
ಮೈಸೂರು (ಆ.6): ಮೈಸೂರು ಪಶ್ಚಿಮ ಆರ್.ಟಿ.ಓ ಕಛೇರಿಯಲ್ಲಿಅನಾಮಧೇಯ ವ್ಯಕ್ತಿಗಳಿಂದ ಕಚೇರಿ ಕಡತಗಳ ಪರಿಶೀಲನೆ, ವಿಲೇವಾರಿ ಆರೋಪ ಹಿನ್ನೆಲೆ ಪ್ರದೀಪ್ ಕುಮಾರ್ ಎಂಬವರಿಂದ ಬರೋಬ್ಬರಿ 35 ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಿರಿಯ ಆರ್ ಟಿಓ ಅಧಿಕಾರಿಗಳಾದ ಜಂಟಿ ನಿರ್ದೇಶಕ ಡಾ.ಸಿ.ಟಿ.ಮೂರ್ತಿ, ದೇವಿಕಾ, ಹರೀಶ್, ಸತೀಶ್, ಪವನ್, ಲತಾಮಣಿ, ಚನ್ನವೀರಪ್ಪ ಸೇರಿ 35 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗ್ಳೂರಲ್ಲಿ ದುಡ್ಡು ಕೊಟ್ರೆ ಸಾಕು ಸಿಗುತ್ತೆ ಡಿಎಲ್: ಆರ್‌ಟಿಓ ಕಚೇರಿಯಲ್ಲಿನ ಕಳ್ಳಾಟ ಬಯಲು.
ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುವವರು ಸಿಬ್ಬಂದಿಗಳೇ ಅಲ್ಲ, ಹೊರಗುತ್ತಿಗೆ ನೌಕರರೂ ಅಲ್ಲ. ಅನಧಿಕೃತ ವ್ಯಕ್ತಿಗಳು ಕಡತ ಪರಿಶೀಲನೆ ನಡೆಸುತ್ತಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಇವರಿಗೆ ಇಲಾಖೆಯ ಮುಖ್ಯಸ್ಥರಾದ ಮೈಸೂರು ಸಾರಿಗೆ ವಿಭಾಗದ ಮುಖ್ಯಸ್ಥರಾದ ಜಂಟಿ ಸಾರಿಗೆ ಆಯುಕ್ತರು ಮತ್ತು ಮೈಸೂರು ಪಶ್ಚಿಮ ಸಾರಿಗೆ ಕಛೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಂದು ಒಟ್ಟು 35 ಸಿಬ್ಬಂದಿ ವಿರುದ್ಧ ದೂರು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಎಚ್. ವಿಶ್ವನಾಥ್ ಪುತ್ರ ಅಮಿತ್ ಬ್ಯಾಂಕ್ ಖಾತೆಯಿಂದ ₹1.99 ಲಕ್ಷ ಮಾಯ!
ಮೈಸೂರು: ವಿಧಾನಪರಿಷತ್ತು ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್(H Vishwanath) ಅವರ ಪುತ್ರ, ಜಿಪಂ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ(Amit Devarahatti)ಅವರ ಬ್ಯಾಂಕ್ ಖಾತೆಯಿಂದ . 1.99 ಲಕ್ಷ ಲಪಟಾಯಿಸಿರುವ ಸಂಬಂಧ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರುದ್ಯೋಗಿ ಪತ್ನಿಗೆ ಕಂಪನಿ ದುಡ್ಡಿಂದ 10 ವರ್ಷ ಕಾಲ ಸಂಬಳ: 4 ಕೋಟಿ ರೂ. ವಂಚಿಸಿದ ಖತರ್‌ನಾಕ್ ಉದ್ಯೋಗಿ!
ಅಮಿತ್ ದೇವರಹಟ್ಟಿಅವರು ಜು.28 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದು, ಹಣ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗೂಗಲ್‌ನಲ್ಲಿ ಹುಡುಕಿ ಬ್ಯಾಂಕ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದು, ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆಯ ವಿವರ ಪಡೆದಿದ್ದು, ಸ್ವಲ್ಪ ಸಮಯದ ನಂತರ ಮೊಬೈಲ್‌ಗೆ ಓಟಿಪಿ ಬಂದಿದೆ. ಅದನ್ನು ಅವರು ಶೇರ್ ಮಾಡದಿದ್ದರೂ ಬ್ಯಾಂಕ್ ಖಾತೆಯಿಂದ . 199989 ಅಕ್ರಮವಾಗಿ ವರ್ಗಾವಣೆಯಾಗಿದೆ. ಈ ಸಂಬಂಧ ಸೆನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ