ನಟ ದರ್ಶನ್ ಮೈಸೂರು, ಪವಿತ್ರಾ ಗೌಡ ಹೊರ ರಾಜ್ಯಕ್ಕೆ ಹೋಗಲು ಕೋರ್ಟ್ ಅನುಮತಿ

By Sathish Kumar KH  |  First Published Jan 10, 2025, 6:00 PM IST

ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡರಿಗೆ ಕ್ರಮವಾಗಿ ಮೈಸೂರು ಮತ್ತು ಹೊರ ರಾಜ್ಯಗಳಿಗೆ ಭೇಟಿ ನೀಡಲು ನ್ಯಾಯಾಲಯ ಅನುಮತಿ ನೀಡಿದೆ. ದರ್ಶನ್ 5 ದಿನಗಳ ಕಾಲ ಮೈಸೂರಿಗೆ ಭೇಟಿ ನೀಡಬಹುದು, ಆದರೆ ಪವಿತ್ರಾ ಗೌಡ ವ್ಯಾಪಾರ ಮತ್ತು ದೇವಾಲಯ ಭೇಟಿಗಾಗಿ 25 ದಿನಗಳ ಕಾಲ ಹೊರ ರಾಜ್ಯಗಳಿಗೆ ಪ್ರಯಾಣಿಸಬಹುದು.


ಬೆಂಗಳೂರು (ಜ.10): ನಟ ದರ್ಶನ್ ತೂಗುದೀಪ ಹಾಗೂ ನಟಿ ಪವಿತ್ರಾ ಗೌಡ ಸೇರಿದಂತೆ 17 ಜನ ಆರೋಪಿಗಳು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಕೇಂದ್ರಸ್ಥಾನ ಬಿಟ್ಟು ಹೊರಗೆ ಹೋಗದಂತೆ ಆದೇಶ ಹೊರಡಿಸಲಾಗಿತ್ತು. ಆದರೆ, ಇದೀಗ ಪವೀತ್ರಾಗೌಡ ಅವರು ತಮ್ಮ ಉದ್ಯಮ ಹಾಗೂ ದೇವಾಲಯ ಭೇಟಿ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಹೋಗಲು ಹಾಗೂ ನಟ ದರ್ಶನ್ ಸಂಕ್ರಾಂತಿ ಹಬ್ಬದ ವೇಳೆ ಮೈಸೂರಿನ ಫಾರ್ಮ್‌ ಹೌಸ್‌ಗೆ ಹೋಗಲು ಕೋರ್ಟ್‌ನಿಂದ ಅನುಮತಿ ನೀಡಲಾಗಿದೆ.

ದರ್ಶನ್ 5 ದಿನ ಮೈಸೂರಿಗೆ ಹೋಗಲು ಅವಕಾಶ: ನಟ ದರ್ಶನ್ ಅವರು ನ್ಯಾಯಾಲಯಕ್ಕೆ ಹಾಜರಾದಾಗ ಮೈಸೂರಿಗೆ ತೆರಳಲು ಅವಕಾಶ ನೀಡುವಂತೆ ಮನವಿ ದರ್ಶನ್ ಪರ ವಕೀಲ ಸುನಿಲ್ ಕುಮಾರ್ ಅವರು ಅರ್ಜಿ ಸಲ್ಲಿಎ ಮಾಡಿದ್ದರು. ಈ ಅರ್ಜಿ ಪರಿಶೀಲಿಸಿದ 57ನೇ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಜೈ.ಶಂಕರ್ ಅವರು, ದರ್ಶನ್ ಮೈಸೂರಿಗೆ ತೆರಳಲು 5 ದಿನಗಳ ಕಾಲ ಅವಕಾಶ ನೀಡಿದೆ. ಜ.12ರಿಂದ 17ರವರೆಗೆ ಮೈಸೂರಿಗೆ ಹೋಗಿ ಬರಬಹುದು ಎಂದು ಆದೇಶ ಹೊರಡಿಸಿದರು. ಈ ಹಿಂದೆಯೂ ದರ್ಶನ್ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ಗೆ ಹೋಗಲು ಕೋರ್ಟ್‌ನಿಂದ ಅನುಮತಿ ಪಡೆದುಕೊಂಡಿದ್ದರು.

Tap to resize

Latest Videos

ಇದನ್ನೂ ಓದಿ: ಪವಿತ್ರಾಗೌಡ ಹೊರ ರಾಜ್ಯಕ್ಕೆ ಹೋಗಲು ಮನವಿ ಸಲ್ಲಿಸಿದ್ದೇಕೆ? ಸಂಕ್ರಾಂತಿಗೆ ದರ್ಶನ್ ರಾಸುಗಳ ಕಿಚ್ಚು ಹಾಯಿಸ್ತಾರಾ?

ಪವಿತ್ರಾಗೌಡ ಹೊರ ರಾಜ್ಯಕ್ಕೆ ಹೋಗಲು ಅವಕಾಶ: ನಟಿ ಪವಿತ್ರಾ ಗೌಡ ಅವರಿಗೂ ಕೂಡ ಕೋರ್ಟ್‌ನಿಂದ ಹೊರ ರಾಜ್ಯಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಪವಿತ್ರಾ ಗೌಡ ಪರ ವಕೀಲರು ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ಹೋಗಿ ಬರಲು ಅವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ದೇವಸ್ಥಾನ ಮತ್ತು ವ್ಯವಹಾರಿಕ ಸಂಬಂಧಿಸಿದ ಕೆಲಸದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಹೋಗಲು ಅದರಲ್ಲಿಯೂ ಮುಂಬೈ ಹಾಗೂ ದೆಹಲಿ ನಗರಗಳಿಗೆ ಹೋಗಿ ಬರಲು ಅವಕಾಶ ನೀಡಿದೆ. ಪವಿತ್ರಾ ಗೌಡ ಅವರು ಆರ್.ಆರ್. ನಗರದಲ್ಲಿರುವ ತಮ್ಮ ರೆಡ್ ಕಾರ್ಪೆಟ್ ಶೋರೂಮ್‌ಗೆ ಅಗತ್ಯವಿರುವ ರಾ ಮೆಟಿರಿಯಲ್ ತರಲು ಅವಕಾಶ ನೀಡಲು ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಜ.15ರಿಂದ ಫೆ.10ರವರೆಗೆ ಅಂದರೆ 25 ದಿನಗಳ ಕಾಲ ಮುಂಬೈ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ.

ಚಿತ್ರದುರ್ಗಕ್ಕೆ ಹೋಗಲು ಅನುಮತಿ: ರೇಣುಕಾಸ್ವಾಮಿ ಕೊಲೆ ಕೇಸಿನ ಮತ್ತೊಬ್ ಆರೋಪಿ ನಾಗರಾಜ್‌ ಕೂಡ ಮೈಸೂರಿಗೆ ಹಫಗಲು ಅನುಮತಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ನಾಗರಾಜ್ ಗೆ ಜ.10ರಿಂದ ಫೆ.24ರವರೆಗೆ ಮೈಸೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಉಳಿದಂತೆ ಚಿತ್ರದುರ್ಗದ ಆರೋಪಿಗಳಿಗೂ ತಮ್ಮ ಊರಿಗೆ ಹೋಗಲು ಅನುಮತಿ ಕೊಡಲಾಗಿದೆ. ಈ ಆದೇಶದಿಂದ ಚಿತ್ರದುರ್ಗದ ರಾಘವೇಂದ್ರ, ಜಗದೀಶ್ ಹಾಗೂ ಅನುಕುಮಾರ್ ಅವರು ತಮ್ಮ ಊರು ಚಿತ್ರದುರ್ಗಕ್ಕೆ ತೆರಳಲಿದ್ದಾರೆ. ಇಂದಿನಿಂದ ಫೆ.24ರವರೆಗೆ ಚಿತ್ರದುರ್ಗಕ್ಕೆ ಹೋಗಲು ಅನುಮತಿ ಕೊಡಲಾಗಿದೆ.

ಇದನ್ನೂ ಓದಿ: ಕೊನೆಗೂ ಕೋರ್ಟ್‌ ಹಾಲ್‌ನಲ್ಲಿ ದರ್ಶನ್- ಪವಿತ್ರಾ ಗೌಡ ಭೇಟಿ; ಬೆನ್ನು ತಟ್ಟಿ ಸಮಾಧಾನ ಮಾಡಿದ ಗೆಳೆಯ

click me!