ಇತಿಹಾಸ ಸೃಷ್ಟಿಸಿದ KGF-2ಗೆ 1 ವರ್ಷ; ವಿಶೇಷ ವಿಡಿಯೋ ಮೂಲಕ ಪಾರ್ಟ್-3 ಸುಳಿವು ನೀಡಿದ ಹೊಂಬಾಳೆ ಫಿಲ್ಮ್ಸ್

By Shruthi KrishnaFirst Published Apr 14, 2023, 12:15 PM IST
Highlights

ರಾಕಿಂಗ್ ಯಶ್ ಮತ್ತು ಪ್ರಶಾಂತ ನೀಲ್ ಕಾಂಬಿನೇಷನ್‌ನ ಕೆಜಿಎಫ್ -2 ಸಿನಿಮಾ ರಿಲೀಸ್ ಆಗಿ 1 ವರ್ಷ ಪೂರೈಸಿದೆ. 

ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಸೃಷ್ಟಿಸಿದ, ಇಡೀ ವಿಶ್ವವೇ ಕನ್ನಡ ಸಿನಿನಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಪೂರೈಸಿದೆ. ಕನ್ನಡ ಸಿನಿಮಾರಂಗದ  ಶಕ್ತಿ, ತಾಕತ್ತನ್ನು ಸಾಬೀತು ಮಾಡಿದ ಕೆಜಿಎಫ್ ಮೊದಲ ಭಾಗ ರಿಲೀಸ್ ಆಗಿ ನಾಲ್ಕು ವರ್ಷಗಳ ಬಳಿಕ ಬಿಡುಗಡೆ ಆದ ಸಿನಿಮಾ ಕೆಜಿಎಫ್ 2. ಇದು ಇಡೀ ಭಾರತೀಯ ಸಿನಿಮಾರಂಗವೇ ಅಚ್ಚರಿ ಪಡುವಂತೆ ಮಾಡಿತ್ತು. ಕನ್ನಡ ಸಿನಿಮಾರಂಗಕ್ಕೆ ಹೊಸ ಭಾಷ್ಯ ಬರೆದ ಕೆಜಿಎಫ್ 2 ಸಿನಿಮಾ ಮಾಡಿದ ದಾಖಲೆ ಒಂದೆರಡಲ್ಲ. ಅನೇಕ ಬಾಲಿವುಡ್ ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿ ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನನಿಮಾಗಳ ಲಿಸ್ಟ್‌ನಲ್ಲಿ ಕೆಜಿಎಫ್-2 ಜಾಗ ಪಡೆದಿರುವುದು ವಿಶೇಷ. 

ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದಲ್ಲದೇ ಅತೀ ಹೆಚ್ಚು ಕಲೆಕ್ಷನ್ ಕೂಡ ಮಾಡಿದೆ. ರಾಕಿ ಭಾಯ್ ಆಗಿ ರಾಕಿಂಗ್ ಸ್ಟಾರ್ ಯಶ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ರಾಕಿಂಗ್ ಸ್ಟಾರ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನ, ರವಿ ಬಸ್ರೂರು ಸಂಗೀತ, ಫೈಟಿಂಗ್, ಮೇಕಿಂಗ್ ಪ್ರತಿಯೊಂದು ವಿಚಾರದಲ್ಲೂ ಕೆಜಿಎಫ್ -2 ಅಭಿಮಾನಿಗಳ ಹೃದಯ ಗೆದ್ದಿತ್ತು. ಕನ್ನಡ ಸಿನಿಮಾರಂಗದ ಮಾತ್ರವಲ್ಲದೇ ಭಾರತೀಯ ಸಿನಿಮಾರಂಗದಲ್ಲೇ ಕೆಜಿಎಫ್ ಒಂದು ಮಾಸ್ಟರ್  ಪೀಸ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿರುವ ಕೆಜಿಎಫ್ ಬಿಡುಗಡೆಯಾಗಿ ಒಂದು ವರ್ಷದ ಖುಷಿಗೆ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೋ ಶೇರ್ ಮಾಡಿದ್ದಾರೆ. 

ಕೆಜಿಎಫ್ -2 ಸಿನಿಮಾದ ಪ್ರೋಮೋ ಜೊತೆಗೆ ಪಾರ್ಟ್-3 ಬಗ್ಗೆ ಸುಳಿವು ನೀಡುವ ಮೂಲಕ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದ್ದಾರೆ. ಹೌದು, ಕೆಜಿಎಫ್-2 ಕ್ಲೈಮ್ಯಾಕ್ಸ್‌ನಲ್ಲೇ ಪಾರ್ಟ್-3 ಬಗ್ಗೆ ಸುಳಿವು ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಸಿದ್ದರು. ಅದರಂತೆ ಪಾರ್ಟ್-3 ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಆದರೆ ಸದ್ಯಕ್ಕಿಲ್ಲ ಎಂದು ಹೇಳುತ್ತಾ ಬಂದಿದ್ದ ಹೊಂಬಾಳೆ ಫಿಲ್ಮ್ಸ್ ಇದೀಗ ಶೇರ್ ಮಾಡಿರುವ ವಿಡಿಯೋದಲ್ಲಿ ಮತ್ತೆ ಪಾರ್ಟ್-3 ಬಗ್ಗೆ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

Yash 19: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಲೇಡಿ ನಿರ್ದೇಶಕಿ, ಇಂಟ್ರಸ್ಟಿಂಗ್ ವಿಚಾರ ವೈರಲ್

ಹೊಂಬಾಳೆ ಫಿಲ್ಮ್ಸ್ ಪ್ರೋಮೋ ಶೇರ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿತ್ತು. ಕೆಜಿಎಫ್ ಪಾರ್ಟ್-3 ಹ್ಯಾಷ್ ಟ್ಯಾಗ್ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದರು. ಪಾರ್ಟ್-3ನಲ್ಲೂ ಯಶ್ ರಾಕಿ ಭಾಯ್ ಆಗಿ ಅಬ್ಬರಿಸಲಿದ್ದಾರೆ. ಆದರೆ ಯಾವಾಗ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

The most powerful promise kept by the most powerful man 💥

KGF 2 took us on an epic journey with unforgettable characters and action. A global celebration of cinema, breaking records, and winning hearts. Here's to another year of great storytelling! … pic.twitter.com/iykI7cLOZZ

— Hombale Films (@hombalefilms)

ಅತ್ತಿಗೆ, ಯಶ್ 19 ಸಿನಿಮಾ ಘೋಷಿಸಿ ಇಲ್ಲಾಂದ್ರೆ ಸ್ಟ್ರೈಕ್ ಮಾಡ್ತೀವಿ - ರಾಧಿಕಾಗೆ ಯಶ್ ಫ್ಯಾನ್ಸ್ ಆವಾಜ್

ಯುಶ್ ಮುಂದಿನ ಸಿನಿಮಾದ ಬಗ್ಗೆ ಹೆಚ್ಚಿದ ಕುತೂಹಲ 

ರಾಕಿಂಗ್ ಸ್ಟಾರ್ ಕೆಜಿಎಫ್-2 ಬಳಿಕ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಂದು ವರ್ಷವಾದರೂ ಇನ್ನೂ ಸಿನಿಮಾ ಯಾವಾಗ ಎನ್ನುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.  ಕೆಜಿಎಫ್ -2 ಸೂಪರ್ ಸಕ್ಸಸ್  ಬಳಿಕ ಯಶ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕರ್ನಾಟಟಕ ಮಾತ್ರವಲ್ಲದೇ ಭಾರತೀಯರು ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಹಾಗಾಗಿ ರಾಕಿಂಗ್ ಸ್ಟಾರ್ ಅಳೆದುತೂಗಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ಸಿನಿಮಾದ ತಯಾರಿಯಲ್ಲಿದೆ. ಯಾವಾಗ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.    

 

click me!