
ಹೆಚ್‌ಡಿ ಕೋಟೆ (ಜು.4): ಉದ್ಯೋಗ ಹರಸಿ ಆಫ್ರಿಕಾ ದೇಶಕ್ಕೆ ಹೋಗಿದ್ದ ಯುವಕನೋರ್ವ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಹಕ್ಕಿಪಿಕ್ಕಿ(Hakki pikki) ಸಮುದಾಯದ ಟೈಗರ್ ಬ್ಲಾಕ್‌ನ ಎಫ್ರಾಹಿಂ (20)ಮೃತ ದುರ್ದೈವಿ. ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆ(HD Kote) ತಾಲ್ಲೂಕಿನ ಟೈಗರ್ ಬ್ಲಾಕ್.
ಅಮಿತ್ ಮಂಜುಳ ದಂಪತಿಯ ಪುತ್ರನಾಗಿರುವ ಎಫ್ರಾಹಿಂ. ಕೆಲಸ ಹುಡುಕಿ ಆಫ್ರಿಕಾಕ್ಕೆ ಹೋಗಿದ್ದ ಪುತ್ರ. ಆದರೆ ಎರಡು ದಿನಗಳ ಹಿಂದೆ ತಾಯಿ ದೂರವಾಣಿ ಕರೆ ಮಾಡಿದಾಗ ಜ್ವರದಿಂದ ಬಳಲುತ್ತಿದ್ದೇನೆ ಅಮ್ಮಾ ಎಂದಿದ್ದ ಏಫ್ರಾಹಿಂ. ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಪುತ್ರ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ರವಾನೆ. ಮಗನ ಅಂತಿಮ ದರ್ಶನ ಪಡೆಯಲು ಆಗದೆ ಪೋಷಕರ ಆತಂಕ.
ಮೃತದೇಹ ಸ್ವಗ್ರಾಮಕ್ಕೆ ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ಕುಟುಂಬಸ್ಥರು.
ರಸ್ತೆ ಅಪಘಾತಕ್ಕೆ ತಾಯಿ ಮಗ ಸಾವು: ಮತ್ತೊಂದಡೆ ವಿದ್ಯುತ್ ಅವಘಡಕ್ಕೆ ಸ್ಥಳದಲ್ಲೇ ಮಗು ದುರ್ಮರಣ!
ಜೀವನ ಜುಗುಪ್ಸೆ; ಯುವಕ ವಿಷ ಸೇವಿಸಿ ಆತ್ಮಹತ್ಯೆ
ನಂಜನಗೂಡು: ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಂಡಿಕೊಂಡಿರುವ ದುರ್ಘಟನೆ ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮದಲ್ಲಿ ನಡೆದಿದೆ.
ಮಹದೇವಸ್ವಾಮಿ (30) ಮೃತ ಯುವಕ. ಜುಲೈ 1ರಂದು ರಾತ್ರಿ ಮನೆಯಿಂದ ಹೋದ ಮಹದೇವಸ್ವಾಮಿ ವಾಪಸ್ ಬಂದಿರಲಿಲ್ಲ. ಮಗ ಕಾಣೆಯಾಗಿರುವ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ತಂದೆ ಚಿನ್ನಪ್ಪ ದೂರು ನೀಡಿದ್ದರು. ದೂರು ನೀಡಿದ ಮಾರನೇ ದಿನ ಮಹದೇವಸ್ವಾಮಿಯ ಮೃತ ದೇಹ ಜಮೀನಿನಲ್ಲಿ ಪತ್ತೆಯಾಗಿದೆ.
ಜೀವನದಲ್ಲಿ ಜುಗುಪ್ಸೆ; ನೇಣು ಹಾಕಿಕೊಂಡು ಯುವಕ ಆತ್ಮಹತ್ಯೆ!
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತನಿಗೆ ಅಕ್ಕ ಮತ್ತು ತಂಗಿ ಇದ್ದು, ಮದುವೆ ಆಗಿಲ್ಲ. ಹೀಗಾಗಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ