
ಬೆಂಗಳೂರು (ಜು.3): ಮುಂಬೈ ಡಿಸಿಪಿ ಸೋಗಿನಲ್ಲಿ ಸೈಬರ್ ವಂಚಕರು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸುವುದಾಗಿ ಸಾಫ್‌್ಟವೇರ್ ಎಂಜಿನಿಯರೊಬ್ಬರನ್ನು ಬೆದರಿಸಿ ವಿವಿಧ ಹಂತಗಳಲ್ಲಿ .33.24 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗನಾಥಪುರದ ನಿವಾಸಿ ದಿನೇಶ್ ಪಾಟಕ್ (39) ವಂಚನೆಗೆ ಒಳಗಾದ ಸಾಫ್ಟ್‌ವೇರ್ ಎಂಜಿನಿಯರ್. ಜೂ.27ರಂದು ಅಪರಿಚಿತ ವ್ಯಕ್ತಿಯೊಬ್ಬ ದಿನೇಶ್ ಪಾಟಕ್‌ಗೆ ಕರೆ ಮಾಡಿ ತಾನು ಫೆಡೆಕ್ಸ್ ಕೊರಿಯರ್ ಸಿಬ್ಬಂದಿ ಎಂದು ಪರಿಚಯಿಸಿ ಕೊಂಡಿದ್ದಾನೆ. ಬಳಿಕ ‘ನಿಮ್ಮ ಆಧಾರ್ ದಾಖಲೆ ದುರ್ಬಳಕೆ ಮಾಡಿಕೊಂಡು ಮುಂಬೈನಿಂದ ತೈವಾನ್‌ಗೆ ಅಕ್ರಮವಾಗಿ ಕೆಲ ವಸ್ತುಗಳನ್ನು ಸಾಗಿಸಲಾಗಿದೆ. ಹೀಗಾಗಿ ಕರೆಯನ್ನು ಮುಂಬೈ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇನೆ’ ಎಂದು ಹೇಳಿ ಮತ್ತೊಂದು ನಂಬರ್‌ಗೆ ಕರೆ ವರ್ಗಾಯಿಸಿದ್ದಾನೆ.
ಬೆಂಗಳೂರು: ಓಲಾ, ಊಬರ್ ಚಾಲಕರೇ ಈತನ ಟಾರ್ಗೆಟ್, ಖರ್ತನಾಕ್ ಖದೀಮನ ಬಂಧನ
ಆ್ಯಪ್ ಡೌನ್‌ಲೋಡ್:
ಈ ವೇಳೆ ಮುಂಬೈ ಡಿಸಿಪಿ ಎಂದು ಮಾತನಾಡಿರುವ ವ್ಯಕ್ತಿಯೊಬ್ಬ ‘ನಿಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸುತ್ತೇನೆ’ ಎಂದು ಹೆದರಿಸಿದ್ದಾನೆ. ಬಳಿಕ ಮೊಬೈಲ್‌ನಲ್ಲಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದಾನೆ. ಅದರಂತೆ ದಿನೇಶ್ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಬಳಿಕ ಸ್ಕೈಪ್ ಕರೆ ಮಾಡಿರುವ ವಂಚಕರು, ವೆರಿಫಿಕೇಶನ್ ಹೆಸರಿನಲ್ಲಿ ದಿನೇಶ್ ಅವರ ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಖಾತೆಗಳ ವಿವರ ಪಡೆದಿದ್ದಾರೆ.
ಹಣ ಮರಳಿಸೋದಾಗಿ ಮೋಸ
ಬಳಿಕ ವಂಚಕರು ತಾವು ಸೂಚಿಸುವ ಖಾತೆಗೆ ಹಣ ಹಾಕುವಂತೆ ತಿಳಿಸಿ, ನೀವು ಜಮೆ ಮಾಡುವ ಹಣ ನಿಮ್ಮ ಖಾತೆಗೆ ಮರುಪಾವತಿಸುವುದಾಗಿ ಹೇಳಿ ಹಂತ-ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ .33.24 ಲಕ್ಷ ಜಮೆ ಮಾಡಿಸಿಕೊಂಡಿದ್ದಾರೆ. ನಂತರ ಸಂಪರ್ಕಕ್ಕೂ ಸಿಗದೇ, ಹಣವನ್ನೂ ಮರುಪಾವತಿಸಿದೇ ವಂಚಿಸಿದ್ದಾರೆ.
ಮಂಗಳೂರು: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ 4.89 ಲಕ್ಷ ರು. ವಂಚನೆ!
ಈ ವೇಳೆ ಅನುಮಾನಗೊಂಡು ಪರಿಶೀಲಿಸಿದಾಗ ತಾನು ಸೈಬರ್ ವಂಚಕರಿಂದ ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ವಂಚನೆ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ