ಇವ್ರಿಗೆ ಮೊಸರು ತರಲು ಹೇಳಿದ್ದೇ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು: ಯೋಗರಾಜ್​ ಭಟ್ಟರ ಪತ್ನಿ ಮಾತು ಕೇಳಿ...

Published : Feb 16, 2025, 06:44 PM ISTUpdated : Feb 16, 2025, 06:59 PM IST
ಇವ್ರಿಗೆ ಮೊಸರು ತರಲು ಹೇಳಿದ್ದೇ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು: ಯೋಗರಾಜ್​ ಭಟ್ಟರ ಪತ್ನಿ ಮಾತು ಕೇಳಿ...

ಸಾರಾಂಶ

ಯೋಗರಾಜ್ ಭಟ್ ದಂಪತಿಗಳ ಹಾಸ್ಯಭರಿತ ಯುಟ್ಯೂಬ್ ಸಂದರ್ಶನ ವೈರಲ್ ಆಗಿದೆ. ಭಟ್ಟರ ಮರೆಗುಳಿತನ, ಸಿನಿಮಾ ಪ್ರೀತಿಯನ್ನು ರೇಣುಕಾ ತಮಾಷೆಯಾಗಿ ಬಿಚ್ಚಿಟ್ಟಿದ್ದಾರೆ. ಮದುವೆ ದಿನಾಂಕ ಮರೆತರೂ, ಹಾಡುಗಳ ಸಾಲುಗಳು ನೆನಪಿರುತ್ತವೆ ಎಂದಿದ್ದಾರೆ. ಭಟ್ಟರ ಹಲವು ಹಾಡುಗಳಿಗೆ ರೇಣುಕಾ ಸ್ಫೂರ್ತಿ ಎಂದೂ ಬಹಿರಂಗವಾಗಿದೆ. ಇಪ್ಪತ್ತಮೂರು ವರ್ಷಗಳ ದಾಂಪತ್ಯದ ಸಿಹಿ-ಕಹಿಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ವಿಕಟಕವಿ ಎಂದೇ ಫೇಮಸ್​ ಆದವರು. ಅಷ್ಟು ಹಾಸ್ಯ ಪ್ರವೃತ್ತಿ ಅವರಲ್ಲಿದೆ. ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಅವರು ಎಲ್ಲಿಯೇ ಹೋದರೂ ಹಾಸ್ಯದ ಮಾತುಗಳಿಂದ ರಂಜಿಸುವುದನ್ನು ಮಾತ್ರ ಬಿಡುವುದಿಲ್ಲ. ಇನ್ನು ಅವರ ಪತ್ನಿ ರೇಣುಕಾ ಕೂಡ ಪತಿಯಂತೆಯೇ  ನಗಿಸುವಲ್ಲಿ ಪಂಟರು. ಈ ಸಂದರ್ಭದಲ್ಲಿ ದಂಪತಿ ಇಬ್ಬರೂ ಪರಸ್ಪರ ಕಾಲೆಳೆದುಕೊಳ್ಳುತ್ತಾ ಯುಟ್ಯೂಬ್​ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದೆ.

ತಮ್ಮ ಪತಿ ಯೋಗರಾಜ ಅವರಿಗೆ ಮೊಸರು ತರಲು ಹೇಳಿದ್ದು ನಾನು ಜೀವನದಲ್ಲಿ ಮಾಡಿದ ಅತಿ ದೊಡ್ಡ ತಪ್ಪು ಎಂದಿದ್ದಾರೆ ರೇಣುಕಾ.  ಇವರಿಗೆ ಸದಾ ಸಿನಿಮಾದ್ದೇ ಗುಂಗು. ನಾನು ಹೇಳಿದ್ದು ಒಂದೂ ನೆನಪಿರಲ್ಲ. ಅದಕ್ಕಾಗಿ ಒಂದೂ ಕೆಲಸ ಹೇಳಲ್ಲ. ಅದರಲ್ಲಿಯೂ ಆ ದಿನ ಮೊಸರು ತರಲು ಹೇಳಿ ತಪ್ಪು ಮಾಡಿಬಿಟ್ಟೆ. ನಾನು ಬೆಳಿಗ್ಗೆ ಹೇಳಿದ್ರೆ, ಅವರು ರಾತ್ರಿ ತಂದಿದ್ದರು ಎಂದಿದ್ದಾರೆ. ಇವರಿಗೆ  ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್​ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್​ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲ ಎಂದಿದ್ದಾರೆ ರೇಣುಕಾ.   ಇದೇ  ಭಟ್ಟರ ನೆಗೆಟಿವ್​ ಪಾಯಿಂಟ್​ ಬಗ್ಗೆ ಹೇಳಿ ಅಂದಾಗ ಸ್ಮೋಕ್​ ಮಾಡುವುದು, ಕ್ಲೀನ್​ ಇಟ್ಟುಕೊಳ್ಳದೇ ಇರುವುದು, ಮನೆ ಕೆಲಸಗಳನ್ನು ಬೇರೆ ಮರೆಯುವುದು ಇವರ ನೆಗೆಟಿವ್​ ಪಾಯಿಂಟ್​ ಎಂದ ರೇಣುಕಾ, ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದು ಪತಿಯ ಕಾಲೆಳೆದಿದ್ದಾರೆ.

ಯೋಗರಾಜ್ ಭಟ್ಟರ ಈ ಲವ್​ ಟಿಪ್ಸ್​ ಫಾಲೋ ಮಾಡಿದ್ರೆ ಗರ್ಲ್​ಫ್ರೆಂಡೂ ಸಿಕ್ತಾಳೆ, ಹೆಂಡ್ತಿನೂ ಮಾತು ಕೇಳ್ತಾಳೆ!

ಆ ಬಳಿಕ, ಇವರಂಥ ಪತಿಯನ್ನು ಪಡೆದಿರುವುದು ತಮ್ಮ ಪುಣ್ಯ ಎಂದೂ ಹೇಳಿದ್ದಾರೆ.  ಯೋಗರಾಜ ಭಟ್ಟರು ಬರೆದಿರುವ ಹಲವಾರು ಕವಿತೆಗಳಿಗೆ ಪತ್ನಿಯೇ ಸ್ಫೂರ್ತಿ ಎನ್ನುವುದೂ ಈ ಸಂದರ್ಶನದಲ್ಲಿ ತಿಳಿದು ಬಂತು. ಯೋಗರಾಜ ಭಟ್ಟರು ಲೇಟಾಗಿ ಬಂದಾಗ ಬಾಗಿಲು ತೆರೆಯದಿದ್ದಾಗ ಒಂದು ಹಾಡು, ಪತ್ನಿ ಸಿಟ್ಟಾದಾಗ ಇನ್ನೊಂದು ಹಾಡು, ಮನೆ ಕೆಲಸ ಮಾಡಲು ಹೇಳಿ ಅದನ್ನು ಮಾಡದೇ ಹೋದಾಗ ಪತ್ನಿ ಮುನಿಸಿಕೊಂಡಾಗ ಮತ್ತೊಂದು ಹಾಡು, ಅಂಗಡಿಯಿಂದ ಏನಾದರೂ ತರಲು ಹೇಳಿದಾಗ ಮರೆತ ಸಂದರ್ಭದಲ್ಲಿ ಪತ್ನಿ ತೋರುವ ರಿಯಾಕ್ಷನ್​ಗೆ ಇನ್ನೊಂದು ಹಾಡು... ಹೀಗೆ ಭಟ್ಟರ ಹಲವಾರು ಹಾಡುಗಳಿಗೆ ಪತ್ನಿ ರೇಣುಕಾ ಅವರೇ ಸ್ಫೂರ್ತಿಯಾಗಿದ್ದಾರಂತೆ. 

ಅಂದಹಾಗೆ ರೇಣುಕಾ ಮತ್ತು ಯೋಗರಾಜ್​ ಭಟ್​ ಅವರ ದಾಂಪತ್ಯ ಜೀವನದಲ್ಲಿ 23 ವರ್ಷಗಳಾಗಿದ್ದು, ಈವರೆಗಿನ ಪಯಣವನ್ನು ಶೇರ್​ ಮಾಡಿಕೊಂಡಿದ್ದಾರೆ. ಇದೇ ವೇಳೆ ಭಟ್ಟರ ಹಲವಾರು ಸೀಕ್ರೇಟ್​ಗಳನ್ನು ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ರೇಣುಕಾ ಅವರು ಶೇರ್​ ಮಾಡಿಕೊಂಡಿದ್ದಾರೆ. ಯೋಗರಾಜ್​ ಭಟ್​ ಅವರ ಪ್ಲಸ್​, ಮೈನಸ್​ ಪಾಯಿಂಟ್ಸ್​ಗಳನ್ನು ರೇಣುಕಾ ಅವರು ಹೇಳಿದರೆ, ಪತ್ನಿಯ ಬಗ್ಗೆ ಎಲ್ಲಾ  ವಿಷಯಗಳನ್ನು ಭಟ್ಟರು ಹೇಳಿದ್ದಾರೆ.

ನನ್ ಹೆಂಡ್ತಿ ಉಗಿದಿರೋ ಎಲ್ಲಾ ಸಾಂಗೂ ಹಿಟ್ಟೇ: ಯೋಗರಾಜ ಭಟ್ಟರ ಯಶಸ್ವಿನ ಹಿಂದಿರೋ ಗುಟ್ಟು ಇದಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್