ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗೆ ಕೊಂಡೊಯ್ದ ನಟ ಯಶ್ ನಟಿಸುತ್ತಿರುವ ಮುಂದಿನ ಚಿತ್ರ ಟಾಕ್ಸಿಕ್. ಕೆಜಿಎಫ್ ಚಿತ್ರದ ಮೂಲಕ ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿ ಭಾರೀ ಮೋಡಿ ಮಾಡಿತ್ತು.
ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ (Rocking Star Yash) 'ಮುತ್ತಿನಂಥ' ಮಾತೊಂದನ್ನು ಆಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಯಶ್, 'ಇಂದಿನ ಪ್ರೆಂಡ್‌ಶಿಪ್ ಕೂಡ ಗಿವ್ ಅಂಡ್ ಟೇಕ್ ಪಾಲಿಸಿ ಆಧಾರಿತವಾಗಿದ್ದು. ಆದರೆ, ಜೀವನದಲ್ಲಿ ಕೆಲವೊಂದು ಬೇರೆಯದೇ ಆದ ಎಲಿಮೆಂಟ್ಸ್‌ಗಳಿವೆ, ಮಾನವರಾಗಿ ನೀವು ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಈ ಮಾತನ್ನು ಹೇಳುತ್ತಿರುವುದಕ್ಕೆ ಕ್ಷಮಿಸಿ, ನೀವು ನಿಮ್ಮ ಜತೆ ಕಂಫರ್ಟೇಬಲ್ ಆಗಿರಬೇಕು. ನೀವು ನಿಮ್ಮನ್ನು ಪ್ರೀತಿಸಬೇಕು. ನಾನು ಅದನ್ನೇ ನಂಬುತ್ತೇನೆ' ಎಂದಿದ್ದಾರೆ.
ಸ್ಯಾಂಡಲ್‌ವುಡ್ ಹೀರೋ ಯಶ್ ಈಗ ಭಾರತದ ಅತ್ಯಂತ ಪ್ರಸಿದ್ಧ ನಟ. ಕೆಜಿಎಫ್ ಖ್ಯಾತಿಯ ಬಳಿಕ ನಟ ಯಶ್ ಅವರು ಬಹುಬೇಡಿಕೆ ನಟರಾಗಿದ್ದು, ಬಹುತೇಕ ಇಡೀ ಜಗತ್ತು ಅವರನ್ನು ಗುರುತಿಸುತ್ತದೆ, ಗೌರವಿಸುತ್ತದೆ. ಕೆಜಿಎಫ್ ಹಾಗು 'ಕೆಜಿಎಫ್ 2' ಬಳಿಕ ನಟ ಯಶ್ ಸದ್ಯ ಹೊಸ ಸಿನಿಮಾ 'ಟಾಕ್ಸಿಕ್' ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಗೀತೂ ಮೋಹನ್‌ದಾಸ್ (Geethu Mohandas) ನಿರ್ದೇಶನದ ಟಾಕ್ಸಿಕ್ (Toxic) ಸಿನಿಮಾ ಈಗ ಭಾರೀ ಕುತೂಹಲದ ಕೇಂದ್ರಬಿಂಧುವಾಗಿದೆ.
ಕರ್ನಾಟಕದ 'ಜಲ ಸಂಕಷ್ಟ'ಪರಿಹಾರಕ್ಕೆ ಸಾಥ್ ನೀಡಿದ ಸ್ಟಾರ್ ಸುವರ್ಣ; ಉಚಿತ ಜಲ ವಿತರಣೆ!
ಏಕೆಂದರೆ, ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಗೆ ಕೊಂಡೊಯ್ದ ನಟ ಯಶ್ ನಟಿಸುತ್ತಿರುವ ಮುಂದಿನ ಚಿತ್ರ ಟಾಕ್ಸಿಕ್. ಕೆಜಿಎಫ್ ಚಿತ್ರದ ಮೂಲಕ ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿ ಭಾರೀ ಮೋಡಿ ಮಾಡಿತ್ತು. ಈಗ ಅದಕ್ಕಿಂತಲೂ ಹೆಚ್ಚಿನದನ್ನು ಯಶ್ ಹಾಗು ಗೀತೂ ಮೋಹನ್ ದಾಸ್ ಅವರಿಂದ ನಿರೀಕ್ಷೆ ಮಾಡಲಾಗುತ್ತಿದೆ. ಅದಕ್ಕೆ ಸರಿಯಾಗಿಯೇ ಎಂಬಂತೆ, ಟಾಕ್ಸಿಕ್ ಟೀಮ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್, ಸಾಯಿ ಪಲ್ಲವಿ ಸಹ ನಟಿಸುತ್ತಿರುವುದು ಕನ್ಫರ್ಮ್ ಆಗಿದೆ.
ಸಿನಿಮಾ ನಟ ಮಾತ್ರ ಹೀರೋ ಅಲ್ಲ, ಯಾರಾದ್ರೂ ಆಗಬಹುದು; ಯಾಕೆ ಹೀಗಂದ್ಬಿಟ್ರು ರಾಮ್ ಚರಣ್?
ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದ್ದು, ಎಲ್ಲಿ ನಡೆಯುತ್ತಿದೆ, ಶೂಟಿಂಗ್ ಶೆಡ್ಯೂಲ್ ಯಾವತ್ತೆಲ್ಲ ಇದೆ ಎಂಬ ಬಗ್ಗೆ ಮಾಹಿತಿ ಸೀಕ್ರೆಟ್ ಆಗಿದೆ. ಆದರೆ, ಕೆಜಿಎಫ್ ಬಳಿಕ ನಟ ಯಶ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎಂಬುದಕ್ಕೆ 'ಟಾಕ್ಸಿಕ್' ಎಂಬ ಉತ್ತರ ದೊರಕಿದ್ದು, ಇದು ಯಶ್ ಅಭಿಮಾನಿಗಳಿಗೆ ಬಹಳಷ್ಟು ಖುಷಿ ಕೊಟ್ಟಿದೆ. ಸದ್ಯ ತೀವ್ರ ಕೂತೂಹಲ ಕೆರಳಿಸುತ್ತಿರುವ ಟಾಕ್ಸಿಕ್ ಸಿನಿಮಾದಲ್ಲಿ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.