ಸೌತ್‌ಗೆ ರಾಧಿಕಾ ಪಂಡಿತ್‌ ನಾರ್ತ್‌ಗೆ ಮಾಧುರಿ ದೀಕ್ಷಿತ್ ಸಂತೂರ್ ಮಮ್ಮಿಗಳಾ? ಕಾಮೆಂಟ್‌ ಬರ್ತಿವೆ ಹೀಗಂತ!

By Shriram Bhat  |  First Published Jul 17, 2024, 1:18 PM IST

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರಾಧಿಕಾ ಪಂಡಿತ್ ಹಾಗು ಮಾಧುರಿ ದೀಕ್ಷಿತ್ ಅವರನ್ನು ಈ ಫೋಟೋದಲ್ಲಿ ನೋಡಿ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮಾಧುರಿ-ರಾಧಿಕಾ ಇಬ್ಬರೂ 'ಸಂತೂರ್ ಮಮ್ಮಿಗಳು' ಎಂದಿದ್ದಾರೆ. ಅವರಲ್ಲೊಬ್ಬರು..


ಇತ್ತೀಚಿಗಷ್ಟೇ ನಡೆದ ಅಂಬಾನಿ (Ambani Family) ಕುಟುಂಬದ ಮದುವೆಗೆ ಗಣ್ಯಾತಿಗಣ್ಯರು ಹೋಗಿ ಆದರಾತಿಥ್ಯ ಸ್ವೀಕರಿಸಿ ಬಂದಿದ್ದು ಗೊತ್ತೇ ಇದೆ. ಅಂಬಾನಿ ಕುಟುಂಬದ ಅನಂತ್ ಅಂಬಾನಿ (Anant Ambani) ಹಾಗು ರಾಧಿಕಾ ಮರ್ಚಂಟ್ (Radhika Merchant) ಜೋಡಿ ಮದುವೆಗೆ ಭಾರತದ ವಿಐಪಿಗಳು ಸೇರಿದಂತೆ, ಇಂಟರ್‌ನ್ಯಾಷನಲ್ ಪರ್ಸನಾಲಿಟಿಗಳು ಆಗಮಿಸಿದ್ದರು. ಕನ್ನಡದ ನಟ ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಜೋಡಿ ಕೂಡ ಅನಂತ್ ಅಂಬಾನಿ ಮದುವೆಗೆ ಹಾಜರಾಗಿ, ವಧುವರರಿಗೆ ಶುಭ ಹಾರೈಸಿ ಬಂದಿದ್ದಾರೆ. 

ನಟ ಯಶ್ (Yash) ಹಾಗು ನಟಿ ರಾಧಿಕಾ ಪಂಡಿತ್ (Radhika Pandit) ಅಲ್ಲಿ ಗಣ್ಯರ ಮಧ್ಯೆ ಕನ್ನಡದ ಪ್ರತಿನಿಧಿಗಳಂತೆ ಕಂಗೊಳಿಸಿದ್ದಾರೆ. ಇದೀಗ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಜೋಡಿ,ಬಾಲಿವುಡ್‌ನ ನಟಿ ಮಾಧುರಿ ದೀಕ್ಷಿತ್ ಹಾಗು ಅವರ ಪತಿ ಶ್ರೀರಾಮ್ ಮಾಧವ್ ನೆನೆ ದಂಪತಿಗಳ ಜತೆಗೆ ನಿಂತು ತೆಗೆಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗತೊಡಗಿದೆ. ಮಾಧುರಿ ದೀಕ್ಷಿತ್ ಅವರು 60 ವರ್ಷದವರಾಗಿದ್ದೂ 40ರ ಮಹಿಳೆಯಂತೆ ಕಂಗೊಳಿಸುತ್ತಿದ್ದರೆ, 40ರ ರಾಧಿಕಾ ಪಂಡಿತ್ ಸಹ 30ರ ಬೆಡಗಿ ಎಂಬಂತೆ ಮಿಂಚುತ್ತಿದ್ದಾರೆ ಎಂಬ ಕಾಮೆಂಟ್ ಹರಿದಾಡುತ್ತಿದೆ. 

Tap to resize

Latest Videos

ಲಡ್ಡು ಬಂದು ಬಾಯಿಗೆ ಬಿದ್ದಿಲ್ಲ, ಸಿಕ್ಕಿರುವ ಹಾಲಿವುಡ್ ಚಾನ್ಸ್ ಹಿಂದೆ ನೂರಾರು ಕಥೆಗಳಿವೆ!

ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರಾಧಿಕಾ ಪಂಡಿತ್ ಹಾಗು ಮಾಧುರಿ ದೀಕ್ಷಿತ್ ಅವರನ್ನು ಈ ಫೋಟೋದಲ್ಲಿ ನೋಡಿ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಮಾಧುರಿ-ರಾಧಿಕಾ ಇಬ್ಬರೂ 'ಸಂತೂರ್ ಮಮ್ಮಿಗಳು' ಎಂದಿದ್ದಾರೆ. ಅವರಲ್ಲೊಬ್ಬರು 'ಸಂತೂರ್ ಮಮ್ಮಿಗಳಲ್ಲೂ ಕಾಂಪಿಟೀಶನ್, ಉತ್ತರಕ್ಕೆ ಮಾಧುರಿ ದೀಕ್ಷಿತ್, ದಕ್ಷಿಣಕ್ಕೆ ರಾಧಿಕಾ ಪಂಡಿತ್ ಸಂತೂರ್ ಮಮ್ಮಿಗಳು ಆಗಿದ್ದಾರೆ ಅಲ್ಲವೇ?' ಎಂದು ಕಾಮೆಂಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಇದ್ದಾರೆ. ಆದರೆ, ರಣವೀರ್ ಪತ್ನಿ, ನಟಿ ದೀಪಿಕಾ ಪಡುಕೋಣೆ ಮಿಸ್ ಆಗಿದಾರೆ!

ಒಟ್ಟಿನಲ್ಲಿ, ಸ್ಯಾಂಡಲ್‌ವುಡ್‌ನಲ್ಲಿ ಕಳೆದ ದಶಕದ ಹಿಂದೆ ಒಂದು ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದಿದ್ದವರು ರಾಧಿಕಾ ಪಂಡಿತ್. ಅಮೋಘ ಅಭಿನಯದಿಂದ, ಯಾವುದೇ ವಿವಾದಕ್ಕೂ ಒಳಗಾಗದೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆಪು ಮೂಡಿಸಿಕೊಂಡ ನಟಿ ರಾಧಿಕಾ ಪಂಡಿತ್. ಇನ್ನು ಮಾಧುರಿ ದೀಕ್ಷಿತ್ ಅವರೂ ಅಷ್ಟೇ, ನನ್ನದು ಉತ್ತರ ಭಾರತ, ನಾನು ಬಾಲಿವುಡ್ ಬೆಡಗಿ ಎಂಬಂತೆ, ದರ್ಶಕಗಳ ಕಾಲ ಹಿಮದಿ ಚಿತ್ರರಂಗವನ್ನು ಆಳಿ ಇಂದಿಗೂ ಕೂಡ ಚಾರ್ಮ್ ಉಳಿಸಿಕೊಂಡಿರುವ ನಟಿ. 

ವಿಷ್ಣುವರ್ಧನ್‌ಗೆ ಪೋನ್‌ನಲ್ಲಿ ಡಾ ರಾಜ್‌ ಹೇಳಿದ್ದು ಕೇಳಿ ಎಸ್‌ ನಾರಾಯಣ್ ಕಕ್ಕಾಬಿಕ್ಕಿ ಯಾಕ್ ಆದ್ರು..?

ಅನಂತ್ ಅಂಬಾನಿ ಮದುವೆ ಮೂಲಕ ಯಶ್-ರಾಧಿಕಾ ಹಾಗೂ ಮಾಧುರಿ-ಶ್ರೀರಾಮ್ ಜೋಡಿ ಅಭಿಮಾನಿಗಳ ಕಣ್ಣಿಗೆ ಬಿದ್ದು ಹಲವರ ಮನದಲ್ಲಿ ಖುಷಿ ಉಕ್ಕೇರಲು ಕಾರಣರಾಗಿದ್ದಾರೆ. ಕನ್ನಡಿಗರೂ ಕೂಡ ಮುಂಬೈ ಚಿತ್ರರಂಗದವರ ಜತೆ ನಿಂತು ಫೋಟೋಗೆ ಪೋಸ್ ಕೊಡುವ ಕಾಲವೂ ಬಂದಿದೆ ಎನ್ನಲೇಬೇಕು. ಸತ್ಯವಾಗಿ ಹೇಳಬೇಕು ಎಂದರೆ, ಇಂದು ಉತ್ತರ-ದಕ್ಷಿಣ ಅಥವಾ ನಾರ್ತ್-ಸೌತ್ ಎಂಬ ಗೆರೆ ಸಣ್ಣದಾಗುತ್ತ ಬಂದಿದೆ. ಆ ಗೆರೆ ಸಣ್ಣದಾಗಿದೆ ಎನ್ನವುದಕ್ಕಿಂತ ಅಳಿಸಿ ಹೋಗುತ್ತಿದೆ ಎನ್ನಬಹುದು. 

click me!