
ಬೆಂಗಳೂರು (ಜೂ.24) ನಾನು ಸಾಹಿತಿ ಅಲ್ಲ, ಆದರೆ ಸಾಹಿತಿಗಳ ಜತೆ ಹೆಚ್ಚು ಒಡನಾಟವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದದ 20ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರಧಾನ ಸಮಾರಂಭ(20th Anniversary Awards Ceremony of Karnataka Kannada Writers and Publishers Association )ದಲ್ಲಿ ಮಾತನಾಡಿದ ಅವರು, ನಾನು ಸಾಹಿತಿ ಅಲ್ಲ ಸಾಹಿತಿಗಳ ಜೊತೆ ಒಡನಾಟವಿದೆ. ನಾನು ಯಾವತ್ತೂ ಬರೆದಿಲ್ಲ ಅದ್ರೆ ಬರೆದದ್ದನ್ನ ಒದಿಕೊಂಡಿದ್ದೇನೆ. ತೇಜಸ್ವಿ ಅನಂತಮೂರ್ತಿ ಜೊತೆ ಒಡನಾಟ ಬೆಳಸಿಕೊಂಡಿದ್ದೆ. ಪಾಟೀಲ್ ಪುಟ್ಟಪ್ಪನವರು ಬಹಳ ಆತ್ಮಿಯರು. ಹಂ.ಪ ನಾಗರಾಜಯ್ಯ, ಮಲ್ಲಿಕಾ ಗಂಟಿ ಜೊತೆಯೂ ಒಡನಾಟವಿದೆ. ಈ ಕಾರ್ಯಕ್ರಮದಲ್ಲಿ ಬಹಳ ಸಂತೋಷದಿಂದ ಭಾಗಿಯಾಗಿದ್ದೇನೆ ಎಂದು ಪ್ರಶಸ್ತಿ ಪುರಸ್ಕೃತರರಿಗೆ ಅಭಿನಂದನೆ ಸಲ್ಲಿಸಿದರು.
ಬರಹಗಾರ ಪ್ರಕಾಶಕರೂ ಇದ್ರೇನೇ ಪುಸ್ತಕೋದ್ಯಮ:
ಬರಹಗಾರ ಮತ್ತು ಪ್ರಕಾಶಕರು ಇದ್ರೆನೇ ಪುಸ್ತಕೋಧ್ಯಮ ಬೆಳೆಯಲು ಸಾಧ್ಯ. ನಮಗೆ ಇಂಗ್ಲಿಷ್ ಮೇಷ್ಟ್ರಿದ್ರು. ಅವರು Democracy ಮತ್ತು individual ಪಾಠ ಮಾಡ್ತಿದ್ದರು. ಅವರು ಇಂಗ್ಲಿಷ್ ಮೇಷ್ಟ್ರಾದ್ರು ಕನ್ನಡದ ಮೇಲೆ ಪ್ರೀತಿ ಇತ್ತು. ನಮ್ಮ ಜೊತೆ ಸಾಕಷ್ಟು ಒಡನಾಟವಿತ್ತು.ಅವರಿಗೆ ತೇಜಸ್ವಿ ಜೊತೆ ಸಾಕಷ್ಟು ಒಡನಾಟವಿತ್ತು ಎಂದರು.
ಸಮಾಜದಲ್ಲಿ ಜಾತಿ ಸಂಸ್ಕೃತಿಯಿಂದ ಸಾಕಷ್ಟು ಜನ ಅಕ್ಷರಕಲಿಕೆಯಿಂದ ವಂಚಿತರಾದ್ರು. ಈ ಅಸಮಾನತೆ ತೊಲಗುವತನಕ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.ಇದನ್ನ ಸಂವಿಧಾನದಲ್ಲಿ ಅಂಬೇಡ್ಕರ್ ಅವರೇ ಹೇಳಿದ್ದಾರೆ. ಸಮಾಜದಲ್ಲಿನ ಅನೇಕ ನ್ಯೂನತೆಗಳನ್ನ ತಗೆದುಹಾಕಬೇಕು.ಎಲ್ಲಿಯತನಕ ಅಸಮಾನತೆ ಇರುತ್ತೆ ಅಲ್ಲಿಯತನಕ ದೇಶ ಏಳಿಗೆ ಆಗಿದೆ ಎಂದು ಹೇಳಲಾಗದು ಒಬ್ಬ ವ್ಯಕ್ತಿ ಒಂದು ವೋಟು ಒಂದು ಮೂಲ್ಯ ಅಂತ ಮಾಡಿದ್ದೇವೆ.. ಅದ್ರೆ ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ ಇದು ಇಲ್ಲ ಎಂದರು.
ಅಂಬೇಡ್ಕರ್ ನವರು ಇದ್ರ ಬಗ್ಗೆ 1949 ರಲ್ಲಿ ಭಾಷಣ ಮಾಡಿದ್ರು.. ಜ್ಞಾನ ಬೆಳಯಬೇಕಾದ್ರೆ ಪುಸ್ತಕ ಒದಬೇಕು. ಓದು ಬಾಳ ಸಂಗಾತಿ ಇದ್ದ ಹಾಗೇ. ಯಾರೂ ಸರ್ವಜ್ಞರಲ್ಲ. ಶಾಲಾ ಕಾಲೇಜು ಗೆ ಹೋದ್ರೆ ಅಷ್ಟೇ ಸಾಲದು.. ಪುಸ್ತಕವನ್ನ ಓದಬೇಕು ಜ್ಞಾನ ಬೆಳೆಯುತ್ತೆ ಎಂದರು. ಇದೇ ವೇಳೆ ಎರಡು ವರ್ಷಗಳಿಂದ ಪುಸ್ತಕ ಖರೀದಿ ಮಾಡಿಲ್ಲ ಹಾಗೂ ಸಂಘಕ್ಕೆ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ನಮ್ ತೊಂದರೆ ಗಮನದಲ್ಲಿಟ್ಟುಕೊಳ್ಳಿ ಎನ್ನುವ ಮೂಲಕ ಅನುದಾನ ನೀಡುವುದಕ್ಕೆ ಆಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು.
ಸಾಹಿತಿಗಳು ನಮ್ಮ ಸರ್ಕಾರದಲ್ಲಿ ಹೆದರಬೇಕಿಲ್ಲ:
59 ಸಾವಿರ ಕೋಟಿ ಗ್ಯಾರಂಟಿ ಯೋಜನೆ ಗಳಿಗೆ ಹಣ ಬೇಕು. ಜುಲೈ ನಲ್ಲಿ ಬಜೆಟ್ ಮಂಡಿಸಬೇಕಿದೆ. ಜನರಿಗೆ ವಾಗ್ದಾನ ಮಾಡಿದ್ದನ್ನ ನಾವು ಈಡೇರಿಸಬೇಕಿದೆ. ಈಗಾಗಲೇ 5 ಗ್ಯಾರಂಟಿಗಳಲ್ಲಿ ಒಂದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಯಾರು ಹೇಳಿದ್ದನ್ನ ಮಾಡಿಲ್ವೋ ಅವರು ಈಗ ಟೀಕೆ ಮಾಡ್ತಿದ್ದಾರೆ. 15 ಲಕ್ಷ ಹಾಕ್ತೀವಿ ಅಂದ್ರು ಹಾಕಿದ್ರಾ? ಅಚ್ಚೇ ದಿನ್ ಅಂತ ಹೇಳಿದ್ರು ಬಂತಾ? ಯಡಿಯೂರಪ್ಪ ನವರು ಹೇಳಿದ್ದ ಗಮನಿಸಿದೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ ಅಂತ ಪ್ರತಿಭಟನೆ ಮಾಡ್ತೀವಿ ಅಂತ ಹೇಳಿದ್ದಾರೆ.. ಇದಕ್ಕೆ ನಗಬೇಕೋ ಏನ್ ಅನ್ನ ಬೇಕು..
ಅವರು ಅಧಿಕಾರದಲ್ಲಿದ್ದಗ ಅವರು ಕೊಟ್ಟ ಭರವಸೆಗಳನ್ನ ಈಡಿರಿಸದ್ರಾ? ಅವರಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು
ನಾನೇನಾದ್ರು ನಮ್ ಅಪ್ಪನ ಮನೆಯಿಂದ ಕೊಡ್ತಿದ್ದೀನಾ? ಸರ್ಕಾರದಿಂದ ಕೊಡ್ತಿದ್ದೇವೆ. ಎಚ್ಚರಿಕೆಯಿಂದ ಕೊಡಬೇಕು.. 200 ಯೂನಿಟ್ ಸಹ ಕೊಡ್ತೀವಿ ಅಂತ ಹೇಳಿದ್ದೇವೆ ಕೊಡ್ತೀವಿ. ಅದ್ರೆ ಇದಕ್ಕೆ ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡ್ತಿದ್ದಾರೆ ಅಷ್ಟೇ... ಸಾಹಿತಿಗಳು ಅಂದ್ರೆ ನನಗೆ ಅಪಾರ ಗೌರವ ನನಗೆ.. ಅದಕ್ಕೆ ನಿಮ್ ಮುಂದೆ ಹೇಳುತ್ತಿದ್ದೇನೆ. ಮಲಿಕಾ ಗಂಟಿ ಯವರು ಮಾತನಡಲು ಹೆದರಿಕೆ ಅಂತ ಹೇಳಿದ್ರು.
ಅದಕ್ಕೆ ನಾನು ಹೇಳ್ತಿದ್ದೇನೆ ಯಾರು ಹೆದರಿಕೆಗೊಳ್ಳಬೇಕಿಲ್ಲ. ನಮ್ಮ ಸರ್ಕಾರದಲ್ಲಿ ವಾಕ್ ಸ್ವತಂತ್ರಕ್ಕೆ ಅವಕಾಶವಿದೆ.. Freedom of speech ಗೆ ದಕ್ಕೆ ಯಾಗಲು ಬಿಡೋದಿಲ್ಲ..ಯಾರು ಹೆದರಿಕೊಳ್ಳುವ ಅಗತ್ಯವಿಲ್ಲ ಎಂದು ಅಭಯ ನೀಡಿದ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ