ರಾಣಿಬೆನ್ನೂರಿನಲ್ಲಿ D-ಬಾಸ್; ಅಬ್ಬಬ್ಬಾ!!! ಗರಡಿ ಟ್ರೇಲರ್ ಲಾಂಚ್‌ನಲ್ಲಿ ಏನಾಯ್ತು ನೋಡಿ

By Kannadaprabha News  |  First Published Nov 3, 2023, 10:29 AM IST

ರಾಣಿಬೆನ್ನೂರಿನಲ್ಲಿ ಅದ್ಧೂರಿ ಸಮಾರಂಭದಲ್ಲಿ ಗರಡಿ ಚಿತ್ರದ ಟ್ರೇಲರ್ ಬಿಡುಗಡೆ. ಚಿತ್ರ ತಂಡಕ್ಕೆ ಸಾಥ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್


‘ನಿರ್ದೇಶಕ ಯೋಗರಾಜ್ ಭಟ್ ಇದುವರೆಗೂ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಚಿತ್ರ ಇದಾಗಿದೆ. ಗರಡಿ ಬೇರೆ ಜಾನರ್ ಸಿನೆಮಾ. ಚಿತ್ರದಲ್ಲಿ ನಾಯಕ, ನಾಯಕಿ ಅದ್ಭುತ ನಟನೆ ಮಾಡಿದ್ದಾರೆ. ನಿಶ್ವಿಕಾ ನಾಯ್ಡು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಣೆಬೆನ್ನೂರಲ್ಲಿ ಹಲವಾರು ಕುಸ್ತಿಪಟುಗಳಿದ್ದಾರೆ. ಈ ಚಿತ್ರ ಕುಸ್ತಿಪಟುಗಳಿಗೆ ಉತ್ಸಾಹ ತುಂಬುತ್ತದೆ’.

- ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ನಡೆದ ‘ಗರಡಿ’ ಚಿತ್ರದ ಅದ್ದೂರಿ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ ಮಾತುಗಳಿವು. ಬಿ.ಸಿ. ಪಾಟೀಲ್ ನಿರ್ಮಾಣದ, ಯೋಗರಾಜ ಭಟ್ ನಿರ್ದೇಶನದ ‘ಗರಡಿ’ ನ.10ರಂದು ಬಿಡುಗಡೆ ಆಗಲಿದೆ.

Tap to resize

Latest Videos

ರಾಣೆಬೆನ್ನೂರಿನಲ್ಲಿ 'ಗರಡಿ' ಜನಜಾತ್ರೆ, ಚಾಲೆಂಜಿಂಗ್ ಸ್ಟಾರ್ ನೋಡಲು ಜನಸಾಗರ; ದರ್ಶನ್ ಹೇಳಿದ್ದೆನು?

ಅಭಿಮಾನಿಗಳ ಸಂಭ್ರಮದ ಮಧ್ಯೆ ಟ್ರೇಲರ್ ಬಿಡುಗಡೆ ಮಾಡಿದ ಅವರು, ‘ಯುವ ಕಲಾವಿದರು ಜೀವನದಲ್ಲಿ ತಾಳ್ಮೆ ಇಟ್ಟುಕೊಳ್ಳಬೇಕು. ಎಲ್ಲರಿಗೂ ಟೈಮ್ ಬಂದೇ ಬರುತ್ತದೆ. ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಿಂಗಾರಿ ಚಿತ್ರದಿಂದ ಸೂರ್ಯ ನನ್ನ ಜತೆ ಇದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಅಪೂರ್ವ ಅವಕಾಶ ಸಿಕ್ಕಿದೆ. ಗರಡಿ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಮುಂದೆಯೂ ಹೊಸ ಪ್ರತಿಭೆಗಳಿಗೆ ಕೌರವ ಪ್ರೊಡಕ್ಷನ್‌ನಲ್ಲಿ ಅವಕಾಶ ಸಿಗಲಿ. ಉತ್ತರ ಕರ್ನಾಟಕ ಜನರು ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಿ’ ಎಂದರು.

ನಿರ್ಮಾಪಕ ಬಿ ಸಿ ಪಾಟೀಲ್, ‘ದರ್ಶನ್ ಆಸೆಯಂತೆ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರಿನಲ್ಲಿ ಆಯೋಜಿಸಲಾಗಿದೆ. ಪ್ರಾಚೀನತೆ, ಪರಂಪರೆಯ ಪ್ರತೀಕವಾಗಿರುವ ಜನಪದ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ನಮ್ಮ ಅಪ್ಪಟ ದೇಶಿ ಗರಡಿಮನೆಯ ಕುಸ್ತಿ ಕಲೆಗಳು ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ, ಬೆಳೆಸಿ, ಇಂದಿನ ಆಧುನಿಕ, ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯವೇ ‘ಗರಡಿ’ ಚಿತ್ರದ ಉದ್ದೇಶ’ ಎಂದರು.

ನಿರ್ದೇಶಕ ಯೋಗರಾಜ ಭಟ್, ‘ಎರಡು ವರ್ಷಗಳ ಹಿಂದೆ ನ.14ರಂದು ಹಿರೇಕೆರೂರಲ್ಲಿ ಚಿತ್ರವನ್ನು ಲಾಂಚ್ ಮಾಡಲಾಗಿತ್ತು. ಕೇವಲ ಒಂದೂವರೇ ವರ್ಷಗಳ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ’ ಎಂದರು.

ಗರಡಿಯಲ್ಲಿ ಗಂಡ್ಮಕ್ಕಳೇ ಅರೆಬಟ್ಟೆಯಲ್ಲಿ: ಸೋನಲ್ ಮೊಂತೆರೋ

ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್, ‘ಗರಡಿ ಚಿತ್ರದ ನಿಜವಾದ ಬೆನ್ನೆಲುಬು ದರ್ಶನ್. ಅವರನ್ನು ನಾನು ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತೇನೆ. ಕೌರವ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗರಡಿ 18ನೇ ಚಲನಚಿತ್ರ. ಸಂಸ್ಥೆ ವತಿಯಿಂದ ಈ ಹಿಂದೆ ನಿರ್ಮಿಸಿದ ಚಿತ್ರಗಳಿಗೆ ಆಶೀರ್ವದಿಸಿದಂತೆ ಈ ಚಿತ್ರವನ್ನು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.

ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್, ಪ್ರಧಾನ ಪಾತ್ರದಲ್ಲಿ ಬಿ.ಸಿ. ಪಾಟೀಲ್ ನಟಿಸಿದ್ದಾರೆ. ಯಶಸ್ ಸೂರ್ಯ, ಸುಜಯ್ ಬೇಲೂರು, ಸೋನಲ್ ಮೊಂತೆರೋ ತಾರಾಬಳಗದಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪೈಲ್ವಾನರುಗಳನ್ನು ಸನ್ಮಾನಿಸಲಾಯಿತು.

ದರ್ಶನ್ ಅವರನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ‘ಡಿ ಬಾಸ್, ಡಿ ಬಾಸ್’ ಎಂದು ಹರ್ಷೋದ್ಗಾರ ಮಾಡಿದರು. ಇದೇ ಮೊದಲ ಬಾರಿಗೆ ಚಲನಚಿತ್ರವೊಂದರ ಟ್ರೈಲರ್ ಅನ್ನು ರಾಣೆಬೆನ್ನೂರಲ್ಲಿ ಬಿಡುಗಡೆಗೊಳಿಸಿದ್ದರಿಂದ ಈ ವರ್ಣರಂಜಿತ ಕಾರ್ಯಕ್ರಮವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಕಲಾವಿದರ ನೃತ್ಯರೂಪಕಗಳಿಗೆ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು.

 

click me!