ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್; 20 ವರ್ಷದ ಹಿಂದಿನ ಕೊಲೆ ಕೇಸಿನಲ್ಲಿ ಮತ್ತೊಬ್ಬ ನಿರ್ದೇಶಕ ಅರೆಸ್ಟ್

By Sathish Kumar KHFirst Published Jul 17, 2024, 11:15 AM IST
Highlights

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ಉಂಟಾಗಿದೆ. ಸ್ಯಾಂಡಲ್‌ವುಡ್‌ನ ಮತ್ತೊಬ್ಬ ನಿರ್ದೇಶಕ 20 ವರ್ಷದ ಹಿಂದಿನ ಕೊಲೆ ಕೇಸಿನಲ್ಲಿ ಈಗ ಬಂಧನವಾಗಿದ್ದಾನೆ. 

ಬೆಂಗಳೂರು (ಜು.17): 2024ನೇ ವರ್ಷ ಆರಂಭವಾಗಿದ್ದೇ ಆಗಿದ್ದು, ಕನ್ನಡ ಚಿತ್ರರಂಗಕ್ಕೆ ಶಾಕ್ ಮೇಲೆ ಶಾಕ್ ಉಂಟಾಗುತ್ತಿದೆ. ಡಿವೋರ್ಸ್, ಹಲ್ಲೆ ಹಾಗೂ ಕೊಲೆ ಕೇಸ್ ಪ್ರಕರಣಗಳು ಸಂಭವಿಸಿವೆ. ಆದರೆ, ಇದೀಗ ಮತ್ತೊಬ್ಬ ಸ್ಯಾಂಡಲ್‌ವುಡ್ ನಿರ್ದೇಶಕ 20 ವರ್ಷಗಳ ಹಿಂದೆ ನಡೆದ ಕೊಲೆ ಕೇಸಿನಲ್ಲಿ ಬಂಧನವಾಗಿದ್ದಾನೆ.

ಹೌದು, ಬೆಂಗಳೂರಿನಲ್ಲಿ ಕೊಲೆ ನಡೆದು 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಡಲ್‌ವುಡ್‌ ಸಿನಿಮಾ‌ ನಿರ್ದೇಶಕನನ್ನು ಸಿಸಿಬಿ ಬಂಧಿಸಿದ್ದಾರೆ. ಈತ ಸ್ಯಾಂಡಲ್ ವುಡ್ ಮಾತ್ರವಲ್ಲ ಕಾಲಿವುಡ್‌ನಲ್ಲೂ ಒಂದೆರಡು ಸಿನಿಮಾಗಳನ್ನು ನಿರ್ದೇಶನ ಮಾಡಿ ಬಂದಿದ್ದನು. ಇನ್ನು ಕನ್ನಡ ಇಂಡಸ್ಟ್ರಿಯಲ್ಲಿ ಒಂದೆರೆಡು ಸಿನಿಮಾ ಮಾಡಿ, ಕೊಲೆ ಪ್ರಕರಣದಲ್ಲಿ ಸಿಕ್ಕಿಕೊಂಡ ನಂತರ ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿ ಸೆಟಲ್ ಆಗಿದ್ದನು. ಅಲ್ಲಿ ಸಿನಿಮಾ ಮಾಡುತ್ತಾ ಆರಾಮಾಗಿ ಇದ್ದ ನಿರ್ದೇಶಕನಿಗೆ ಸಿಸಿಬಿ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟುವ ಮೂಲಕ ಶಾಕ್ ಕೊಟ್ಟಿದ್ದಾರೆ.

Latest Videos

ಬೆಂಗಳೂರಲ್ಲಿ ಆಕ್ಸಿಡೆಂಟ್ ಆಗಿದೆ, ಪಕ್ಕದಲ್ಲಿ ಪೊಲೀಸರ ಕಾರು ಇದೆ; ಆದ್ರೂ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಿಲ್ಲ!

ಬಂಧಿತ ಸಿನಿಮಾ ನಿರ್ದೇಶಕನನ್ನು ಗಜೇಂದ್ರ ಅಲಿಯಾಸ್ ಗಜ ಎಂಬಾತನಾಗಿದ್ದಾನೆ. ಈತ ಕಳೆದ 20 ವರ್ಷಗಳ ಹಿದೆ ಅಂದರೆ 2004ರಲ್ಲಿ ವಿಲ್ಸನ್‌ ಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡ ಶೀಟರ್ ಕೊತ್ತ ರವಿ ಕೊಲೆಯಲ್ಲಿ 18 ಆರೋಪಿ ಆಗಿದ್ದನು. ಈ ಕೊಲೆ ಕೇಸಿನಲ್ಲಿ ಕಳೆದ 20 ವರ್ಷಗಳಿಂದ ನ್ಯಾಯಲಯಕ್ಕೆ ಹಾಜರಾಗುವಂತೆ ನೋಟೀಸ್ ನೀಡಿದರೂ, ಬಂಧನದ ವಾರೆಂಟ್ ನಡಿದರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಜೊತೆಗೆ, ಪೊಲೀಸರ ಕೂಗೂ ಸಿಗದೇ ತಪ್ಪಿಸಿಕೊಂಡು ಓಡಾಡುತ್ತುದ್ದನು. ಇದನ್ನು ಗಮನಿಸಿದ್ದ ಪೊಲೀಸರು ಈತನ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದರು.

ಇನ್ನು ರೌಡಿಶೀಟರ್ ಕೊತ್ತರವಿ ಕೊಲೆ ಕೇಸಿನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಆರೋಪಿಗಳ ಜೊತೆಗೆ ಸಿನಿಮಾ ನಿರ್ದೇಶಕ ಗಜೇಂದ್ರ ಎ8 ಆರೋಪಿ ಆಗಿದ್ದನು. ಈತನಿಗೆ ಒಂದು ವರ್ಷ ಜೈಲು ಶಿಕ್ಷೆಯೂ ಆಗಿದೆ. ಇನ್ನು ವರ್ಷ ಜೈಲಿನಲ್ಲಿದ್ದು, ಜಾಮೀನು ಪಡೆದು ಹೊರಗೆ ಬಂದ ನಂತರ ಕೋರ್ಟ್‌ ಮುಂದೆ ಹಾಜರಾಗಿರಲಿಲ್ಲ. ಈಗ ಪೊಲೀಸರೇ ಬಂಧಿಸಿದ್ದಾರೆ. ಇನ್ನು ಸಿನಿಮಾ ನಿರ್ದೇಶಕ ಗಜೇಂದ್ರ ಅರಸಯ್ಯನ ಶಿಷ್ಯನಾಗಿದ್ದಾನೆ. ಈತ ಪುಟಾಣಿಪವರ್, ರುದ್ರ ಸಿನಿಮಾ ನಿರ್ದೇಶನ ಮಾಡಿದ್ದಾನೆ. ಜೊತೆಗೆ, ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ. ಸದ್ಯ ಸಿಸಿಬಿ ಪೊಲೀಸರು ಗಜೇಂದ್ರನನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

Breaking: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳಿಗೆ 6 ವರ್ಷಗಳ ಬಳಿಕ ಜಾಮೀನು

ಈಗಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟ ಆಗಿದ್ದ ದರ್ಶನ್ ತೂಗುದೀಪ, ತನ್ನ ಸ್ನೇಹಿತೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂದು ಕಿಡ್ನಾಪ್ ಮಾಡಿಸಿ, ಶೆಡ್‌ನಲ್ಲಿ ಕೂಡಿಹಾಕಿ ಭೀಕರವಾಗಿ ಥಳಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಜೈಲು ಸೇರಿದ್ದಾರೆ. ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ ಸುಮಾರು 25 ದಿನಗಳಾಗುತ್ತಾ ಬಂದಿದೆ. ಇದರ ಬೆನ್ನಲ್ಲಿಯೇ ಮತ್ತೊಬ್ಬ ಸಿನಿಮಾ ನಿರ್ದೇಶಕ ಕೊಲೆ ಕೇಸಿನಲ್ಲಿ ಬಂಧನ ಆಗಿದ್ದಾನೆ.

click me!