
ಯೋಗೀಶ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹರೀಶ ವಯಸ್ಸು 36’ (Hareesha Vayassu 36) ಚಿತ್ರದ ಟ್ರೈಲರ್ (Trailer) ಅನಾವರಣಗೊಂಡಿದೆ. ಚಿತ್ರಕ್ಕೆ 'ಯು' ಸರ್ಟಿಫಿಕೇಟ್ (U Certificate) ಸಿಕ್ಕಿದ್ದು, ಮಾ.4ರಂದು ತೆರೆ ಕಾಣಲಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಟ್ರೈಲರ್ ನೋಡಬಹುದು. ಗುರುರಾಜ್ ನಿರ್ದೇಶಕ. ಲಕ್ಷ್ಮೀಕಾಂತ್ ರಾವ್, ತ್ರಿಲೋಕ್ ಕುಮಾರ್ ಜಾ, ಚಕ್ರಾಧರ್ ರೆಡ್ಡಿ ನಿರ್ಮಾಪಕರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಯೋಗೀಶ್ ಶೆಟ್ಟಿ (Yogish Shetty), ‘ನಟನೆಯ ಆಸಕ್ತಿ ಇರುವವರಿಗೆ ಅವಕಾಶ ಸಿಗುವುದು ಬಹಳ ಮುಖ್ಯ. ನನ್ನನ್ನು ನೋಡಿದ ಕೂಡಲೇ ನಿರ್ದೇಶಕರು, ನೀವು ಹರೀಶನ ಪಾತ್ರಕ್ಕೆ ಸೂಟ್ ಆಗ್ತೀರ ಅಂದರು.
ಅಲ್ಲಿಗೆ ಅವಕಾಶ ಪಡೆದ ಅದೃಷ್ಟವಂತ ನಾನಾದೆ. ಈ ಚಿತ್ರದ ಹಾಡುಗಳನ್ನು ನನ್ನ ಮಲಯಾಳಿ ಸ್ನೇಹಿತರೂ ಇಷ್ಟಪಟ್ಟಿದ್ದಾರೆ’ ಎಂದರು. ಸಂಗೀತ ನಿರ್ದೇಶಕನಾಗಿದ್ದ ಗುರುರಾಜ ಜ್ಯೇಷ್ಠ ಅವರು ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡಿರುವ, ಹಾಸ್ಯಪ್ರದಾನ ಕಾಥಾಹಂದರ ಹೊಂದಿರೋ ಚಲನಚಿತ್ರ ಇದಾಗಿದ್ದು, ಮಂದಹಾಸ ಅರಳಿಸುವ ಚಿತ್ರ. ಮದುವೆ ವಯಸ್ಸು ಮೀರಿದ, ನಿರುದ್ಯೋಗಿ ಯುವಕನ ಮದುವೆಯ ಪ್ರಯತ್ನವೇ ಚಿತ್ರದ ಹೈಲೈಟ್ ಎಂದು ನಿರ್ದೇಶಕ ಗುರುರಾಜ್ ತಿಳಿಸಿದರು. ಈ ಚಿತ್ರದಲ್ಲಿ ವಿಶೇಷವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಟೈಟಲ್ ಸಾಂಗ್‌ನ್ನು ಹಾಡಿದ್ದಾರೆ.
Puneeth Rajkumar: 'ಹರೀಶ ವಯಸ್ಸು 36' ಚಿತ್ರಕ್ಕೆ ಪವರ್ ಸ್ಟಾರ್ ಅಪ್ಪು ಹಾಡು
‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ (Sarkari Hi Pra Shaale Kasaragodu) ಚಿತ್ರದಲ್ಲಿ ಮಲಯಾಳಿ ಟೀಚರ್ ಜೋಸೆಫ್ ಪಾತ್ರ ನಿರ್ವಹಿಸಿದ್ದ ಯೋಗೀಶ್ ಶೆಟ್ಟಿ ಚಿತ್ರದ ನಾಯಕ. ‘ಈ ಸಿನಿಮಾದ ಆಫರ್ ಬರುವಾಗ ನನಗೂ ಮದುವೆ ಆಗಿರಲಿಲ್ಲ. ಆಮೇಲೆ ಮುಂದಿನ ಪರಿಣಾಮ ಊಹಿಸಿ ಮದುವೆ ಆದೆ. ನಿರ್ದೇಶಕರು, ಆ್ಯಕ್ಟಿಂಗ್ ಮಾಡೋದು ಬೇಡ. ನೀವು ಇರುವ ಹಾಗೆ ಇದ್ದರಾಯ್ತು ಎಂದಿದ್ದರು. ಹೀಗಾಗಿ ಸಿನಿಮಾ ಸಹಜವಾಗಿ ಬಂದಿದೆ. ನನಗೆ ಹೀರೋಗಿಂತಲೂ ಚಿತ್ರದ ಕ್ಯಾರೆಕ್ಟರ್ ಆಗಲಿಕ್ಕೆ ಇಷ್ಟ’ ಎಂದರು. ನಾಯಕಿ ಶ್ವೇತಾ ಅರೆಹೊಳೆ ಭರತನಾಟ್ಯ ಹಾಗೂ ರಂಗಭೂಮಿ ಹಿನ್ನೆಲೆಯವರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟೈಟಲ್ ಹಾಡನ್ನು (Title Song) ಹಾಡಿದ್ದರು. ಈ ಸಿನಿಮಾವನ್ನು ಪಿಆರ್ಕೆ ಬ್ಯಾನರ್ ಪ್ರಮೋಶನ್ ಮಾಡುವುದಾಗಿ ಹೇಳಿದ್ದರು ಎಂದು ನಿರ್ದೇಶಕ ಗುರುರಾಜ್ ತಿಳಿಸಿದ್ದಾರೆ. ಮೋಹನ್ ಪಡ್ರೆ ಕ್ಯಾಮೆರಾಮ್ಯಾನ್ ಆಗಿದ್ದು, ನಿರ್ದೇಶಕ ಗುರುರಾಜ್ ಜೈಷ್ಠ ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯನಟ ಉಮೇಶ್, ಶ್ವೇತಾ ಅರೆಹೊಳೆ, ದೀಪಿಕಾರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 36 ವರ್ಷದ ಹರೀಶ ಮದುವೆಯಾಗಲು ಹೊರಟಾಗ ನಾಯಕನ ಸುತ್ತ ನಡೆಯುವ ಹಾಸ್ಯಪ್ರಸಂಗಗಳೇ ಈ ಚಿತ್ರದ ಕಥಾವಸ್ತುವಾಗಿದೆ.
Old Monk ಅಂದ್ರೆ ನಮಗಿಷ್ಟ: ಫೆ.25ರಂದು ಶ್ರೀನಿ-ಅದಿತಿ ಸಿನಿಮಾ ತೆರೆಗೆ
ನನ್ನ ಕಸಿನ್‌ಗೆ 37 ವರ್ಷ, ವೃತ್ತಿಪರ ನಾಟಕ ತಂಡದವನು, ಆತ ಮದುವೆಯಾಗಲು ಹೊರಟ ಸಂದರ್ಭದಲ್ಲಿ ನಡೆದ ಘಟನೆಗಳೇ ಈ ಚಿತ್ರಕ್ಕೆ ಸ್ಪೂರ್ತಿ. ಒಂದು ಬೀದಿ ಮತ್ತು ಮನೆಯಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ, ನಾಯಕ ಬಾಡಿಗೆ ಮನೆ ಕೊಡಿಸುವ ಬ್ರೋಕರ್, ಅದರ ಜೊತೆ ಹುಡುಗಿ ನೋಡುವ ಕೆಲಸ, ಈತನನ್ನ ಯಾವ ಹುಡುಗಿ ನೋಡಿದರೂ ಇಷ್ಟಪಡಲ್ಲ, ಕೊನೆಗೂ ನಮ್ಮ ನಾಯಕ ಹರೀಶನನ್ನು ಪ್ರೀತಿಸುವ ಹುಡುಗಿ ಸಿಕ್ತಾಳಾ, ಆತನ ಮದುವೆಯಾಯಿತೇ ಇಲ್ಲವೇ ಎಂಬುದನ್ನು ದಕ್ಷಿಣ ಕನ್ನಡದ ಸ್ಲ್ಯಾಂಗ್ ಇಟ್ಟುಕೊಂಡು ನಿರೂಪಿಸಿದ್ದೇನೆ. ಧರ್ಮಸ್ಥಳದ ಬಳಿ 105 ವರ್ಷದಷ್ಟು ಹಳೆಯದಾದ ಗುತ್ತೆಮನೆಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ ಎಂದು ನಿರ್ದೇಶಕ ಗುರುರಾಜ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.