BBMP: ಶೇ.5 ತೆರಿಗೆ ವಿನಾಯ್ತಿ ನೀಡಿದರೂ ಕೇವಲ ₹465 ಕೋಟಿ ಸಂಗ್ರಹ!

Published : Jul 03, 2023, 05:42 AM IST
BBMP: ಶೇ.5 ತೆರಿಗೆ ವಿನಾಯ್ತಿ ನೀಡಿದರೂ ಕೇವಲ ₹465 ಕೋಟಿ ಸಂಗ್ರಹ!

ಸಾರಾಂಶ

ಬೆಂಗಳೂರಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟುರಿಯಾಯಿತಿ ನೀಡಿದರೂ ಜೂನ್‌ನಲ್ಲಿ ಕೇವಲ .465 ಕೋಟಿ ಸಂಗ್ರಹವಾಗಿದೆ.

ಬೆಂಗಳೂರು (ಜು.3) :  ಬೆಂಗಳೂರಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟುರಿಯಾಯಿತಿ ನೀಡಿದರೂ ಜೂನ್‌ನಲ್ಲಿ ಕೇವಲ .465 ಕೋಟಿ ಸಂಗ್ರಹವಾಗಿದೆ.

ನಗರದ ಆಸ್ತಿ ಮಾಲಿಕರಿಗೆ ಏಪ್ರಿಲ್‌ನಲ್ಲಿ ಪ್ರಸಕ್ತ ವರ್ಷದ ಪೂರ್ಣ ಪ್ರಮಾಣದ ತೆರಿಗೆ ಪಾವತಿಸಿದರೆ, ಶೇ.5ರಷ್ಟುರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ತೆರಿಗೆ ವಸೂಲಿ ಹಾಗೂ ತೆರಿಗೆ ಪಾವತಿದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೇ ಅಂತ್ಯದವರೆಗೆ ರಾಜ್ಯ ಸರ್ಕಾರದ ಅನುಮತಿಯೊಂದಿಗೆ ವಿಸ್ತರಣೆ ಮಾಡುವ ಪರಿಪಾಠ ಇದೆ. ಈ ಬಾರಿಯೂ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಕಾರಣ ರಿಯಾಯಿತಿಯನ್ನು ಮೇ ತಿಂಗಳಿಗೆ ಮುಂದುವರೆಸಲಿಲ್ಲ.

ಆದರೆ, ಚುನಾವಣೆ ಮುಗಿದು ಸರ್ಕಾರ ರಚನೆ ಬಳಿಕ ಜೂನ್‌ 2ರಿಂದ 30ರವರೆಗೆ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟುರಿಯಾಯಿತಿ ನೀಡುವಂತೆ ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಜೂನ್‌ 30 ರವರೆಗೆ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ರಿಯಾಯಿತಿ ನೀಡಲಾಯಿತು. ಆದರೂ ಜೂನ್‌ನಲ್ಲಿ ಒಟ್ಟು .465 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ.

 

ಬಿಬಿಎಂಪಿಯಲ್ಲಿ 13 ಸಾವಿರ ಕೋಟಿ ಹಗರಣ: ಸಿಐಡಿಗೆ ವಹಿಸುವಂತೆ ಸಿಎಂಗೆ ಎನ್ನಾರ್ ರಮೇಶ್ ಪತ್ರ

ಮೇಗಿಂತ ಜೂನ್‌ನಲ್ಲಿ ಕಡಿಮೆ:

ಚುನಾವಣೆ ನೀತಿ ಸಂಹಿತೆಯಿಂದ ಮೇ ತಿಂಗಳಿನಲ್ಲಿ ರಿಯಾಯಿತಿ ನೀಡಲಿಲ್ಲ. ಆದರೂ ಮೇ ತಿಂಗಳಿನಲ್ಲಿ ಬಿಬಿಎಂಪಿಯ ಕಂದಾಯ ವಿಭಾಗವೂ .554 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿತ್ತು. ಆದರೆ, ರಿಯಾಯಿತಿ ನೀಡಿದರೂ ಜೂನ್‌ನಲ್ಲಿ .465 ಕೋಟಿ ಮಾತ್ರ ಸಂಗ್ರಹವಾಗಿದೆ. ಮೇ ತಿಂಗಳಿಗೆ ಹೋಲಿಕೆ ಮಾಡಿದರೆ, ಜೂನ್‌ನಲ್ಲಿ ಸುಮಾರು .90 ಕೋಟಿ ಕಡಿಮೆ ಸಂಗ್ರಹವಾಗಿದೆ.

2.52 ಲಕ್ಷ ಮಾಲಿಕರಿಗೆ ರಿಯಾಯ್ತಿ ಭಾಗ್ಯವಿಲ್ಲ

ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದ 6.82 ಆಸ್ತಿ ಮಾಲಿಕರಿಗೆ ಶೇ.5 ರಷ್ಟುರಿಯಾಯಿತಿ ನೀಡಲಾಗಿದೆ. ಜೂನ್‌ನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದ 2.71 ಲಕ್ಷ ಆಸ್ತಿ ಮಾಲಿಕರಿಗೆ ರಿಯಾಯಿತಿ ಭಾಗ್ಯ ಸಿಕ್ಕಿದೆ. ಆದರೆ, ಈ ಮಧ್ಯ ಮೇ ತಿಂಗಳಿನಲ್ಲಿ .554 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡಿದ 2.52 ಲಕ್ಷ ಆಸ್ತಿ ಮಾಲಿಕರಿಗೆ ಮಾತ್ರ ಶೇ.5ರಷ್ಟುರಿಯಾಯಿತಿ ಸಿಕ್ಕಿಲ್ಲ.

ಸರ್ಕಾರಕ್ಕೆ ಪತ್ರ: ಮೇನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದ ಆಸ್ತಿ ಮಾಲಿಕರಿಗೆ ಶೇ.5ರಷ್ಟುರಿಯಾಯಿತಿ ನೀಡುವ ಬಗ್ಗೆ ಬಿಬಿಎಂಪಿ ಕಂದಾಯ ವಿಭಾಗದಿಂದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಮೇ ತಿಂಗಳಿನಲ್ಲಿ ತೆರಿಗೆ ಕಟ್ಟಿದ ಮಾಲಿಕರಿಗೆ ಶೇ.5ರಷ್ಟುರಿಯಾಯಿತಿ ನೀಡುವುದಕ್ಕೆ ಸರ್ಕಾರ ಅನುಮೋದನೆ ನೀಡಿದರೆ, ಆ ಎಲ್ಲಾ ಮಾಲಿಕರಿಗೆ ಮುಂದಿನ ವರ್ಷದ ಆಸ್ತಿ ತೆರಿಗೆಯಲ್ಲಿ ಶೇ.5ರಷ್ಟುರಿಯಾಯಿತಿ ನೀಡುವ ಮೂಲಕ ಮರು ಹೊಂದಾಣಿಕೆ ಮಾಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ

ಆರ್‌.ಎಲ್‌.ದೀಪಕ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

₹2,200 ಕೋಟಿ ದಾಟಿದ ತೆರಿಗೆ

ಬಿಬಿಎಂಪಿಯ 2023-24ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವೂ ಜೂನ್‌ ಅಂತ್ಯಕ್ಕೆ .2,245 ಕೋಟಿ ತಲುಪಿದೆ. ಪ್ರಸಕ್ತ ಆರ್ಥಿಕ ವರ್ಷ ಪೂರ್ಣಕ್ಕೆ ಇನ್ನೂ 9 ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಒಟ್ಟಾರೆ .4,790 ಕೋಟಿ ಗುರಿ ತಲುಪಬೇಕಿದೆ. ಕಳೆದ ವರ್ಷ .4,189 ಕೋಟಿ ಆಸ್ತಿ ತೆರಿಗೆ ವಸೂಲಿ ಗುರಿ ಹಾಕಿಕೊಂಡಿತ್ತು. .3,332.72 ಕೋಟಿ ಸಂಗ್ರಹಿಸಲು ಶಕ್ತವಾಗಿತ್ತು.

ಬಿಬಿಎಂಪಿ 1500 ಪೌರಕಾರ್ಮಿಕರ ನೇಮಕಾತಿ ಶೀಘ್ರ?

2023-24ರ ಜೂನ್‌ ಅಂತ್ಯಕ್ಕೆ ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ .)

ವಲಯ ಸಂಗ್ರಹ

  • ಬೊಮ್ಮನಹಳ್ಳಿ 231.89
  • ದಾಸರಹಳ್ಳಿ 64.50
  • ಪೂರ್ವ 415.98
  • ಮಹದೇವಪುರ 591.18
  • ಆರ್‌ಆರ್‌ನಗರ 149.73
  • ದಕ್ಷಿಣ 358.94
  • ಪಶ್ಚಿಮ 248.39
  • ಯಲಹಂಕ 185.56
  • ಒಟ್ಟು 2,245.17

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ