ಪ್ರಧಾನಿ ಮೋದಿ ಸಫಾರಿ ಬಳಿಕ ಹೆಚ್ಚಾಯ್ತು ಬಂಡೀಪುರದ ಸಫಾರಿ ಆದಾಯ!

By Ravi Janekal  |  First Published Jun 24, 2023, 6:42 PM IST

 ಪ್ರಧಾನಿ ನರೇಂದ್ರ ಮೋದಿ ಸಫಾರಿ ಬಳಿಕ ಬಂಡೀಪುರದ ಚಾರ್ಮ್ ಮತ್ತಷ್ಟು ಬದಲಾಗಿದೆ. ಬಂಡೀಪುರ  ರಾಷ್ಟ್ರೀಯ  ಹುಲಿ  ಸಂರಕ್ಷಿತ  ಪ್ರದೇಶಕ್ಕೆ  ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಅರಣ್ಯ ಇಲಾಖೆಗೆ ಆದಾಯವೂ ಹೆಚ್ಚಾಗಿದ್ದು,ಈ ಕುರಿತ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ.


ವರದಿ - ಪುಟ್ಟರಾಜು. ಆರ್.ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ.

ಚಾಮರಾಜನಗರ (ಜೂ.24):  ಪ್ರಧಾನಿ ನರೇಂದ್ರ ಮೋದಿ ಸಫಾರಿ ಬಳಿಕ ಬಂಡೀಪುರದ ಚಾರ್ಮ್ ಮತ್ತಷ್ಟು ಬದಲಾಗಿದೆ. ಬಂಡೀಪುರ  ರಾಷ್ಟ್ರೀಯ  ಹುಲಿ  ಸಂರಕ್ಷಿತ  ಪ್ರದೇಶಕ್ಕೆ  ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಅರಣ್ಯ ಇಲಾಖೆಗೆ ಆದಾಯವೂ ಹೆಚ್ಚಾಗಿದ್ದು,ಈ ಕುರಿತ ಸಂಪೂರ್ಣ ಡೀಟೈಲ್ಸ್ ಇಲ್ಲಿದೆ ನೋಡಿ.

Tap to resize

Latest Videos

undefined

ಹೌದು ಚಾಮರಾಜನಗರ(Chamarajanagara) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ(Bandipur National Tiger Reserve)ವಾಗಿ 50 ವರ್ಷ ಪೂರೈಸಿದ್ದು, ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಬಂಡೀಪುರಕ್ಕೆ ಭೇಟಿ ನೀಡಿ ಎರಡು ತಾಸುಗಳ ಕಾಲ ಸಫಾರಿ ನಡೆಸಿದ್ದರು. ಅಲ್ಲದೇ ಹುಲಿ ವಾಸ ಮಾಡಲೂ ದೇಶದ ಎರಡನೇ ಅತ್ಯುತ್ತಮ ಪ್ರದೇಶವೆಂಬ ಹೆಮ್ಮೆಯೂ ಬಂಡೀಪುರಕ್ಕೆ ಇದೆ.ಈ ಎಲ್ಲ ಕಾರಣಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. 

3 ದಿನಗಳಿಂದ ಬಂಡೀಪುರದಲ್ಲಿ ಕುಟುಂಬದ ಜೊತೆ ಸಫಾರಿ ಮಾಡುತ್ತಿರುವ ಯಶ್!

ಪ್ರತಿದಿನ ಎರಡು ಸಾವಿರ ಪ್ರವಾಸಿಗರು(Tourists) ಭೇಟಿ ನೀಡುತ್ತಿದ್ದು, ವಾರಾಂತ್ಯದಲ್ಲಿ ಸಫಾರಿ(Safari)ಗಾಗಿ ಬರುವವರ ಸಂಖ್ಯೆ ಇನ್ನೂ ಹೆಚ್ಚಿದೆ.ಇದರಿಂದ ಪ್ರತಿದಿನ 7 ಲಕ್ಷಕ್ಕೂ ಹೆಚ್ಚಿನ ಆದಾಯ ಅರಣ್ಯ ಇಲಾಖೆಗೆ  ಬರುತ್ತಿದೆ.ಬಂಡಿಪುರದಲ್ಲಿ 31 ಸಫಾರಿ ಜೀಪ್ ಓಡಿಸಲು ಅವಕಾಶವಿದೆ.ಆದ್ರೆ ಇದುವರೆಗೆ ಅರಣ್ಯ ಇಲಾಖೆ 26 ಜೀಪ್ಗಳನ್ನು ಮಾತ್ರ ಬಳಸುತ್ತಿತ್ತು. ಇತ್ತೀಚೆಗಷ್ಟೇ 2 ಜೀಪ್, 2 ಬಸ್ ಹೊಸದಾಗಿ ಬಂದಿದ್ದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿದೆ.ಮೋದಿ ಭೇಟಿ ಬಳಿಕ ಆದಾಯ ಕೂಡ ಡಬಲ್ ಆಗ್ತಿದೆ..

ಇನ್ನೂ ಪ್ರಧಾನಿ ಮೋದಿ ಸಫಾರಿ ಬಳಿಕ ಬಂಡೀಪುರದ ಚಾರ್ಮ್ ಮತ್ತಷ್ಟು ಬದಲಾಗಿದೆ.ಪ್ರಧಾನಿ ಮೋದಿ 50 ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗುವ ಜೊತೆಗೆ ದೇಶದ ವಿವಿಧ ರಾಜ್ಯದ ಜನರಿಗೆ ಬಂಡೀಪುರವನ್ನು ಪರಿಚಯಿಸಿದರು.ಈ ಹಿನ್ನೆಲೆ ಪ್ರಧಾನಿ ಭೇಟಿ ನೋಡಿದ್ದನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ್ವಿ,ಆ ಹಿನ್ನಲೆ ನಾವೂ ಕೂಡ ಸಫಾರಿ ನಡೆಸಿ ಹೋಗೋಣ ಅಂತಾ ಇಲ್ಲಿಗೆ ಬಂದಿದ್ದೀವಿ ಅಂತಾರೆ ಪುಣೆಯಿಂದ ಬಂದ ಕನ್ನಡತಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆ ಶಂಕೆ: ಜೋಸೆಫ್‌ ಹೂವರ್‌ ಆರೋಪ.

ಒಟ್ಟಾರೆ ಪ್ರಧಾನಿ ಮೋದಿ ಸಫಾರಿ ಬಳಿಕ ದೇಶದ ವಿವಿಧ ರಾಜ್ಯ ಹಾಗೂ ರಾಜ್ಯದ ನಾನಾ ಮೂಲೆಗಳಿಂದಲೂ ಬಂಡೀಪುರಕ್ಕೆ ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.ಇದ್ರಿಂದ ಬಂಡೀಪುರಕ್ಕೆ ಬರುವ ಆದಾಯವೂ ಕೂಡ ಡಬಲ್ ಆಗಿದೆ ಅಂದ್ರೆ ತಪ್ಪೇನಿಲ್ಲ.

 ಚಿರತೆ ಸೆರೆಗಾಗಿ ಬೋನಿನಲ್ಲಿಟ್ಟಿದ್ದ ಮೇಕೆ ಕಳ್ಳರ ಪಾಲು 

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯಪುರ ಗ್ರಾಮದ ಬಳಿ ಚಿರತೆ ದಾಳಿ ನಡೆಸಿ ಕರು ಹಾಗು ಕುರಿಗಳನ್ನು ಸಾಯಿಸ್ತಾ ಇತ್ತು ಹಾಗಾಗಿ  ಚಿರತೆ ಸೆರೆ ಹಿಡಿಯಲು ಗ್ರಾಮದ ರೈತರು ಅರಣ್ಯ ಇಲಾಖೆಗೆ  ಒತ್ತಾಯಿಸಿದ್ದರು. ಅದರಂತೆ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಅರಣ್ಯಾಧಿಕಾರಿಗಳು  ಚಿರತೆ ಸೆರೆಗೆ ಬೋನು ಇರಿಸಿ ಸಂಜೆ ಬೋನಿಗೆ ಮೇಕೆ ಕಟ್ಟಿ ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಬಂದಿದ್ದರು. ಬೆಳಗ್ಗೆ ಬೋನಿನ ಹತ್ತಿರ ಹೋಗಿ ನೋಡಿದಾಗ   ಮೇಕೆ ಮಾಯವಾಗಿತ್ತು. ಚಿರತೆ ಏನಾದರೂ ಮೇಕೆಯನ್ನು ಎಳೆದುಕೊಂಡು ಹೋಗಿದೆಯಾ ಎಂದ್ರೆ ಚಿರತೆ ಬಂದಿದ್ದ ಕುರುಹು ಕೂಡ ಇಲ್ಲದಿದ್ದರಿಂದ ಕಳ್ಳರ ಕೈ ಚಳಕದಿಂದ   ಮೇಕೆಯನ್ನು ಬಿಚ್ಚಿಕೊಂಡು ಹೋಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು ತನಿಖೆ ಮುಂದುವರೆದಿದೆ..

click me!