ರಾಜ್ಯದಲ್ಲಿ ಮಂಗಳವಾರ 1,151 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1214 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,617 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.
ಬೆಂಗಳೂರು (ಜು.20): ರಾಜ್ಯದಲ್ಲಿ ಮಂಗಳವಾರ 1,151 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1214 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,617 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 25 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.5 ರಷ್ಟು ದಾಖಲಾಗಿದೆ.
ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 12 ಸಾವಿರ ಹೆಚ್ಚು ನಡೆದಿವೆ. ಹೊಸ ಪ್ರಕರಣಗಳು 41 ಏರಿಕೆಯಾಗಿವೆ. ಸೋಮವಾರ 1,108 ಕೇಸ್, ಶೂನ್ಯ ಸಾವು ವರದಿಯಾಗಿತ್ತು. ಸತತ ಎರಡನೇ ದಿನ ಹೊಸ ಪ್ರಕರಣಗಳು ಒಂದು ಸಾವಿರಕ್ಕಿಂತ ಅಧಿಕ ವರದಿಯಾಗಿವೆ. ಕಳೆದ ನಾಲ್ಕು ದಿನಗಳಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 67 ಮಂದಿ ಆಸ್ಪತ್ರೆಯಲ್ಲಿದ್ದು, 7550 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
undefined
Corona Crisis: ಮತ್ತೆ ಕರ್ನಾಟಕದಲ್ಲಿ 1000 ಗಡಿ ದಾಟಿದ ಕೋವಿಡ್
ಎಲ್ಲಿ, ಎಷ್ಟು ಮಂದಿಗೆ ಸೋಂಕು: ಸೋಮವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1013 ಪತ್ತೆಯಾಗಿವೆ. ಉಳಿದಂತೆ ಮೈಸೂರು 24, ಧಾರವಾಡ 17, ಹಾಸನ 13, ತುಮಕೂರು 10 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 21 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಪತ್ತೆಯಾಗಿವೆ. ನಾಲ್ಕು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
1013 ಹೊಸ ಕೊರೋನಾ ಕೇಸ್ ಪತ್ತೆ: ಬೆಂಗಳೂರಿನಲ್ಲಿ ಮಂಗಳವಾರ 1,013 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.10ಕ್ಕೆ ಏರಿಕೆಯಾಗಿದೆ. 1,104 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ.
ನಗರದಲ್ಲಿ ಸದ್ಯ 6,901 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 22 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14,421ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,041 ಮಂದಿ ಮೊದಲ ಡೋಸ್, 2,323 ಮಂದಿ ಎರಡನೇ ಡೋಸ್ ಮತ್ತು 11,057 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.
4ನೇ ದಿನವೂ ಭಾರತದಲ್ಲಿ 20 ಸಾವಿರ ಕೋವಿಡ್ ಕೇಸು: 49 ಸಾವು
ನಗರದಲ್ಲಿ 18,316 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 14,712 ಆರ್‌ಟಿಪಿಸಿಆರ್ ಹಾಗೂ 3,604 ಮಂದಿಗೆ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದೆ. ಮಂಗಳವಾರ ನಗರದ ಹೊಸದಾಗಿ ಕಂಟೈನ್ಮೆಂಟ್ ಪ್ರದೇಶ ಸೃಷ್ಟಿಯಾಗಿಲ್ಲ. ಮಹದೇವಪುರ ವಲಯದಲ್ಲಿ ಐದು ಪ್ರದೇಶಗಳು ಕಂಟೈನ್ಮೆಂಟ್‌ನಿಂದ ಮುಕ್ತವಾಗಿವೆ. ನಗರದಲ್ಲಿ ಒಟ್ಟು 13 ಸಕ್ರಿಯ ಕಂಟೈನ್ಮೆಂಟ್ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.