ಮದುವೆಯಾಗಿ ಅಮೆರಿಕಾಗೆ ಹೋಗಿದ್ದ ನಟಿ ಹೇಮಾ ಡಿವೋರ್ಸ್‌ ಪಡೆದು ಭಾರತಕ್ಕೆ ವಾಪಸ್ ಬಂದಿದ್ದು ಯಾಕೆ..!?

By Shriram Bhat  |  First Published Feb 5, 2024, 7:20 PM IST

ಅಮೆರಿಕಾ ಅಮೆರಿಕಾ ಚಿತ್ರದ ಬಳಿಕ ಹೇಮಾಗೆ ಸಾಲುಸಾಲು ಚಿತ್ರಗಳ ಆಫರ್ ಬಂದಿತ್ತಾದರೂ ಆಕೆ ಕಾಲ್‌ಶೀಟ್ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ, ಮದುವೆ ಮುಖದ ಮುಂದೆಯೇ ಬಂದು ನಿಂತಿತ್ತು. ಮದುವೆ ಬಂಧನದಿಂದ ಆಕೆ ತಪ್ಪಿಸಿಕೊಂಡು ಮತ್ತೆ ಬಣ್ಣದ ಬದುಕಿಗೆ ಮರಳುವ ಹೊತ್ತಿಗೆ ಆಕೆಯ ಯೌವ್ವನ ಸ್ವಲ್ಪ ಹಿಂದೆ ಸರಿದಿತ್ತು. 


 

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಜತೆ ನಟಿಸಿದ್ದರು ಮುದ್ದು ಮುಖದ ಚೆಲುವೆ ಹೇಮಾ ಪ್ರಭಾತ್ (ಹೇಮಾ ಪಂಚಮುಖಿ). ಬಳಿಕ ಹೇಮಾ (Hema Prabhath) ಅಮೆರಿಕಾದಲ್ಲಿ ಸೆಟಲ್ ಆಗಿದ್ದ ಸುಮೀಂದ್ರ ಪಂಚಮುಖಿ ಅವರನ್ನು ಮದುವೆಯಾಗಿ ತಾವೂ ಅಮೆರಿಕಾದಲ್ಲೇ ನೆಲೆಸಿದ್ದರು. ಆದರೆ ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ, ಮನಸ್ತಾಪಗಳು ತಲೆದೋರಿ ಕೊನೆಗೆ ಅದು ಡಿವೋರ್ಸ್ ಆಗಿದೆ. ವಿಚ್ಛೇದನದ ಬಳಿಕ ಭಾರತಕ್ಕೆ ಮರಳಿ ಇಲ್ಲೇ ನೆಲೆಸಿದ್ದಾರೆ ನಟಿ ಹೇಮಾ ಪ್ರಭಾತ್.

Tap to resize

Latest Videos

undefined

ಸುಮೀಂದ್ರ ಪಂಚಮುಖಿ ಜತೆ ಡಿವೋರ್ಸ್‌ ಪಡೆದ ಬಳಿಕ ನಟಿ ಹೇಮಾ ಅವರು ಮತ್ತೆ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸಂಭ್ರಮ, ದೊರೆ, ರವಿಮಾಮ ಮತ್ತು ಗೋಲಿ ಬಾರ್ ಚಿತ್ರಗಳಲ್ಲಿ ನಟಿಸಿದ ನಟಿ ಹೇಮಾ, ಬಳಿಕ ನಟ ಪ್ರಶಾಂತ್ ಗೋಪಾಲಶಾಸ್ತ್ರಿ (Prashanth Gopal Shastri) ಅವರನ್ನು ಮದುವೆಯಾಗಿದ್ದಾರೆ. (ಪ್ರಶಾಂತ್ ಎಂದರೆ ಕನ್ನಡದ ರಂಗೋಲಿ ಸಿನಿಮಾದ ನಾಯಕ ನಟ ಸುಮಂತ್) ಈಗ ಫ್ಯಾಮಿಲಿ, ಮನೆ ಎಂದು ಹಾಯಾಗಿದ್ದಾರೆ ನಟಿ ಹೇಮಾ ಪ್ರಭಾತ್. ರಂಗಭೂಮಿಯ ಹಿನ್ನೆಲೆಯಿಂದ ಬಂದಿರುವ ನಟಿ ಹೇಮಾ ಅವರು 'ಥಿಯೇಟರ್‌ ಗ್ರೂಫ್‌'ನಲ್ಲಿ ಡಾನ್ಸ್‌ ಕಲಿಸುತ್ತಾರಂತೆ. 

ಪೃಥ್ವಿ ಅಂಬಾರ್ - ಮಿಲನಾ ನಾಗರಾಜ್ 'For REGN' ಡ್ಯುಯೇಟ್ ಸಾಂಗ್ ನೋಡಿ ಡಾರ್ಲಿಂಗ್ ಕೃಷ್ಣ ಫಿದಾ!

ಅಮೆರಿಕಾ ಅಮೆರಿಕಾ (America America) ಚಿತ್ರದಲ್ಲಿ ನಟಿಸಿದ ಹೇಮಾ ಪಂಚಮುಖಿ ಆ ಚಿತ್ರವು ಸೂಪರ್ ಹಿಟ್ ಆಗುವುದರೊಂದಿಗೆ ರಾತ್ರಿ ಮುಗಿದು ಬೆಳಗಾಗುವುದರೊಳಗೆ ಸ್ಟಾರ್ ನಟಿಯಾಗಿಬಿಟ್ಟರು. ಆದರೆ, ಅವಸರಕ್ಕೆ ಬಿದ್ದುರೋ ಏನೋ ಎಂಬಂತೆ ಮದುವೆಯಾಗಿ ಅಲ್ಲಿ ಸೆಟ್ಲ್ ಆಗಲು ಸಾಧ್ಯವೇ ಆಗಲಿಲ್ಲ. ಅಷ್ಟರಲ್ಲಿ, ಸಿನಿಮಾರಂಗದ ಒಂದು ಇನ್ನಿಂಗ್ಸ್ ಮುಗಿದು ಹೋಗಿತ್ತು. ಬಳಿಕ, ಸೆಕೆಂಡ್‌ ಇನ್ನಿಂಗ್‌ ಎಂಬಂತೆ ಮತ್ತೆ ಚಿತ್ರರಂಗಕ್ಕೆ ಬಂದ ಹೇಮಾಗೆ ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತಾಗಿತ್ತು. ಏಕೆಂದರೆ, ಅಷ್ಟರಲ್ಲಾಗಲೇ ಹಳೆಯ ನೀರು ಹರಿದುಹೋಗಿ ಹೊಸ ನೀರು ಬಂದಾಗಿತ್ತು. 

ಇನ್‌ಕಮ್‌ ಟ್ಯಾಕ್ಸ್‌ ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಮೋಸದ ಬಲೆಗೆ ಬಿದ್ರಾ ನಟಿ ಜಯಪ್ರದಾ..!?

ಹೌದು, ಅಮೆರಿಕಾ ಅಮೆರಿಕಾ ಚಿತ್ರದ ಬಳಿಕ ಹೇಮಾಗೆ ಸಾಲುಸಾಲು ಚಿತ್ರಗಳ ಆಫರ್ ಬಂದಿತ್ತಾದರೂ ಆಕೆ ಕಾಲ್‌ಶೀಟ್ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ, ಮದುವೆ ಮುಖದ ಮುಂದೆಯೇ ಬಂದು ನಿಂತಿತ್ತು. ಮದುವೆ ಬಂಧನದಿಂದ ಆಕೆ ತಪ್ಪಿಸಿಕೊಂಡು ಮತ್ತೆ ಬಣ್ಣದ ಬದುಕಿಗೆ ಮರಳುವ ಹೊತ್ತಿಗೆ ಆಕೆಯ ಯೌವ್ವನ ಸ್ವಲ್ಪ ಹಿಂದೆ ಸರಿದಿತ್ತು. ಈ ಕಾರಣಗಳಿಂದ ನಟಿ ಹೇಮಾ ಪಂಚಮುಖಿ ಸಿನಿಮಾ ನಟಿಯಾಗಿ ಹೆಚ್ಚುಹೆಚ್ಚು ಸಿನಿಮಾ ಮಾಡುವ ಮೂಲಕ ಸ್ಟಾರ್ ನಟಿಯಾಗಿ ತುಂಬಾ ಕಾಲ ಮೆರೆಯಲು ಸಾಧ್ಯವಾಗಲೇ ಇಲ್ಲ. ಒಟ್ಟಿನಲ್ಲಿ, ಕನ್ನಡ ನಟನ ಕೈ ಹಿಡಿದು ಈಗ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ, ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಎನ್ನಲಾಗಿದೆ. 

ಜಿಯೋ ಸಿನಿಮಾದಲ್ಲಿ ಸುದೀಪ್ 'ಕರ್ನಾಟಕ ಬುಲ್ಡೋಜರ್ಸ್' & ಸಲ್ಮಾನ್ ಖಾನ್ 'ಮುಂಬೈ ಹೀರೋಸ್' ಸಿಸಿಎಲ್‌ 10 ಲೈವ್!

click me!