Shivamogga: ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ಮಧ್ಯೆ ಜಗ​ಳ: ಪೊಲೀಸ್‌ ಬಂದೋ​ಬಸ್ತ್ ಬಿಸಿ

By Govindaraj S  |  First Published Jun 26, 2023, 8:36 AM IST

ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿ​ನ ಯುವ​ಕರ ಮಧ್ಯೆ ಹೊಡೆ​ದಾಟ ನಡೆ​ದ ಘಟನೆ ಇಲ್ಲಿ​ನ ಟಿಪ್ಪು ನಗರದಲ್ಲಿ ಭಾನುವಾರ ತಡ​ರಾತ್ರಿ ನಡೆ​ದಿದ್ದು, ಇದ​ರಿಂದಾಗಿ ಸೂಕ್ಷ್ಮ ಪ್ರೆದೇ​ಶ​ದಲ್ಲಿ ಹೆಚ್ಚಿನ ಬಿಗಿ ಪೊಲೀಸ್‌ ಬಂದೋ​ಬಸ್ತ್ ಏರ್ಪ​ಡಿ​ಸ​ಲಾ​ಗಿದೆ.


ಶಿವಮೊಗ್ಗ (ಜೂ.26): ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿ​ನ ಯುವ​ಕರ ಮಧ್ಯೆ ಹೊಡೆ​ದಾಟ ನಡೆ​ದ ಘಟನೆ ಇಲ್ಲಿ​ನ ಟಿಪ್ಪು ನಗರದಲ್ಲಿ ಭಾನುವಾರ ತಡ​ರಾತ್ರಿ ನಡೆ​ದಿದ್ದು, ಇದ​ರಿಂದಾಗಿ ಸೂಕ್ಷ್ಮ ಪ್ರೆದೇ​ಶ​ದಲ್ಲಿ ಹೆಚ್ಚಿನ ಬಿಗಿ ಪೊಲೀಸ್‌ ಬಂದೋ​ಬಸ್ತ್ ಏರ್ಪ​ಡಿ​ಸ​ಲಾ​ಗಿದೆ.

ಗೋಪಾಳ ವಿನಾಯಕ ಸರ್ಕಲ್‌ನಲ್ಲಿ ನಿಂತಿದ್ದ ಶೇಷಣ್ಣ ಎಂಬುವವನ ಬೈಕಿನ ಮಿರರ್‌ಗೆ ಆಟೋ ಬಾಬು ಇತರೆ ಮುಸ್ಲಿಂ ಹುಡುಗರು ಇದ್ದ ಪ್ಯಾಸೆಂಜರ್‌ ಆಟೋ ಟಚ್‌ ಆಗಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಬಜರಂಗದಳದ ಜಿತೇಂದ್ರ ಮತ್ತು ಸಂದೇಶ ಎಂಬುವರು ಬೈಕ್‌ನಲ್ಲಿ ಆಟೋ ಬೆನ್ನಟ್ಟಿಶಾದಿ ಮಹಲ್‌ ಬಳಿ ಆಟೋ ತಡೆದಿದ್ದಾರೆ. ಅಷ್ಟರೊಳಗೆ 10 ಜನ ಮುಸ್ಲಿಂ ಹುಡುಗರು ಸೇರಿಕೊಂಡು ಇಟ್ಟಿಗೆ ಮತ್ತು ಕೈಯಿಂದ ಸಂದೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಸಂದೇಶ್‌ ಕಣ್ಣಿಗೆ ಪೆಟ್ಟಾಗಿದ್ದು ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Tap to resize

Latest Videos

ಅಭಿಮಾನಿಗಳ ಜತೆ ಕುಣಿದು ಕುಪ್ಪಳಿಸಿದ ವೈಎಸ್‌ವಿ ದತ್ತ: ಡಾ.ರಾಜ್‌ ಹಾಡಿಗೆ ನೃತ್ಯ

ಮತ್ತೊಬ್ಬನ ಮೇಲೆ ಹಲ್ಲೆ: ಗಾಯಳು ಸಂದೇಶ್‌ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ವಿಜಯ್‌ ಕುಮಾರ್‌ ಎಂಬಾತನ ಮೇಲೆ ಹಲ್ಲೆಯಾಗಿರುವ ಮತ್ತೊಂದು ಘಟನೆ ನಡೆದಿದೆ. ವಿಜಯ್‌ ಕುಮಾರ್‌ಗೆ ತಾರ್ಸೀ ಎಂಬಾತ ಕರೆ ಮಾಡಿ ದ್ರೌಪದಮ್ಮ ಸರ್ಕಲ್‌ ಬಳಿ ಬರಲು ತಿಳಿಸಿದ್ದಾನೆ. ತಾರ್ಸೀ ನನ್ನು ಕಾಣಲು ಸ್ನೇಹಿತನೊಂದಿಗೆ ಹೋಗಿದ್ದ ವಿಜಯ್‌ ಕುಮಾರ್‌ ನನ್ನು ತಾರ್ಸೀ ಹಾಗೂ ಆತನ ಸ್ನೇಹಿತರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಜಯ್‌ ಕುಮಾರ್‌ಗೆ ತಾರ್ಸೀ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ವಿಜಯ್‌ ಕುಮಾರ್‌ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಹಾಗೂ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ: ಮಾಜಿ ಸಚಿವ ವಿ.ಸೋಮಣ್ಣ

ಎರಡು ಕೋಮಿನ ಯುವಕರ ಮಧ್ಯೆ ಹೊಡೆದಾಟ ಹಾಗೂ ಚಾಕು ಇರಿತದ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪ​ಡಿ​ಸ​ಲಾ​ಗಿದ್ದು, ಹೊರ ಜಿಲ್ಲೆಗಳಿಂದಲೂ ಶಿವಮೊಗ್ಗ ನಗರಕ್ಕೆ ಪೊಲೀಸರು ಆಗಮಿಸಿದ್ದಾರೆ. ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪ​ಡಿ​ಸ​ಲಾ​ಗಿದೆ. ಇನ್ನು  ಇಂದು ಬೆಳಗ್ಗೆ 10:30 ಕ್ಕೆ ಶಿವಮೊಗ್ಗಕ್ಕೆ ಎಡಿಜಿಪಿ ಹಿತೇಂದ್ರ ಕುಮಾರ್ ಆಗಮಿಸಲಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ಐಜಿಪಿ ತ್ಯಾಗರಾಜನ್ ಮೊಕ್ಕಾಂ ಹೂಡಿದ್ದಾರೆ. ಕಳೆದ ರಾತ್ರಿಯಿಂದಲೇ ಶಿವಮೊಗ್ಗದ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದೆ.

click me!