Love Mocktail 2: ಡಾರ್ಲಿಂಗ್ ಕೃಷ್ಣ - ಮಿಲನಾ ರೊಮ್ಯಾಂಟಿಕ್ ಜೋಡಿ ಜನರಿಗೇಕಿಷ್ಟ?

Suvarna News   | Asianet News
Published : Feb 23, 2022, 06:14 PM IST
Love Mocktail 2: ಡಾರ್ಲಿಂಗ್ ಕೃಷ್ಣ - ಮಿಲನಾ ರೊಮ್ಯಾಂಟಿಕ್ ಜೋಡಿ ಜನರಿಗೇಕಿಷ್ಟ?

ಸಾರಾಂಶ

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿಯ 'ಲವ್ ಮಾಕ್ ಟೇಲ್' ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ಅದಕ್ಕೆ ತೆರೆಯ ಮೇಲೆ ಈ ಜೋಡಿ ಮಾಡಿರೋ ಮೋಡಿನೇ ಕಾರಣ. ಈ ಜೋಡಿಯ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.    

ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ (Milana) ಜೋಡಿ ಸ್ಯಾಂಡಲ್‌ವುಡ್‌ನ ಮೋಸ್ಟ್ ರೊಮ್ಯಾಂಟಿಕ್ (Romantic) ಜೋಡಿ ಅಂತಲೇ ಫೇಮಸ್ಸು. ತೆರೆಯ ಮೇಲೆ ಇವ್ರನ್ನು ಜನ ಇಷ್ಟಪಟ್ಟ ಹಾಗೆ ತೆರೆಯ ಹಿಂದೆಯೂ ಇಷ್ಟಪಡುತ್ತಿದ್ದಾರೆ. ಈ ಜೋಡಿ ಅದು ಹೇಗೆ ಜನರಿಗೆ ಆ ಪರಿ ಮೋಡಿ ಮಾಡಿದೆ. ಯಾಕೆ ಇವ್ರಿಬ್ಬರನ್ನು ಜನ ಅಷ್ಟೊಂದು ಇಷ್ಟಪಡುತ್ತಿದ್ದಾರೆ ಅನ್ನೋದಕ್ಕೆ ಕೆಲವೊಂದು ಕಾರಣಗಳು ಇಲ್ಲಿವೆ.

1. ಮುದ್ದಾದ ಸ್ಕ್ರೀನ್ ಪ್ರೆಸೆನ್ಸ್
ಲವ್ ಮಾಕ್ ಟೇಲ್ (Love Mocktail) ಇರಬಹುದು, ಲವ್ ಮಾಕ್ ಟೇಲ್ 2 ಚಿತ್ರ ಇರಬಹುದು, ಕೃಷ್ಣ ಮತ್ತು ಮಿಲನಾ ಜೋಡಿ ಸ್ಕ್ರೀನ್ ಮೇಲೆ ಮಿಂಚಿದ್ದೇ ಮಿಂಚಿದ್ದು. ಸ್ಕ್ರೀನ್‌ ಮೇಲೆ ಈ ಜೋಡಿ ಸಖತ್ ಕ್ಯೂಟ್‌ ಆಗಿ ಕಾಣ್ತಿತ್ತು. ಲವ್ ಮಾಕ್ ಟೇಲ್ ಮೊದಲ ಭಾಗದಲ್ಲಿ ಗಂಡ ಹೆಂಡತಿಯಾಗಿ ಈ ಜೋಡಿಯ ಪರ್ಫಾಮೆನ್ಸ್ ಗೆ ಎಲ್ಲರೂ ಫಿದಾ ಆದ್ರು. ಜನ ಇವತ್ತಿಗೂ ನಿಧಿಮಾ ಅಂತಲೇ ಮಿಲನಾ ಅವರನ್ನು ಗುರುತಿಸುತ್ತಾರೆ. ಮಾಕ್ ಟೇಲ್ 2ನಲ್ಲಿ ಮಿಲನಾ ಎಂಟ್ರಿ ಕೊಟ್ಟಾಗ ಆದ ಮ್ಯಾಜಿಕ್ ಮೊಮೆಂಟ್ (Magic Moments) ಪ್ರೇಕ್ಷಕನನ್ನು ಹಿಡಿದಿಟ್ಟದ್ದು ಸುಳ್ಳಲ್ಲ. ಮಿಲನಾ ಬಂದ್ಮೇಲೆ ಕೃಷ್ಣಾ ಪರ್ಫಾಮೆನ್ಸೂ ಸಖತ್ ರೊಮ್ಯಾಂಟಿಕ್ (Romantic) ಆಗಿ ಬದಲಾಯ್ತು.

8 ವರ್ಷದಿಂದ ಲವ್ ಮಾಡ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದಕ್ಕೆ Aditi Prabhudeva ಕ್ಲಾರಿಟಿ ಇದು!

2. ಪ್ರೀತಿಸುತ್ತಿದ್ದ ಜೋಡಿಯ ಸಹಜ ಮ್ಯಾನರಿಸಂ
ಹೇಳಿ ಕೇಳಿ ಹತ್ತು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ ಮಿಲನಾ ಹಾಗೂ ಕೃಷ್ಣ. ಇವರಿಬ್ಬರೂ ನಟಿಸಿದ ಸೂಪರ್ ಹಿಟ್ (Super HIt) ಚಿತ್ರ ಲವ್‌ ಮಾಕ್ಟೇಲ್ ಪ್ರೀತಿಯೇ ಪ್ರಧಾನವಾಗಿರೋ ಸಿನಿಮಾ. ಯಾವ ಸಂಬಂಧವೂ ಇಲ್ಲದೇ ಸ್ಕ್ರೀನ್ ಮೇಲೆ ಪ್ರೀತಿ, ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳೋದಕ್ಕೂ ಪರಸ್ಪರ ಪ್ರೀತಿಸುತ್ತಿದ್ದು ಸ್ಕ್ರೀನ್ ಮೇಲೂ ಪ್ರೇಮಿಗಳಾಗಿ ಕಾಣಿಸಿಕೊಳ್ಳೋಕೋ ವ್ಯತ್ಯಾಸ ಇದೆ. ಈ ಜೋಡಿ ಮ್ಯಾಜಿಕ್ ಮಾಡಿದ್ದು ಎರಡನೇ ಕೆಟಗರಿಯಲ್ಲಿ. ಹೀಗಾಗಿ ಇವರಿಬ್ಬರ ಸಹಜ ಮ್ಯಾನರಿಸಂ ಜನರಿಗೆ ಬಹಳ ಇಷ್ಟವಾಗಿದೆ. ಜೊತೆಗೆ ಜನ ತಮ್ಮ ಪ್ರೀತಿಯ ಜೊತೆಗೆ ಕನೆಕ್ಟ್ ಮಾಡಿಕೊಂಡು ಈ ಜೋಡಿಯನ್ನು ಕಣ್ತುಂಬಿಸಿಕೊಂಡಿದ್ದಾರೆ.

3. ಮಿಲನಾಗೆ ತನ್ನ ಪ್ರೀತಿಯನ್ನು ತೋರಿಸೋದಕ್ಕಾಗಿಯೇ ಕೃಷ್ಣ ಮಾಡಿದ ಚಿತ್ರ
ಈ ಚಿತ್ರವನ್ನು ಕೃಷ್ಣ ಮಾಡಲು ಮುಖ್ಯ ಕಾರಣ ತನ್ನೊಳಗಿರುವ ಪ್ರೀತಿಯನ್ನು ಮಿಲನಾಗೆ ತೋರಿಸಬೇಕು ಅನ್ನೋದೇ ಆಗಿತ್ತು. ಹೀಗಾಗಿ ಇಡೀ ಸ್ಟೋರಿಯೊಳಗೆ ರಿಯಲ್ ಪ್ರೇಮಿಯೊಬ್ಬ ಅಡಗಿದ್ದಾನೆ. ನನ್ನ ಕಣ್ಣೊಳಗಿನ ಮಿಲನಾ ಪ್ರೀತಿಯನ್ನೇ ಈ ಸಿನಿಮಾದಲ್ಲಿ ತೋರಿಸಿದ್ದೀನಿ ಅಂತ ಕೃಷ್ಣ ಅವರೇ ಓಪನ್ ಆಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಇದರಲ್ಲಿ ಫೇಕ್ ಅಂಶಗಳಿಲ್ಲ. ಎಲ್ಲವೂ ರಿಯಲ್ ವಿಚಾರಗಳೇ. ಹೀಗಾಗಿ ಹೆಚ್ಚು ಗಾಢವಾಗಿದೆ.

ಅಪ್ಪು ಸರ್ ಹೋದ್ಮೇಲೆ ಗೊಂಬೆ ಹೇಳುತೈತೆ ಹಾಡುವುದಕ್ಕೆ ಭಯ ಆಗ್ತಿದೆ: Vijay Prakash

4. ಸರಳತೆ, ಸ್ನೇಹಮಯ ವರ್ತನೆ 
ಸಾಮಾನ್ಯ ಒಂದು ಸಕ್ಸಸ್‌ಫುಲ್‌ (Successful) ಸಿನಿಮಾ (Cinema) ಕೊಟ್ಟ ಕೂಡಲೇ ಸ್ಟಾರ್‌ಗಳು ಜನರಿಂದ ಡಿಸ್ಟೆನ್ಸ್ ಮೈಂಟೇನ್ ಮಾಡಲು ಶುರು ಮಾಡ್ತಾರೆ. ತಾವೊಬ್ಬ ಸ್ಟಾರ್ (Star) ನಟ ಅಥವಾ ನಟಿ ಅನ್ನೋ ಹಮ್ಮು ಬಿಮ್ಮು ಅವರ ಸ್ವಭಾವದಲ್ಲಿ ಗೋಚರಿಸೋದಕ್ಕೆ ಶುರುವಾಗುತ್ತೆ. ಇದರಿಂದ ಪ್ರೇಕ್ಷಕರು ಹಾಗೂ ನಟರ ನಡುವೆ ಗ್ಯಾಪ್ ಬೆಳೆಯುತ್ತೆ. ಆದರೆ ಕೃಷ್ಣ ಆಗಲೀ ಮಿಲನಾ ಆಗಲೀ ಜನ ಸ್ನೇಹಿಗಳು. ಅವರ ವರ್ತನೆಯಲ್ಲಿ ಹಮ್ಮು ಬಿಮ್ಮು ಇಲ್ಲದ ಕಾರಣ ಸರಳವಾಗಿ ಜನರಿಗೆ ಹತ್ತಿರವಾಗಿದ್ದಾರೆ.

5. ಸಿನಿಮಾ ವ್ಯಾಮೋಹ (Passion) 
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಿಲನಾ ಹೇಳ್ತಿದ್ರು, ನಮಗೆ ಸಿನಿಮಾ ಕಲೆಕ್ಷನ್ ಸೆಕೆಂಡರಿ, ಸಿನಿಮಾನ ಜನ ಇಷ್ಟ ಪಟ್ಟರೆ ಅದೇ ಖುಷಿ ಅಂತ. ಇದಕ್ಕೆ ಕಾರಣ ಈಗ ಇವರಿಬ್ಬರೂ ನಿರ್ದೇಶಕ, ನಿರ್ಮಾಪಕರ ಪಾತ್ರ ನಿಭಾಯಿಸಿದರೂ ಮೂಲತಃ ಇವರಿಬ್ಬರೂ ಆಕ್ಟರ್‌ಗಳೇ. ಇಬ್ಬರನ್ನೂ ಜೊತೆಯಾಗಿಸಿದ್ದು ಅವರ ಸಿನಿಮಾ ಪ್ರೀತಿ. ಇಬ್ಬರೂ ಸಿನಿಮಾ ವ್ಯಾಮೋಹಿಗಳು ಜೀವನ ಸಂಗಾತಿಗಳಾಗಿ ಸಿನಿಮಾದಲ್ಲೂ ಪಾರ್ಟ್ನರ್ಗಳಾದ್ರೆ ಬೆಸ್ಟ್ ರಿಸಲ್ಟ್ ಹೇಗಿರುತ್ತೆ ಅನ್ನೋದಕ್ಕೆ ಈ ಇಬ್ಬರೂ ಸೇರಿ ಮಾಡಿರುವ ಚಿತ್ರವೇ ಸಾಕ್ಷಿ.

Aditi prabhudeva Youtube earnings ಯುಟ್ಯೂಬ್‌ ಹಣದಲ್ಲಿ EMI ಕಟ್ಟುತ್ತಿರುವ ನಟಿ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?