ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಅದೇ ಸಿನಿಮಾದ ಡೈಲಾಗ್‌ಗಳು ಸುತ್ತಾಡುತ್ತಿವೆ. ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರದ ಈ ಡೈಲಾಗ್ ಇದೀಗ ಪಡ್ಡೆ ಹುಡುಗರ ದಿನನಿತ್ಯದ ಡೈಲಾಗ್ ಎಂಬಂತಾಗಿದೆ. ಪಡ್ಡೆ ಹುಡುಗರು ಎನ್ನುವುದಕ್ಕಿಂತ ಹುಡುಗಿಯರ ಹೃದಯ..
ಕನ್ನಡದ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದು ಗೊತ್ತೇ ಇದೆ. ಸದ್ಯ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿ ಆಗಿರುವ ನಟ ಯಶ್ ಅವರು ರಾಮಾಯಣ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು ಕೂಡ ಆಗಿದ್ದಾರೆ. ಇಂಥ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಖ್ಯಾತಿ ಪಡೆದಿರುವುದು ಗೊತ್ತೇ ಇದೆ.
ನಟ ಯಶ್ ಅವರು ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾಗಿಂತ ಮೊದಲು ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಕೂಡ ಒಂದು. ಈ ಸಿನಿಮಾದಲ್ಲಿ ಈಗ ರಿಯಲ್ ಲೈಫ್‌ನಲ್ಲಿ ಗಂಡ-ಹೆಂಡತಿ ಆಗಿರುವ ಯಶ್ ಹಾಗು ರಾಧಿಕಾ ಪಂಡಿತ್ (Radhika Pandit) ಅವರೇ ಜೋಡಿಯಾಗಿ ನಟಿಸಿದ್ದಾರೆ. ಅವರಿಬ್ಬರು ಆ ಸಿನಿಮಾದಲ್ಲಿ ಹೇಳಿರುವ ಬಹಳಷ್ಟು ಡೈಲಾಗ್‌ಗಳು ಸಾಕಷ್ಟು ವೈರಲ್ ಆಗಿದ್ದರು.
ಟಾಕ್ಸಿಕ್ ಚಿತ್ರಕ್ಕೆ ಎಲ್ರೂ ಕಾಯ್ತಿರೋ ಹೊತ್ತಲ್ಲೇ ಯಶ್ 'ಈ ಮಾತು' ವೈರಲ್ ಆಗೋಯ್ತು!
ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಅದೇ ಸಿನಿಮಾದ ಡೈಲಾಗ್‌ಗಳು ಸುತ್ತಾಡುತ್ತಿವೆ. ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರದ ಈ ಡೈಲಾಗ್ ಇದೀಗ ಪಡ್ಡೆ ಹುಡುಗರ ದಿನನಿತ್ಯದ ಡೈಲಾಗ್ ಎಂಬಂತಾಗಿದೆ. ಪಡ್ಡೆ ಹುಡುಗರು ಎನ್ನುವುದಕ್ಕಿಂತ ಹುಡುಗಿಯರ ಹೃದಯ ಕದಿಯಲು ಅವರ ಸುತ್ತಲೂ ಸುತ್ತುವ ಹುಡುಗರು, ಈ ಡೈಲಾಗ್ ಹೇಳಿಕೊಂಡು ಏನೋ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಅದೇನು ಅಂತ ಅವರಿಗೇ ಗೊತ್ತು!
ನಟ ಯಶ್ ಅವರು ಆ ಚಿತ್ರದಲ್ಲಿ ಹೀಗೆ ಹೇಳುತ್ತಾರೆ..' ಸಿಗರೇಟ್ ಬಿಟ್ಬಿಡು, ಎಣ್ಣೆ ಕಮ್ಮಿ ಮಾಡು ಅಂದ್ರೆ ಯೋಚಿಸ್ಬಹುದು.. ಅದ್ನ ಬಿಟ್ಟು ಇವತ್ತು ನಿಮ್ಮಪ್ಪನಿಗೋಸ್ಕರ, ನಾಳೆ ನಿಮ್ಮಮ್ಮನಿಗೋಸ್ಕರ, ನಾಡಿದ್ದು ಇನ್ಯಾವನಿಗೋಸ್ಕರನೋ ಬರಲ್ಲಾ.. ನಿನ್ ಕಳ್ಕೋತೀನಿ ಅನ್ನೋ ಭಯಕ್ಕೆ ಚೈಯಲ್ಡ್ ತರ ನಾಟಕ ಆಡ್ಬೇಕಾಗುತ್ತೆ.. ಅದನ್ನೇ ನಿಜ ಅಂದ್ಕೊಂಡು ನೀನು ತೃಪ್ತಯಿಂದ ಇರ್ಬೇಕಾಗುತ್ತೆ.. ಆದ್ರೆ ಅಂತ ನಾಟಕದ ಬದುಕು ನಂಗೆ ಬೇಕಾಗಿಲ್ಲ..
ಮಹಾಕುಂಭ ಮೇಳದ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಯ್ತು; ಅವಘಡಕ್ಕೆ ಇದೇ ಕಾರಣ..?!
ಎಯ್, ತಪ್ಪು ಮಾಡಿದ್ರೆ ತಾನೇ ಸರಿಪಡಿಸ್ಕೊಳ್ಲಿಕ್ಕೆ? ಸ್ವಾಭಿಮಾನ ಅಂತ ಬಂದ್ರೆ ಅಪ್ಪನ್ನೇ ದೂರ ಮಾಡ್ಕೊಂಡವ್ನು ನಾನು.. ಕೇಳಿಸಕೋ, ನಾನಿರೋದೇ ಹಿಂಗೆ, ನಾನು ನನ್ ದಾರೀಲೇ ಹೋಗೋದು.. ರಾಮಾಚಾರಿ ಬೇಕು ಅಂದ್ರೆ ಹೀಗೇ ಒಪ್ಕೋಬೇಕು, ಇಲ್ಲಾ ಅಂದ್ರೆ ಹೋಗ್ತಾ ಇರು..' ಅಂತ 'ರಾಮಾಚಾರಿ' ಪಾತ್ರಧಾರಿ ಯಶ್ ಹೇಳಿದ್ದಾರೆ. ಅದನ್ನು ಆಗಲೂ ಈಗಲೂ ಬಹಳಷ್ಟು ಯಂಗ್ ಲವರ್ಸ್ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ, ಹೇಳುತ್ತಲೇ ಇರುತ್ತಾರೆ. ಅದೀಗ ವೈರಲ್ ಆಗ್ತಿದೆ!