ಸ್ಯಾಂಡಲ್​ವುಡ್​ ನಟಿಯಾಗುವ ಆಸೆ ಇದ್ಯಾ? ನಿಮ್ಮೂರಲ್ಲೇ ಆಡಿಷನ್​ ಶುರು...ಇಲ್ಲಿದೆ ಫುಲ್​ ಡಿಟೇಲ್ಸ್​

By Suvarna News  |  First Published Feb 7, 2024, 12:36 PM IST

ಸ್ಯಾಂಡಲ್​ವುಡ್​​ನಲ್ಲಿ ನಟಿಯಾಗುವ ಆಸೆ ಹೊಂದಿರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಆಫರ್​ ನೀಡಿದೆ. ನಿಮ್ಮೂರಲ್ಲೆ  ಆಡಿಷನ್​ ನಡೆಯಲಿದೆ. ಇದರ ಫುಲ್​ ಡಿಟೇಲ್ಸ್​ ಇಲ್ಲಿದೆ...
 


ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿದೆ. ಹೌದು. ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಅವಕಾಶ ಇದಾಗಿದ್ದು, ಹಲವು ಕಡೆಗಳಲ್ಲಿ ಆಡಿಷನ್​ ನಡೆಯಲಿದೆ. ಈ ಆಡಿಷನ್​ನಲ್ಲಿ ಭಾಗವಹಿಸಿ ನಿಮ್ಮ ಅದೃಷ್ಟವನ್ನು ಕಂಡುಕೊಳ್ಳಬಹುದಾಗಿದೆ. ಇದರಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ವಿಜೇತರಾಗಿ ನೀವೂ ಬಣ್ಣದ ಲೋಕಕ್ಕೆ ಎಂಟ್ರಿಯಾಗುವ ಅದೃಷ್ಟವಂತೆಯೂ ಆಗಿರಬಹುದು.

ಅಂದಹಾಗೆ, ಕರ್ನಾಟಕದ 16 ಜಿಲ್ಲೆಗಳಲ್ಲಿ  ಆಡಿಷನ್​ ನಡೆಯಲಿದ್ದು, ಇಲ್ಲಿ ಸೆಲೆಕ್ಟ್​ ಆದವರಿಗೆ ರಿಯಾಲಿಟಿ ಷೋನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಕೆಲವೊಂದು ಸ್ಪರ್ಧೆಗಳನ್ನು ಎದುರಿಸಿ, ಜಯಶೀಲರಾದರೆ ನೀವೂ ಆಗಬಹುದು ಸ್ಯಾಂಡಲ್​ವುಡ್​ ತಾರೆ. ಹಾಗಿದ್ದರೆ 16 ಜಿಲ್ಲೆಗಳಲ್ಲಿ ಯಾವಾಗ ಆಡಿಷನ್​ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ: 

Tap to resize

Latest Videos

ಎರಡೇ ವಾರಕ್ಕೆ ಕಳಿಸಿ ಎಂದ್ರೂ ರನ್ನರ್​ ಅಪ್​ ಮಾಡಿದ್ರು: ನನ್ನ ಉದ್ದೇಶವೇ ಬೇರೆಯಿತ್ತು ಎಂದ ಡ್ರೋನ್​ ಪ್ರತಾಪ್

ಇದೇ ಫೆಬ್ರುವರಿ 10 ಮತ್ತು 11 ಬೆಂಗಳೂರು ಮತ್ತು ಬೆಳಗಾವಿ, 11 ಭಾನುವಾರ ಮೈಸೂರು ಮತ್ತು ಹುಬ್ಬಳ್ಳಿ, 12 ಸೋಮವಾರ ಹಾಸನ ಮತ್ತು ಬಾಗಲಕೋಟೆ, 13 ಮಂಗಳವಾರ ಚಿಕ್ಕಮಗಳೂರು ಮತ್ತು ಕಲಬುರಗಿ, 14ನೇ ತಾರೀಖು ಮಡಿಕೇರಿ, 15ರಂದು ಬಳ್ಳಾರಿ, 16ರ ಶುಕ್ರವಾರ ಮಂಗಳೂರು ಮತ್ತು ಕೊಪ್ಪಳ, 17 ಶನಿವಾರ ಉಡುಪಿ ಮತ್ತು ದಾವಣಗೆರೆ, 18 ಭಾನುವಾರ ಶಿವಮೊಗ್ಗ ಮತ್ತು ಚಿತ್ರದುರ್ಗ ಇಷ್ಟು ಕಡೆಗಳಲ್ಲಿ ಆಡಿಷನ್​ ನಡೆಯಲಿದೆ.

ಅಂದಹಾಗೆ ಆಸಕ್ತರು ಮಾಡಬೇಕಿರುವುದು ಇಷ್ಟು: 18ರಿಂದ 28 ವರ್ಷದ ಯುವತಿಯರಿಗೆ ಈ ಛಾನ್ಸ್​ ಇದೆ. ಆಸಕ್ತರು ತಮ್ಮ ಪಾಸ್​ಪೋರ್ಟ್​ ಸೈಜ್​ ಫೋಟೋ ಮತ್ತು ಅಡ್ರೆಸ್​ ಪ್ರೂಫ್​ ಜೆರಾಕ್ಸ್​ ಜೊತೆ ಆಡಿಷನ್​ಗೆ ಬರಬೇಕು. ನಿಮ್ಮ ಆ್ಯಕ್ಟಿಂಗ್​ ವಿಡಿಯೋಗಳನ್ನು 9513516200ಕ್ಕೆ ವಾಟ್ಸ್​ಆ್ಯಪ್​ ಮಾಡುವಂತೆ ಜೀ ವಾಹಿನಿ ಹೇಳಿದೆ. ನೀವೂ ಕೂಡ ಚಂದನವನದ ಮಹಾನಟಿಯಾಗೋಕೆ ಶುರುವಾಗಿದೆ ಆಡಿಷನ್​ ಎನ್ನುವ ಮೂಲಕ ಜೀ ವಾಹಿನಿ ಪ್ರೊಮೋ ರಿಲೀಸ್​ ಮಾಡಿದೆ. 

ಸಾಯಿ ಪಲ್ಲವಿ V/s ಜಾಹ್ನವಿ ಕಪೂರ್​: ಯಾರಿಗೆ ಒಲಿಯಲಿದ್ದಾಳೆ ಸೀತಾಮಾತೆ?
 

click me!