ನಾಟಕದ ಸ್ಟೇಜಲ್ಲಿ ಡಾ ರಾಜ್‌ಕುಮಾರ್ ನಡುಗ್ತಾ ಇದ್ರಂತೆ.. ಹಾಗಂತ ಹೇಳಿದ್ದು ಯಾರು ನೋಡಿ!

ಗುಬ್ಬಿ ವೀರಣ್ಣವ್ರು, ನಮ್ ಅಪ್ಪಾಜಿಯವ್ರು, ಈ ಕಡೆ ನಮ್ಮ ಸುಬ್ಬಯ್ಯ ನಾಯ್ಡು ಅವ್ರ ಅಂಬರೀಷ, ಇದೇ ಊರಲ್ಲಿ ಸುಮಾರು 250 ರಿಂದ 275 ನಾಟಕಗಳನ್ನು ಆಡಿದೀವಿ.. ಅದ್ರಲ್ಲಿ ರಮಾಕಾಂತ ಅಂತ ಹೇಳಿ ಅಂಬರೀಷನ..

Dr Rajkumar Was Shaking Like Anything on The drama Stage! Look Who Said This

ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಬಹಳಷ್ಟು ಸಂಗತಿಗಳನ್ನು ಅಂದೇ ಮಾತನ್ನಾಡಿದ್ದರು. ಆದರೆ ಆ ಸಮಯದಲ್ಲಿ ಯೂಟ್ಯೂಬ್ ಹಾಗು ಸೋಷಿಯಲ್ ಮೀಡಿಯಾಗಳು ಇಲ್ಲದಿರುವ ಕಾರಣಕ್ಕೆ ಹೆಚ್ಚು ಸುದ್ದಿಯಾಗಿರಲಿಲ್ಲ. ಜೊತೆಗೆ, ಅವರು ಹೇಳಿದ್ದು ಯಾವುದೋ ಒಂದು ವೇದಿಕೆಯಲ್ಲಿ ಇದ್ದಿರಬಹುದು, ಆಗ ಅಲ್ಲಿ ಇದ್ದವರು ಕೇಳಿಸಿಕೊಂಡು ಹಲವರಿಗಷ್ಟೇ ಹೇಳಿರಬಹುದು. ಆದರೆ, ಈಗ ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೇ ಗೊತ್ತಾಗುತ್ತಿದೆ. 

ಅಮೋಘ ನಟನೆಗೆ ಮಾತ್ರ ಹೆಸರುವಾಸಿಯಾಗಿಲ್ಲ ಡಾ ರಾಜ್‌ಕುಮಾರ್.. ಜೊತೆಗೆ, ಅಪ್ರತಿಮ ಗಾಯಕರೂ ಆಗಿದ್ದರು. ಅವರಿಗೆ ಆ ಕಾರಣಕ್ಕಾಗಿಯೇ ಗಾನ ಗಂಧರ್ವ ಬಿರುದನ್ನು ಕೂಡ ದಯಪಾಲಿಸಲಾಗಿತ್ತು. ಅಂಥ ಡಾ ರಾಜ್‌ಕುಮಾರ್ ಅವರು ನಾಟಕರಂಗದಿಂದ ಅಂದರೆ, ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರು. ಅವರ ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಕೂಡ ನಾಟಕ ಕಲಾವಿದರಾಗಿದ್ದರು. ಆ ಕಾಲದಲ್ಲಿ ಸಿನಿಮಾ ಇರಲಿಲ್ಲ ಬಿಡಿ.. ಕಪ್ಪುಬಿಳುಪು ಚಿತ್ರ ಕೂಡ ಶುರುವಾಗಿದ್ದು ಡಾ ರಾಜ್‌ಕುಮಾರ್ ಕಾಲದಲ್ಲಿಯೇ ಆಗಿದೆ.

Latest Videos

ಅದೇ ನನ್ನನ್ನು 'ಬೇಡರ ಕಣ್ಣಪ್ಪ' ಪಾತ್ರಕ್ಕೆ ಎಳೆದು ತಂದಿದ್ದು:.. ಡಾ ರಾಜ್‌ಕುಮಾರ್ 

ಹೌದು, ವೃತ್ತಿ ರಂಗಭೂಮಿ ಹಿನ್ನೆಲೆಯಿಂದ (ನಾಟಕ) ಬಂದ ಡಾ ರಾಜ್‌ಕುಮಾರ್ ಅವರು ಅಂದು ಆಗಷ್ಟೇ ಸಿನಿಮಾ ನಟರಾಗಿ ಗುರುತಿಸಿಕೊಂಡಿದ್ದರು. ಬೇಡರ ಕಣ್ಣಪ್ಪ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜೊತೆಗೆ, ಬಂಗಾರದ ಮನುಷ್ಯ ಹಾಗೂ ಬಬ್ರುವಾಹನ ಸೇರಿದಂತೆ ಡಾ ರಾಜ್‌ಕುಮಾರ್ ನಟನೆಯ ಹಲವಾರು ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಆ ಮೂಲಕ ಕನ್ನಡ ಸಿನಿಪ್ರೇಕ್ಷಕರ ಆರಾಧ್ಯದೈವ ಆಗಿಬಿಟ್ಟಿದ್ದರು ಡಾ ರಾಜ್‌ಕುಮಾರ್. ತಮ್ಮ ಬೇಡರ ಕಣ್ಣಪ್ಪ ಸಿನಿಮಾದ ಪಾತ್ರದ ಬಗ್ಗೆ ಅವರೊಮ್ಮೆ ಸಾರ್ವಜನಿಕವಾಗಿ ಮಾತನಾಡುತ್ತ ಅದೇನು ಹೇಳಿದ್ದರು ಗೊತ್ತೇ? ಮುಂದೆ ನೋಡಿ.. 

ಹೌದು, ಸ್ವತಃ ನಟ ಡಾ ರಾಜ್‌ಕುಮಾರ್ ಅವರೇ ಹೀಗೆ ಹೇಳಿದ್ದಾರೆ. 'ನಾಟಕಕ್ಕೆ ಹೋದ್ರೆ, ನಾಟಕದ ಸ್ಟೇಜಲ್ಲಿ ಹೋಗಿ ವೇಷ ಹಾಕ್ಕೊಂಡು ನಿಂತ್ಕೊಂಡ್ರೆ ಒಂಥರಾ ನಡುಕ ಶುರುವಾಗ್ತಿತ್ತು ನಂಗೆ.. ಆದ್ದರಿಂದ ಇವತ್ತಿಗೂ ಕೂಡ ಆ ನಾಟಕಗಳು, ಆ ಕಲಾವಿದರು ಅವ್ರ ಬಗ್ಗೆ ಹೇಳ್ಬೇಕು ಅಂದ್ರೆ ನಂಗೆ ಹೃದಯ ತುಂಬಿ ಬರುತ್ತೆ..' ಎಂದಿದ್ದಾರೆ. ಜೊತೆಗೆ, ತಾವು ನಾಟಕರಂಗದಿಂದ ಸಿನಿಮಾಗೆ ಬಂದ ಬಗ್ಗೆಯೂ ಡಾ ರಾಜ್‌ಕುಮಾರ್ ಹೇಳಿಕೊಂಡಿದ್ದಾರೆ. 

ನಟನೆಯಲ್ಲೂ ಮ್ಯಾಜಿಕ್ಕು, ಏನಿವನ ಗಮ್ಮತ್ತು?.. ಹಳ್ಳಿ ಹೈದನ ಹಿಂದೆ ದೈವ ಶಕ್ತಿ ಇದ್ಯಾ?

ಗುಬ್ಬಿ ವೀರಣ್ಣವ್ರು, ನಮ್ ಅಪ್ಪಾಜಿಯವ್ರು, ಈ ಕಡೆ ನಮ್ಮ ಸುಬ್ಬಯ್ಯ ನಾಯ್ಡು ಅವ್ರ ಅಂಬರೀಷ, ಇದೇ ಊರಲ್ಲಿ ಸುಮಾರು 250 ರಿಂದ 275 ನಾಟಕಗಳನ್ನು ಆಡಿದೀವಿ.. ಅದ್ರಲ್ಲಿ ರಮಾಕಾಂತ ಅಂತ ಹೇಳಿ ಅಂಬರೀಷನ ತಮ್ಮನ ಪಾತ್ರ ಮಾಡ್ತಾ ಇದ್ದ.. ಆ ಪಾತ್ರವೇ ನನ್ನನ್ನು ಈ ಬೇಡರ ಕಣ್ಣಪ್ಪ ಸಿನಿಮಾಗೆ ಎಳೆದು ತಂದಿದ್ದು..' ಎಂದಿದ್ದಾರೆ ಡಾ ರಾಜ್‌ಕುಮಾರ್. 

'ನಿಮ್ಮ ಈ ವಿಶ್ವಾಸಕ್ಕೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕೋ ನನಗೆ ಗೊತ್ತಾಗ್ತಾ ಇಲ್ಲ.. ರಂಗಭೂಮಿಗಾಗ್ಲೀ ಚಿತ್ರರಂಗಕ್ಕಾಗ್ಲೀ ಕಿಂಚಿತ್ತು ಸೇವೆ ನನ್ನಿಂದ ಸಲ್ಲಿದ್ರೆ, ಅದಕ್ಕೆ ಕಾರಣ ನಾನಲ್ಲ.. ಈ ಗೌರವ ಎಲ್ಲಾ ಸಲ್ಲಬೇಕಾಗಿದ್ದು ನನ್ನ ಅಪ್ಪಾಜಿ ಅವ್ರಿಗೆ.. ನನ್ನ ಅಪ್ಪಾಜಿಯವ್ರು ಅಂದ್ರೆ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಂತ.. ನಮಗೆ ಬೆಳಕನ್ನು ತೋರಿಸಿಕೊಟ್ಟ ದೇವರು.. ಸಾಮಾನ್ಯವಾಗಿ ಅವ್ರು ರಾಕ್ಷಸ ಪಾತ್ರವನ್ನು ಮಾಡುವಲ್ಲಿ ಎತ್ತಿದ ಕೈ. 

ಅಪ್ಪ-ಅಮ್ಮನ್ನ ಯಾರಾದ್ರೂ ಬದಲಾಯಿಸೋಕೆ ಆಗುತ್ತೇನ್ರೀ..? ರವಿಚಂದ್ರನ್ ಮಾತಿಗೆ ಏನಂತೀರಾ..?

ನಮ್ಮ ಅಪ್ಪಾಜಿ ಮಾಡಿದ್ದ ರಾವಣ, ಭೀಮ, ಕಂಸ, ಜಲಂಧರ ಇಂಥ ಪಾತ್ರಗಳನ್ನು ನೋಡಿದ್ದ ನನಗೆ ಮಹಿಷಾಸುರ, ರಣಧೀರ ಕಂಠೀರವ ಇವುಗಳನ್ನೆಲ್ಲಾ ಮಾಡೋದಕ್ಕೆ ಸ್ಪೂರ್ತಿ ಕೊಟ್ತು.. ಇವತ್ತಿನ ನನ್ನ ಏಳಿಗೆನಾ ಅವ್ರು ಕಣ್ತುಂಬ ನೋಡಿದ್ರೆ, ಬಹಳ ಸಂತೋಷ ಪಡ್ತಾ ಇದ್ರು.. ಎಂದಿದ್ದರು ಡಾ ರಾಜ್‌ಕುಮಾರ್. ಬಳಿಕ ಅವರು ಅದೆಷ್ಟು ಬೆಳೆದರು ಎಂಬುದು ಎಲ್ಲರಿಗೂ ಗೊತ್ತು. ತಮ್ಮ ನಟನಾ ಜೀವನದ ಶುರುವಿನಲ್ಲಿ ತಮ್ಮ ಎಲ್ಲಾ ಯಶಸ್ಸನ್ನು ಅಪ್ಪಾಜಿಗೆ ಅರ್ಪಿಸಿದ್ದ ಡಾ ರಾಜ್‌ಕುಮಾರ್ ಅವರು ಬಳಿಕ ಅಭಿಮಾನಿಗಳೇ ನನ್ನ ದೇವರು ಎಂದಿದ್ದಾರೆ.

vuukle one pixel image
click me!