
ಕೊಡಗು: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಕಾಫಿತೋಟದಲ್ಲಿ ಹುಲಿಯೊಂದು ಓಡಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಇದು ಆ ಪ್ರದೇಶದ ಜನರಲ್ಲಿ ಹಾಗೂ ಕಾಫಿತೋಟಕ್ಕೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರಲ್ಲಿ ಭೀತಿಗೆ ಕಾರಣವಾಗಿದೆ. ಮಡಿಕೇರಿ ನಗರದಿಂದ ಕೇವಲ ಎರಡು ಕಿ ಮೀ ದೂರದಲ್ಲಿರುವ ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ. ಗ್ರಾಮದ ಪೊನ್ನಚೆಟ್ಟಿರ ಸಂದೀಪ್ ಎಂಬುವರ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಓಡಾಡುತ್ತಿರುವ ದೃಶ್ಯ ಕಾಫಿತೋಟದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಿಂದಾಗಿ ಈಗ ಇಬ್ಬನಿವಳವಾಡಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿದೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ:
ಹುಲಿಯೊಂದು ಕಾಫಿತೋಟದಲ್ಲಿ ಓಡಾಡ್ತಿದೆ ಎಂಬ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದ ಏಳೆಂಟು ಕಿ.ಮಿ ವ್ಯಾಪ್ತಿಯಲ್ಲಿ ಹುಲಿ ಹೋಲುವ ಪ್ರಾಣಿ ಓಡಾಟದ ಮಾಹಿತಿ ಇತ್ತು. ಹುಲಿಯೋ, ಪೆರ್ಪಣವೋ ಎಂಬ ಗೊಂದಲ ಇತ್ತು. (ಪೆರ್ಪಣವೆಂದರೆ ಚಿರತೆಯನ್ನೇ ಹೋಲುವ ಅಪರೂಪದ ವನ್ಯಜೀವಿಯಾಗಿದೆ ಲಿಪರ್ಡ್ ಕ್ಯಾಟ್ ಎಂದೂ ಕೂಡ ಇದನ್ನು ಕರೆಯಲಾಗುತ್ತದೆ.) ಆದರೆ ಈಗ ಅದು ಹುಲಿ ಎಂಬುದು ಖಚಿತವಾಗಿದೆ ಎಂದ ಡಿಎಫ್ಓ ಹೇಳಿದ್ದಾರೆ.
ಇದನ್ನೂ ಓದಿ: ಇಡಿ ದಾಳಿಗೆ ಅಡ್ಡಿಯಾದ ಮಮತಾ ಬ್ಯಾನರ್ಜಿಗೆ ಸುಪ್ರೀಂಕೋರ್ಟ್ ತರಾಟೆ
ಹುಲಿ ಸೆರೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಡಿಕೇರಿ ಡಿಸಿಎಫ್ ಅಭಿಷೇಕ್ ಮಾಹಿತಿ ನೀಡಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಹುಲಿ ಕಾಫಿತೋಟದಲ್ಲಿ ಓಡಾಡ್ತಿದೆ ಎಂಬ ವಿಚಾರ ತಿಳಿದ ಶಾಸಕ ಮಂತರ್ ಗೌಡ್ ಕೂಡಲೇ ಕಾರ್ಯಾಚರಣೆ ನಡೆಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಇರಾನ್ ತನಗೆ ದುಬಾರಿ ಮೊತ್ತದ ಹರ್ಮುಜ್ ಉಡುಗೊರೆ ನೀಡಿದೆ ಎಂದ ಟ್ರಂಪ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ