ಖರ್ಗೆ ಬಗ್ಗೆ ಆರಗ ಬಣ್ಣದ ಮಾತು, ಆ ರೀತಿ ಮಾತನಾಡಬಾರದಿತ್ತು: ಜೋಶಿ

By Kannadaprabha NewsFirst Published Aug 6, 2023, 12:07 PM IST
Highlights

 ಯಾವುದೇ ವ್ಯಕ್ತಿಯ ಮೈ ಬಣ್ಣ, ಪ್ರದೇಶ ನೋಡಿ ಮಾತನಾಡುವುದು ಸರಿಯಲ್ಲ. ಹೀಗಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಮಾಜಿ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೆ ನಮ್ಮ ವಿರೋಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

 ಹುಬ್ಬಳ್ಳಿ (ಆ.6) :  ಯಾವುದೇ ವ್ಯಕ್ತಿಯ ಮೈ ಬಣ್ಣ, ಪ್ರದೇಶ ನೋಡಿ ಮಾತನಾಡುವುದು ಸರಿಯಲ್ಲ. ಹೀಗಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಮಾಜಿ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೆ ನಮ್ಮ ವಿರೋಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಖರ್ಗೆಯವರ ಕುರಿತು ಮಾಜಿ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಆರಗ ಜ್ಞಾನೇಂದ್ರ ಅವರ ಬೇಡಿಕೆಗೆ ನಮ್ಮ ಸಮ್ಮತಿ ಇದೆ. ಆದರೆ, ಅವರ ಹೇಳಿಕೆಗೆ ನಮ್ಮ ವಿರೋಧವಿದೆ. ಖರ್ಗೆಯವರ ಬಗ್ಗೆ ಜ್ಞಾನೇಂದ್ರ ಅವರು ಆ ರೀತಿ ಮಾತನಾಡಬಾರದಿತ್ತು. ರಾಜಕೀಯ ವಿಚಾರವಾಗಿ ಖರ್ಗೆ ಮತ್ತು ನಮ್ಮ ನಡುವೆ ಸಾಕಷ್ಟುಭಿನ್ನಾಭಿಪ್ರಾಯವಿದೆ. ಆದರೆ, ವೈಯಕ್ತಿಕವಾಗಿ ಖರ್ಗೆ ಅನುಭವ, ಹಿರಿತನದ ಬಗ್ಗೆ ನಮಗೆ ಗೌರವವಿದೆ. ಯಾವುದೇ ವ್ಯಕ್ತಿಯ ಮೈ ಬಣ್ಣ, ಪ್ರದೇಶ ನೋಡಿ ಮಾತನಾಡುವುದು ಸರಿಯಲ್ಲ. ಈ ಕುರಿತು ನಾನು ಜ್ಞಾನೇಂದ್ರ ಅವರಿಗೆ ತಿಳಿ ಹೇಳುತ್ತೇನೆ ಎಂದರು.

Latest Videos

ಕರ್ನಾಟಕದಲ್ಲಿ ಅಭಿವೃದ್ಧಿಯೇ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಸರ್ಕಾರದಲ್ಲಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಹರಾಜು

ವರ್ಗಾವಣೆ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಹುದ್ದೆಗೂ ದೊಡ್ಡಮಟ್ಟದ ಹರಾಜು ನಡೆಯುತ್ತಿದೆ. ಅನುಮಾನವೇ ಇಲ್ಲ. ಅತ್ಯಂತ ಭ್ರಷ್ಟಸರ್ಕಾರ ಇದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಮುಗಿದಿಲ್ಲ. ಮಳೆಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಡುತ್ತಿಲ್ಲ. ರಸ್ತೆ ಕೆಟ್ಟಿವೆ ಯಾವುದೇ ಬಗೆಯ ಅಭಿವೃದ್ಧಿ ಮಾಡಿಲ್ಲ. ಬರೀ ವರ್ಗಾವಣೆ ದಂಧೆಯಲ್ಲಿ ಈ ಸರ್ಕಾರ ತೊಡಗಿದೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪವನ್ನು ಸಮರ್ಥಿಸಿಕೊಂಡರು.

ಚುನಾವಣೆ ಗೆಲ್ಲಲು ಗ್ಯಾರಂಟಿ ಅನೌನ್ಸ್‌ ಮಾಡಿದ್ದರು. ಆ ಗ್ಯಾರಂಟಿಗೆ ನೂರೆಂಟು ಕಂಡೀಷನ್‌ ಹಾಕಿ, ಇವತ್ತು ಅದನ್ನು ಸರಿಯಾಗಿ ಕೊಡುತ್ತಿಲ್ಲ. ಸಂಪೂರ್ಣ ಅಭಿವೃದ್ಧಿ ಬಂದ್‌ ಆಗಿದೆ. ಭ್ರಷ್ಟಾಚಾರ ಒಂದು ರೀತಿಯಲ್ಲಿ ಮುಗಿಲು ಮುಟ್ಟಿದೆ. ಫ್ರೀ ಅಂತಾರೆ, ಬಸ್‌ಗಳು ಸಂಚರಿಸಲು ರಸ್ತೆ ಬೇಕಲ್ಲ. ಗೊಂದಲ, ಜನ ವಿರೋಧಿ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೃಹ ಜ್ಯೋತಿ ಬರುವ ಮುಂಚೆ ವಿದ್ಯುತ್‌ ಬಿಲ್‌ ಜಾಸ್ತಿ ಮಾಡಿದ್ದರು. ಕಂಡೀಷನ್‌ ಹಾಕಿ ಕೊಡುವಂತಹದ್ದು ಏನಿದೆ? ಭಾರತ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲ್ಲನ್ನು ಉತ್ಪಾದನೆ ಮಾಡಿ, ದೇಶದಲ್ಲಿ ಹೆಚ್ಚು ವಿದ್ಯುತ್‌ ಉತ್ಪಾದನೆ ಮಾಡಲು ರಾಜ್ಯಗಳಿಗೂ ನಾವು ಕೊಟ್ಟಂತ ಪೋ›ತ್ಸಾಹ ಕಾರಣವಿದೆ. ಅದನ್ನು ನಾವೇ ಕೊಡುತ್ತೇವೆ ಅಂಥ ಹೇಳುವ ರೀತಿಯಲ್ಲಿ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸವನ್ನು ಸಂಪೂರ್ಣ ಮರೆಮಾಚಿದ್ದಾರೆ. ಜನ ಸೂಕ್ತ ಉತ್ತರ ನೀಡುತ್ತಾರೆ ಎಂದರು.

ಕ್ರಿಮಿನಲ್‌ಗಳಿಗೆ ಧೈರ್ಯ, ಜನರಲ್ಲಿ ಭಯ:

ವಿಡಿಯೋ ಚಿತ್ರೀಕರಣ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗೊಮ್ಮೆ ಹಿಂದೂ ವಿರೋಧಿ ಕ್ರಿಮಿನಲ್ಸ್‌ಗಳಿಗೆ ಧೈರ್ಯ ಬರುತ್ತದೆ. ಅವರು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಇದು ತುಷ್ಟಿಕರಣ ರಾಜಕಾರಣದ ಪರಿಣಾಮ ಎಂದ ಹುಬ್ಬಳ್ಳಿ ಖಾಸಗಿ ಕಾಲೇಜಿನ ಇನ್ಸಾ$್ಟಗ್ರಾಮ್‌ ಪೋಸ್ಟ್‌ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಹುಬ್ಬಳ್ಳಿ, ಉಡುಪಿಗಳಲ್ಲಿಯೂ ಆಗಿದೆ. ನಮ್ಮ ಹೆಣ್ಣು ಮಕ್ಕಳ, ವಿದ್ಯಾರ್ಥಿನಿಯರ ಫೋಟೋಗಳನ್ನು ಎಡಿಟ್‌ ಮಾಡಿ ಅಶ್ಲೀಲ ಮಾಡುವಂತದ್ದು, ನಮ್ಮ ನಾಯಕರನ್ನು ಕೆಟ್ಟದಾಗಿ ಚಿತ್ರಿಕರೀಸುವಂತದ್ದು, ಕಾಂಗ್ರೆಸ್‌ ಸರ್ಕಾರ ಕಾರಣ. ನಾವು ಏನೇ ಮಾಡಿದರೂ ಕಾಂಗ್ರೆಸ್‌ ಸರ್ಕಾರ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ಭರವಸೆ ಅವರಿಗಿದೆ ಎಂದು ಕಿಡಿ ಕಾರಿದರು.

ರಾಹುಲ್‌ ಕೇಸಲ್ಲಿ ‘ಕೈ’ ಹೋರಾಟ ಕೋರ್ಟ್‌ ವಿರುದ್ಧವೇ: ಪ್ರಲ್ಹಾದ್‌ ಜೋಶಿ ಪ್ರಶ್ನೆ

ಸರ್ಕಾರದ ಮೇಲೆ ಸಾಮಾನ್ಯ ಜನರಿಗೆ ಭರವಸೆ ಇರಬೇಕು, ಕ್ರಿಮಿನಲ್‌ಗಳಿಗೆ ಹೆದರಿಕೆ ಇರಬೇಕು. ಆದರೆ, ಈಗ ಕ್ರಿಮಿನಲ್‌ಗಳಿಗೆ ಧೈರ್ಯ ಬರುತ್ತಿದೆ. ಜನ ಹೆದರುತ್ತಿದ್ದಾರೆ ಎಂದು ವಿಷಾಧಿಸಿದರು.

click me!