
ಚಿತ್ರದುರ್ಗ (ಆ.6) ಹೊಡಿ ಬಡಿ ಪ್ರಚೋದನಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತೊಂದು ಎಡವಟ್ಟು ಹೇಳಿಕೆ ವೈರಲ್ ಆಗಿದೆ.
ಶಾಸಕ ವೀರೇಂದ್ರ ಪಪ್ಪಿ ಹಿರೇಗುಂಟನೂರು ಗ್ರಾಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಮಹಿಳೆಯರು ದೂರು ಹೇಳಿದ್ದರು. ಅಲ್ಲದೇ ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ತೊಂದರೆಯಾಗುತ್ತಿದೆ. ಕುಡಿದು ಬಂದ ಪುರುಷರಿಂದ ದಿನನಿತ್ಯ ಮನೆಗಳಲ್ಲಿ ಗಲಾಟೆಗಳು ಆಗುತ್ತಿವೆ. ಇದನ್ನು ತಡೆಯುವಂತೆ ಮನವಿ ಸಲ್ಲಿಸಿದರೂ ಇದುವರೆಗೂ ಯಾರೂ ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ಕೈಗೊಂಡಿಲ್ಲ. ನಿಮಗೆ ಕೈಮುಗಿಯುತ್ತೇವೆ ನೀವಾದರೂ ತಡೆಯಿರಿ; ಬೇಕಾದರೆ ನಮ್ಮೊಂದಿಗೆ ಬನ್ನಿ ಅಕ್ರಮ ಮದ್ಯ ಮಾರಾಟ ನಾನು ತೋರಿಸುತ್ತೇನೆ ಎಂದ ಮಹಿಳೆಯರು.
ಕೊಳೆತ ಆಹಾರವನ್ನೇ ವಾರ್ಡನ್‌ಗೆ ತಿನ್ನಿಸಿ, ಚೆನ್ನಾಗಿ ಹೊಡೆಯಿರಿ: ಶಾಸಕ ವೀರೇಂದ್ರ ಪಪ್ಪಿ
ಇಷ್ಟು ನಿಮಗೆ ತಿಳಿಸಿದ್ದೇವೆ ಕ್ರಮ ಜರುಗಿಸದಿದ್ರೆ ನಾವಂತೂ ಅವರ ಮನೆಗೆ ಬೆಂಕಿ ಇಡುತ್ತೇವೆಂದು ಅಕ್ರೋಶ ಹೊರಹಾಕಿದ್ದ ಮಹಿಳೆಯರು. ಈ ವೇಳೆ ಮಹಿಳೆಯರಿಗೆ ಬೆಂಬಲ ನೀಡಿದ ಶಾಸಕ ವೀರೇಂದ್ರ ಪಪ್ಪಿ, ' ನೀನು ಇಡಮ್ಮ, ನಾನಿದ್ದೇನೆ ಯಾಕೆ ಯೋಚ್ನೆ ಮಾಡ್ತೀಯಾ' ಎಂದು ಬೆಂಕಿಯಿಡಲು ಮಹಿಳೆಯರಿಗೆ ಪ್ರಚೋದಿಸಿದ ಶಾಸಕ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ದುರ್ಗಾದಲ್ಲಿ ಶಾಸಕ ವೀರೇಂದ್ರ ಪಪ್ಪಿ ಕುಟುಂಬದ ದರ್ಬಾರ್!
ನಿನ್ನೆಯಷ್ಟೇ ಕಾನೂನು ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಭೇಟಿ ನೀಡಿದ್ದ ವೇಳೆ 'ಹಾಸ್ಟೆಲ್ ವಾರ್ಡನ್ ರೂಮ್‌ನಲ್ಲಿ ಹಾಕಿ ಹೊಡೆಯಿರಿ' ಎಂದು ಪ್ರಚೋದನೆ ನೀಡಿದ್ದ ಶಾಸಕರಿಂದ ಇದೀಗ ಮತ್ತೊಂದು ಯಡವಟ್ಟು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ