಯರ್ ವಿಸಾಲ ಧರ್ಗಿ, ಶಿವಾನಂದ ಪಿಸ್ತಿ, ಶೋಭಾ ಬಾಣಿ, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಸೇರಿದಂತೆ ಅನೇಕರಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ