ಮುತ್ತು ಕೊಟ್ಟಿದ್ರು ಪ್ರಧಾನಿ ಇಂದಿರಾ ಗಾಂಧಿ, 'ಮಿಸ್ ಲೀಲಾವತಿ'ಗೆ ಸ್ವಿಮ್ ಸ್ಯೂಟ್ ಧರಿಸಿದ್ದ ಜಯಂತಿ!

Published : Feb 16, 2025, 03:48 PM ISTUpdated : Feb 16, 2025, 04:19 PM IST
ಮುತ್ತು ಕೊಟ್ಟಿದ್ರು ಪ್ರಧಾನಿ ಇಂದಿರಾ ಗಾಂಧಿ, 'ಮಿಸ್ ಲೀಲಾವತಿ'ಗೆ ಸ್ವಿಮ್ ಸ್ಯೂಟ್ ಧರಿಸಿದ್ದ ಜಯಂತಿ!

ಸಾರಾಂಶ

60-80ರ ದಶಕದಲ್ಲಿ ಚಿತ್ರರಂಗದಲ್ಲಿ ಮಡಿವಂತಿಕೆ ಹೆಚ್ಚಿದ್ದ ಕಾಲದಲ್ಲಿ, ನಟಿ ಜಯಂತಿ 'ಮಿಸ್ ಲೀಲಾವತಿ' (೧೯೬೫) ಚಿತ್ರದಲ್ಲಿ ಸ್ವಿಮ್‌ಸೂಟ್ ಧರಿಸಿ ದಾಖಲೆ ನಿರ್ಮಿಸಿದರು. ಈ ಸಾಹಸಕ್ಕೆ ಪ್ರಧಾನಿ ಇಂದಿರಾ ಗಾಂಧಿಯವರಿಂದ ಪ್ರಶಸ್ತಿ ಮತ್ತು ಮುತ್ತು ಸಂದಿತ್ತು. ಜಯಂತಿಯವರ ಈ ಬೋಲ್ಡ್ ನಡೆ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು.

ತೆರೆಯ ಮೇಲೆ ಸ್ಲಿಮ್ ಸ್ಯೂಟ್ ಧರಿಸಿದ ಮೊದಲ ನಟಿ ಅಂದ್ರೆ ಅದು ಜಯಂತಿ. ಆಗೆಲ್ಲಾ, ಅಂದ್ರೆ 60-70 ಹಾಗೂ 80 ದಶಕದಲ್ಲಿ ಚಿತ್ರರಂಗದಲ್ಲಿ ಕೂಡ ತುಂಬಾ ಮಡಿವಂತಿಕೆ ಇತ್ತು. ಸ್ವಿಮ್ ಸ್ಯೂಟ್ ಧರಿಸುವುದು ಹಾಗಿರಲಿ, ಆಗಿನ ಕಾಲದ ನಟಿಯರು ಕಾಲು ಕಾಣುವಂತಹ ಡ್ರೆಸ್ ಹಾಕುವುದು ಕೂಡ ಅಪರಾಧ ಎನ್ನವಂತಿತ್ತು ಅಂದಿನ ಸಮಾಜ. ಆದರೆ, ನಟಿ ಜಯಂತಿ (Jayanthi) ಅವರು ಮೊಟ್ಟಮೊದಲ ಬಾರಿಗೆ ಸಿನಿಮಾದಲ್ಲಿ 'ಈಜುಡೆಗೆ' ಧರಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ್ದರು. 

1965ರಲ್ಲಿ ತೆರೆ ಕಂಡಿದ್ದ 'ಮಿಸ್ ಲೀಲಾವತಿ' ಚಿತ್ರದಲ್ಲಿ ನಟಿ ಜಯಂತಿ ಅವರು ಅಂದಿನ ಕಾಲದಲ್ಲಿ ಯಾರೂ ಧರಿಸಿ ನಟನೆ ಮಾಡದಿದ್ದ ಸ್ವಿಮ್ ಸ್ಯೂಟ್ ಧರಿಸಿದ್ದರು. ಆ ಚಿತ್ರಕ್ಕೆ ಅದರ ಅಗತ್ಯವಿತ್ತು ಅನ್ನೋದು ಬೇರೆ ಮಾತು! ಯಾವುದೇ ಸಿನಿಮಾದಲ್ಲಿ ಸ್ವಿಮ್ ಸ್ಯೂಟ್ ಅಥವಾ ಕಿಸ್ ಅಗತ್ಯವಿದ್ದರೂ ಅದನ್ನು ಮಾಡಲು ಅಂದು ಎಲ್ಲಾ ನಟಿಯರೂ ಹಿಂದೇಟು ಹಾಕುತ್ತಿದ್ದರು. ಆದರೆ, ಸಿನಿಮಾಕ್ಕೆ ಅಗತ್ಯವಿದ್ದ ಸ್ವಿಮ್ ಸ್ಯೂಟ್ ಧರಿಸಿ ಜಯಂತಿ ನಟಿಸಿ ಸೈ ಎನ್ನಿಸಿಕೊಂಡು ಹೊಸ ದಾಖಲೆ ನಿರ್ಮಿಸಿದ್ದರು. 

ಗಂಡ-ಹೆಂಡತಿ ಅಷ್ಟೇ ಅಲ್ಲ, ಇನ್ನೇನೋ ಅಂತೆ.. ವ್ಯಾಲೆಂಟೈನ್ ಡೇ ಸಿಕ್ಕಿಬಿದ್ದ ಯಶ್-ರಾಧಿಕಾ ಜೋಡಿ..!

ಉದಯ್‌ ಕುಮಾರ್ ನಾಯಕತ್ವದ ಮಿಸ್ ಲೀಲಾವತಿ ಚಿತ್ರದಲ್ಲಿ ನಟಿ ಜಯಂತಿಯವರ ಅಮೋಘ ನಟನೆಗೆ 'ಪ್ರಧಾನಿ ಪುರಸ್ಕಾರ' ಕೂಡ ಸಿಕ್ಕಿತ್ತು. ಅಂದು ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರು ನಟಿ ಜಯಂತಿಗೆ ಈ ಚಿತ್ರಕ್ಕೆ ಪ್ರಶಸ್ತಿ ಕೊಟ್ಟಿದ್ದು ಮಾತ್ರವಲ್ಲ, ವೇದಿಕೆಯ ಮೇಲೆ ಮುತ್ತು ಕೊಟ್ಟು ಶುಭ ಹಾರೈಸಿದ್ದರು. ಈ ಚಿತ್ರದಲ್ಲಿ ನಟಿ ಜಯಂತಿ ಸ್ವಿಮ್ ಸ್ಯೂಟ್ ಮಾತ್ರವಲ್ಲ, ನೈಟಿ, ಟೀಶರ್ಟ್ ಹಾಗೂ ಸ್ಕರ್ಟ್ ಕೂಡ ಹಾಕಿ ಮಿಂಚಿದ್ದರು. ಸಂಪ್ರದಾಯವನ್ನು ಬದಿಗೊತ್ತಿ ನಟಿಸಿದ್ದರು. 

ನಟಿ ಜಯಂತಿಯವರು ಅಂದು ಬೋಲ್ಡ್ ಪಾತ್ರಗಳನ್ನು ಮಾಡುವುದರಲ್ಲಿ ತುಂಬಾ ಪ್ರಸಿಧ್ಧಿ ಪಡೆದಿದ್ದರು. ಜೊತೆಗೆ, ಡಾ ರಾಜ್‌ಕುಮಾರ್ ಸೇರಿದಂತೆ ಹಲವು ನಾಟಕನಟರಿಗೆ ಹಲವು ಸಮಾರಂಭಗಳಲ್ಲಿ ವೇದಿಕೆ ಮೇಲೆಯೇ ಅಪ್ಪಿಕೊಂಡು ಚುಂಬಿಸುತ್ತಿದ್ದರು ಕೂಡ. ಅವರಿಗೆ ಮುತ್ತು ಕೊಡುವ ಹವ್ಯಾಸ ಇತ್ತು ಎಂಬುದು ಸೀಕ್ರೆಟ್ ಏನೂ ಅಲ್ಲ. ಅದನ್ನು ಹಲವರು ಸ್ವತಃ ಅನುಭವಿಸಿದ್ದಾರೆ, ನೋಡಿದ್ದಾರೆ ಕೂಡ..!

ಧರ್ಮಪತ್ನಿ ಪಾರ್ವತಮ್ಮ ಬಗ್ಗೆ ಅಣ್ಣಾವ್ರು ಹೀಗೆ ಹೇಳಿದ್ದು, ತಮಾಷೆಗೋ or ತಮಾಷೆಯಾಗಿಯೋ...!

ಒಟ್ಟಿನಲ್ಲಿ, 1965ರಲ್ಲೇ ನಟಿ ಜಯಂತಿಯವರು ಈಜುಡೆಗೆ ಧರಿಸಿದ್ದು ಮಾತ್ರವಲ್ಲ, ದೇಶದ ಪ್ರಧಾನಿ ಇಂದಿರಾ ಗಾಂಧಿ ಅವರಿಂದಲೇ ಮೆಚ್ಚುಗೆ ಪಡೆದಿದ್ದರು. ಬರೀ ಮೆಚ್ಚುಗೆ ಮಾತ್ರವಲ್ಲ, ಮುತ್ತು ಕೂಡ ಪಡೆದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದರು. ಇಂದು ನಟಿ ಜಯಂತಿ ನಮ್ಮೊಂದಿಗೆ ಇಲ್ಲ. ಆದರೆ, ಅವರು ನಟಿಸಿದ ಸಿನಿಮಾಗಳು, ಅವರ ಸಾಧನೆಗಳು, ವಿವಾದಗಳು ಹೀಗೆ ಎಲ್ಲವೂ ನಮ್ಮೊಂದಿಗೆ ನೆನಪಾಗಿ, ದಾಖಲೆಗಳಾಗಿ ಇವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್