ವಿನೋದ್ ರಾಜ್‌ ಮದುವೆಯಲ್ಲಿ 7 ಜನ ಇದ್ರು ಅಷ್ಟೆ; ನೋವು ಕೊಡುವವರು ನರಕಕ್ಕೆ ಬೀಳ್ತಾರೆ ಎಂದ ಹಿರಿಯ ನಟಿ ಲೀಲಾವತಿ

Published : Apr 14, 2023, 12:07 PM IST
ವಿನೋದ್ ರಾಜ್‌ ಮದುವೆಯಲ್ಲಿ 7 ಜನ ಇದ್ರು ಅಷ್ಟೆ; ನೋವು ಕೊಡುವವರು ನರಕಕ್ಕೆ ಬೀಳ್ತಾರೆ ಎಂದ ಹಿರಿಯ ನಟಿ ಲೀಲಾವತಿ

ಸಾರಾಂಶ

ಕೊನೆಗೂ ಮಗನ ಮದುವೆ ಬಗ್ಗೆ ಮೌನ ಮುರಿದ ನಟಿ ಲೀಲಾವತಿ. ಇದು ಅದ್ಧೂರಿ ಮದುವೆ ಅಲ್ಲ ಅದಿಕ್ಕೆ ಹೇಳಿಲ್ಲ ಎಂದ ನಟಿ....

ಕೆಲವು ದಿನಗಳಿಂದೆ ಸಾಮಾಜಿಕ ಜಾಲತಾಣದಲ್ಲಿ ನಟ ವಿನೋದ್ ರಾಜ್‌ ಮದುವೆ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ವಿನೋದ್‌ಗೆ ಮದುವೆಯಾಗಿದೆ ಇಡೀ ಕುಟುಂಬ ಚೆನ್ನೈನಲ್ಲಿದ್ದಾರೆ ಕಾಲೇಜ್‌ ವಯಸ್ಸಿನ ಮಗನಿದ್ದಾನೆ ಅವನ ಮಾರ್ಕ್ಸ್ ಕಾರ್ಡ್‌ ನೋಡಿ ಎಂದು ಹರಿದಾಡುತ್ತಿದೆ. ಈ ವಿಚಾರವನ್ನು ಮೊದಲು ಪೋಸ್ಟ್‌ ಮಾಡಿದ್ದು ನಿರ್ದೇಶಕ ಹಾಗೂ ಡಾ. ರಾಜ್‌ಕುಮಾರ್ ಕುಟುಂಬಕ್ಕೆ ಸಖತ್ ಕ್ಲೋಸ್ ಆಗಿರುವ ಪ್ರಕಾಶ್‌ರಾಜ್‌ ಮೇಹು ಅವರು. ವಿನೋದ್ ಫ್ಯಾಮಿಲಿ ಫೋಟೋ, ಪುತ್ರನ ಮಾರ್ಕ್ಸ್‌ ಕಾರ್ಡ್‌ ಎಲ್ಲವೂ ಅಪ್ಲೋಡ್ ಮಾಡಿದ್ದಾರೆ. ವಿನೋದ್‌ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ ಆದರೆ ಲೀಲಾವತಿ ಅವರು ಮೌನ ಮುರಿದಿದ್ದಾರೆ. 

'ನೀಟ್ ಇದೆ ಅಲ್ವಾ? ಸೊಟ್ಟಪಟ್ಟ ಇಲ್ದೇ ಅಂಕು ಡೊಂಕು ಇಲ್ದೇ ಕಳ್ಳರ ಹಾಗೆ ಸುಳ್ಳರ ಹಾಗೆ ಇಲ್ದೆ ನೆಮ್ಮದಿಯಾಗಿ ನೀಟಾಗಿ ಇದೆ. ಮಗನಿಗೆ ಮದುವೆ ಮಾಡಿದ್ದೀನಿ ಆದರೆ ಈ ವಿಚಾರ ಹೇಳಿಲ್ಲ ಯಾಕೆ ಅಂದ್ರೆ ಎಂಥೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್‌ಗಳಲ್ಲಿ ಮದುವೆ ಮಾಡಿಕೊಂಡಿದ್ದಾರೆ. ನನಗೆ ಆ ಚೈತನ್ಯ ಇರಲಿಲ್ಲ. ಹಾಗಾಗಿ ಅದನ್ನು ರಹಸ್ಯವಾಗಿ ಇಡುವುದೇ ಒಳ್ಳಯದು ಅನಿಸಿತ್ತು. ಅವನೇನು ಹೆಣ್ಣು ಹುಡುಗಿ ಅಲ್ಲ, ಕದ್ದು ಬಸುರಾಗಿದ್ದಕ್ಕೆ ಮದುವೆ ಮಾಡಿಸಿದೆ ಎಂದು ಹೇಳುವುದಕ್ಕೆ. ಪವಿತ್ರವಾಗಿ ಇದ್ದಾನೆ. ನನಗೆ ಒಳ್ಳೆಯ ಮಗನಾಗಿ ಇದ್ದಾನೆ. ನಾನೇ ಇಷ್ಟಪಟ್ಟು ಮದುವೆ ಮಾಡಿಸಿದೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದೆ. ನನಗೆ ಅನಿಸಿತ್ತು ಅದು ಶ್ರೇಷ್ಠವಾಗ ಜಾಗ ಅಂತ. ಎಲ್ಲರಿಗೂ ಗೊತ್ತಿದೆ ಕೊಂಡು ಮಾತು, ಡೊಂಕು ಮಾತು ಕೇಳುವ ಬದಲು ಮಾತನಾಡುವುದಕ್ಕಿಂತ ಪರಿ ಶುದ್ಧವಾದ ಜಾಗದಲ್ಲಿ ಮದುವೆ ಮಾಡುವುದು ಒಳ್ಳೆಯದು ಎನಿಸಿತ್ತು. ವೆಂಟರಮಣ ಸನ್ನಿಧಿಯಲ್ಲಿ ಮಾಡಿಸಿದೆ. 7 ಜನ ಕನ್ನಡಿಗರು ಮದುವೆಗೆ ಬಂದಿದ್ದರು' ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ಗೆ ಲೀಲಾವತಿ ಪ್ರತಿಕ್ರಿಯೆ ನೀಡಿದ್ದಾರೆ. 

ಹಿರಿಯ ನಟಿ ಲೀಲಾವತಿ ಪುತ್ರನಿಗೆ ಮದುವೆಯಾಗಿ ಎಂಜಿನಿಯರ್ ಓದುತ್ತಿರುವ ಮಗನಿದ್ದಾನೆ!?, ನಿರ್ದೇಶಕನ ಪೋಸ್ಟ್ ವೈರಲ್

ಮದುವೆ ಮನೆಯಲ್ಲಿ ಏನು ಲೀಲಾವತಿಯವರೇ ನಿಮ್ಮ ಮಗನ ಮದುವೆಯಲ್ಲಿ ಕೇಲವ 7 ಜನ ಮಾತ್ರ ಬಂದಿದ್ದಾರೆ ನಿಮಗೆ ಜನ ಸಿಗಲಿಲ್ವಾ ಎಂದರು. ಆದರೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿ ಇದ್ದಾರೆ ಬೆರಳು ತೋರಿಸುವಂತೆ ಮಾಡಲಿಲ್ಲ ನಾನು. ಚಿನ್ನದ ಹಾಗೆ ಇದ್ದಾರೆ. ನಾನು ಯಾವುದೇ ಕೊರತೆ ಮಾಡಿಲ್ಲ. ನನಗೆ ಬಹಳ ಬೇಸರ ಆಗುತ್ತೆ ನಮ್ಮ ವೈಯಕ್ತಿ ವಿಚಾರ ಅಂತರಂಗದ ಸುದ್ದಿಯನ್ನು ಕೇಳುತ್ತಾರೆ ಅಂತ. ಯಾರು ಏನಾದರೂ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ' ಎಂದು ಲೀಲಾವತಿ ಮಾತನಾಡಿದ್ದಾರೆ.

'ಯಾರೋ ಏನೇನೋ ಅಂದುಕೊಳ್ಳುತ್ತಾರೆ ಕೇವಲ 30 ಸಾವಿರಕ್ಕೆ ಈ ಜಮೀನು ಕೊಂಡು ಕೊಂಡೆ ಎಂದು. ಮೊಮ್ಮಗನಿಗೆ ಸೊಸೆಗೆ ಒಳ್ಳೆ ಬಂಗಲೆ ಇದೆ. ಎಲ್ಲಾ ಸೌಕರ್ಯ ಇದೆ ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ. ನನ್ನ ಬಡತನದ ಬಗ್ಗೆ ಹೇಳಿಕೊಳ್ಳಲು ಸಂಕೋಚ ಆಗುತ್ತೆ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ ಆದರೂ ನನ್ನ ಮಗನ ಮದುವೆ ವಿಜೃಂಬಣೆಯಿಂದ ಮಾಡಿಲ್ಲ ಎಂದು. ಬೇಸರ ಇದೆ. ಯಾವ ತಾಯಿ ಕೂಡ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಇರೋದು ಬೇಡ ಎನ್ನುವುದಿಲ್ಲ' ಎಂದು ಲೀಲಾವತಿ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ