ತರಕಾರಿ ಆಯ್ತು, ಈಗ ಬೇಳೆ, ಅಕ್ಕಿ ಬಲು ದುಬಾರಿ: ಜನಸಾಮಾನ್ಯರು ಹೈರಾಣು..!

Published : Jun 26, 2023, 04:44 AM ISTUpdated : Jun 26, 2023, 12:17 PM IST
ತರಕಾರಿ ಆಯ್ತು, ಈಗ ಬೇಳೆ, ಅಕ್ಕಿ ಬಲು ದುಬಾರಿ: ಜನಸಾಮಾನ್ಯರು ಹೈರಾಣು..!

ಸಾರಾಂಶ

ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಮುಂದಿನ ನಾಲ್ಕು ತಿಂಗಳವರೆಗೂ ಬೆಲೆ ಏರಿಕೆ ಮುಂದುವರಿಯಬಹುದು ಅಥವಾ ತುಸು ಹೆಚ್ಚು ಕಡಿಮೆಯಾಗಬಹುದೆಂದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ. 

ಬೆಂಗಳೂರು(ಜೂ26):  ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆಯಿಂದ ಶ್ರೀಸಾಮಾನ್ಯನ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಖಾದ್ಯ ತೈಲ ಬೆಲೆ ಇಳಿಕೆಯಿಂದ ಕೊಂಚ ನಿಟ್ಟುಸಿರು ಬಿಡುತ್ತಿದ್ದ ಜನರನ್ನು ಈಗ ಅಕ್ಕಿ, ಬೇಳೆಕಾಳುಗಳ ಬೆಲೆ ಏರಿಕೆ ಕಂಗಾಲಾಗುವಂತೆ ಮಾಡಿದೆ. ಬೇಳೆಕಾಳುಗಳ ಬೆಲೆ ಹದಿನೈದು ದಿನಗಳಿಂದ ದಿಢೀರ್‌ ಏರಿದ್ದರೆ, ಅಕ್ಕಿ 2 ರು.ನಿಂದ ಆರಂಭವಾಗಿ ಈಗ ಸುಮಾರು 10​​-12 ರು.ವರೆಗೆ ಹೆಚ್ಚಳವಾಗಿದೆ. ಒಂದು ತಿಂಗಳ ಅಂತರದಲ್ಲೇ ಬೇಳೆಕಾಳುಗಳ ಬೆಲೆ 20​-.30 ರವರೆಗೂ ಏರಿಕೆಯಾಗಿದೆ.

ಏರಿಕೆಯಾಗುತ್ತಿರುವ ಅಕ್ಕಿ, ಬೇಳೆಕಾಳುಗಳ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಮುಂದಿನ ನಾಲ್ಕು ತಿಂಗಳವರೆಗೂ ಬೆಲೆ ಏರಿಕೆ ಮುಂದುವರಿಯಬಹುದು ಅಥವಾ ತುಸು ಹೆಚ್ಚು ಕಡಿಮೆಯಾಗಬಹುದೆಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಅರ್ಧಗಂಟೆ ಬೇಡಿದರೂ ಒಂದು ಹಿಡಿ ಅಕ್ಕಿ ಕೊಡದ ಕೇಂದ್ರ ಸರ್ಕಾರ: ಬರಿಗೈಲಿ ಬಂದ ಸಚಿವ ಮುನಿಯಪ್ಪ

ಬೇಳೆ ಪೂರೈಕೆ ಕಡಿಮೆ:

ದೇಶಾದ್ಯಂತ ಬೇಳೆಗಳ ಅಭಾವ ಇದೆ. ಥಾಯ್ಲೆಂಡ್‌, ಇಂಡೋನೇಷ್ಯಾ ಸೇರಿ ಇತರೆಡೆಯಿಂದ ಬೇಳೆಕಾಳುಗಳ ಆಮದು ಶೇ. 30ರಷ್ಟುಕಡಿಮೆಯಾಗಿದೆ. ರಾಜ್ಯಕ್ಕೆ ಮಧ್ಯಪ್ರದೇಶದಿಂದ ಹೆಚ್ಚಾಗಿ ತೊಗರಿಬೇಳೆ ಬರುತ್ತದೆ. ಇದು ಕೂಡ ಕಡಿಮೆಯಾಗಿದೆ. ಹಿಂದೆ ಮಳೆ ಅಭಾವ, ಮಳೆ ವೈಪರೀತ್ಯದಿಂದ ಕಲಬುರಗಿಯಲ್ಲಿ ತೊಗರಿ ನಾಶವಾಗಿದೆ. ಇವೆಲ್ಲ ಕಾರಣದಿಂದ ವರ್ತಕರು ಲಭ್ಯವಿರುವಷ್ಟುಬೇಳೆಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಹೆಚ್ಚು ಒತ್ತು ಕೊಡುತ್ತಿದ್ದಾರೆ. ಮಾರುಕಟ್ಟೆಗೆ ಅಲ್ಪ ಪ್ರಮಾಣದಲ್ಲಿ ಬೇಳೆಕಾಳು ಬರುತ್ತಿರುವುದು ದರ ಏರಿಕೆಗೆ ಕಾರಣವಾಗಿದೆ.

ಅಕ್ಕಿ ಕೊಡಲು ಹಿಂದೇಟು:

ರಾಜ್ಯಕ್ಕೆ ಅಕ್ಕಿ ಪೂರೈಸುವ ಪಂಜಾಬ್‌, ತೆಲಂಗಾಣ, ಆಂಧ್ರಪ್ರದೇಶಗಳು ಸದ್ಯಕ್ಕೆ ನೀಡಲು ಹಿಂದೇಟು ಹಾಕುತ್ತಿವೆ ಎಂದು ಯಶವಂತಪುರ ಎಪಿಎಂಸಿ ವರ್ತಕರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಅಕ್ಕಿ ಅಭಾವ ಇದೆ ಎಂದು ತಿಳಿದಾಕ್ಷಣ ಅವು ಅಕ್ಕಿ ಪೂರೈಕೆ ಮಾಡಲು ಹಿಂದೇಟು ಹಾಕುತ್ತಿವೆ. ಆಂಧ್ರದಲ್ಲಿಯೂ ಅಕ್ಕಿ ಕೊರತೆ ಇದೆ. ಆದರೆ ಅಲ್ಲಿ ನಮಗಿಂತ ಒಂದು ತಿಂಗಳು ಮೊದಲು ಮೊದಲ ಬೆಳೆ ಬರುತ್ತದೆ. ರಾಜ್ಯದಲ್ಲಿ ನವೆಂಬರ್‌ನಲ್ಲಿ ಮೊದಲ ಬೆಳೆ ನಿರೀಕ್ಷಿಸಬಹುದು. ಅಲ್ಲಿವೆರೆಗೆ ದರ ಏರಿಕೆ ಹೆಚ್ಚಬಹುದು ಎಂದು ತಿಳಿಸಿದರು.

ಅಕ್ಕಿ 20 ರು.ವರೆಗೂ ದುಬಾರಿ

ಆರ್‌ಎನ್‌ಆರ್‌ ಸ್ಟೀಮ್‌ ಎರಡು ತಿಂಗಳ ಹಿಂದೆ ಪ್ರತಿ ಕೇಜಿಗೆ ​​​.38- .40 ಇತ್ತು. ಈಗ .50ಗೇರಿದೆ. ರಾ ರೈಸ್‌ . 55 ಇದೆ. ಸೋನಾ ಮಸೂರಿ ಸ್ಟೀಮ್‌ . 55-56, ರಾ ರೈಸ್‌ . 55-58 ಇದೆ. ಇನ್ನು ಕೋಲಮ್‌ (ಬುಲೆಟ್‌ ರೈಸ್‌) . 72-73ಕ್ಕೆ ಏರಿಕೆಯಾಗಿದೆ. ಇದು ಹಿಂದೆ . 52-55 ಇತ್ತು. ಈ ಬೆಲೆ ಇನ್ನೂ ಹೆಚ್ಚಳವಾಗಲಿದೆ ಎಂದು ವರ್ತಕರು ತಿಳಿಸಿದ್ದಾರೆ.

ಟೊಮೆಟೋ ಬೆಲೆ ಹೆಚ್ಚಳ

ತಿಂಗಳ ಹಿಂದೆ ಕೇಜಿಗೆ .20- .25 ಇದ್ದ ಟೊಮೆಟೋ ಬೆಲೆ ಈಗ ಮೂರು ಪಟ್ಟು ಹೆಚ್ಚಾಗಿದೆ. ಭಾನುವಾರ ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮೆಟೋ ಸಗಟು ದರ . 60-80 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 100 ರು. ಸನಿಹಕ್ಕೆ ತಲುಪಿದೆ. ಪೂರೈಕೆ ತೀರಾ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವರ್ತಕರು ಹೇಳಿದರು. ಹಾಪ್‌ಕಾಮ್ಸ್‌ನಲ್ಲಿ ಈಗಾಗಲೇ ಬೀನ್ಸ್‌, ನುಗ್ಗೇಕಾಯಿ ಶತಕ ದಾಟಿವೆ.

ಮಳೆ ಅಭಾವ ಕಾರಣದಿಂದ ನವೆಂಬರ್‌ವರೆಗೂ ಇದೇ ರೀತಿ ಬೆಲೆ ಏರಿಕೆ ಮುಂದುವರಿವ ಸಾಧ್ಯತೆ ಇದೆ. ಮಳೆ ಅಭಾವ, ಅಕ್ಕಿ, ಬೇಳೆ ಕಾಳುಗಳ ದಾಸ್ತಾನು ಮಾಡಿಟ್ಟುಕೊಳ್ಳುವ ಅನಿವಾರ್ಯತೆ, ರಫ್ತಿನ ವಿಚಾರದಲ್ಲಿ ಎಡವಿರುವುದು ಇದಕ್ಕೆ ಕಾರಣ ಅಂತ ಬೇಳೆ ಕಾಳು ವರ್ತಕರ ಸಂಘದ ಕಾರ್ಯದರ್ಶಿ ಸಾಯಿರಾಮ್‌ ಪ್ರಸಾದ್‌ ತಿಳಿಸಿದ್ದಾರೆ. 

ಜುಲೈಗಿಲ್ಲ ಅನ್ನಭಾಗ್ಯ, ಪ್ಲಾನ್ "ಸಿ" ವರ್ಕ್ ಆಗುತ್ತಾ?: ಅಕ್ಕಿವ್ಯೂಹ ಭೇದಿಸ್ತಾರಾ ಸಿಎಂ ಸಿದ್ದು ?

ದರ ಏರಿಕೆಯಿಂದ ಹೋಟೆಲ್‌, ಕೇಟರಿಂಗ್‌ ಉದ್ಯಮ ಕಂಗಾಲಾಗಿದೆ. ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಜನಸಾಮಾನ್ಯರಿಗೆ ತೊಂದರೆ ಆಗಲಿದೆ ಅಂತ ಬೃಹತ್‌ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ ಪಿ.ಸಿ.ರಾವ್‌ ಹೇಳಿದ್ದಾರೆ. 

ಬೇಳೆ ಕಾಳು ಬೆಲೆ 3 ತಿಂಗಳ ಹಿಂದೆಷ್ಟು, ಈಗೆಷ್ಟು?: ಬಾಕ್ಸ್‌ ಹಳೆ ದರ ಹೊಸ ದರ

ತೊಗರಿಬೇಳೆ .110 .160
ಉದ್ದಿನಬೇಳೆ .110 .135
ಮಸೂರ್‌ ದಾಲ್‌ .84 .110
ಹೆಸರುಬೇಳೆ .120 .140
ಅಲಸಂದೆ .85 .100
ಅರಿಶಿನ .126 .180
ಜೀರಿಗೆ .350 .600
ಮೆಣಸಿನಪುಡಿ .186 .400+
ದನಿಯಾ ಪೌಡರ್‌ .150 .218
ಕಾಳುಮೆಣಸಿನ ಪುಡಿ .380 .520
ಬ್ಯಾಡಗಿ ಮೆಣಸು .330 .850

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!