ಪ್ರಶಸ್ತಿ ಬೇಡ ಅನ್ನೋದು ದೊಡ್ಡ ವಿಚಾರ. ಸುದೀಪ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂದು ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು....
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ವರ್ಷವೂ ಕೂಡ CCL ತಂಡದ ಸಾರಥಿ. ಕೆಲವೇ ದಿನಗಳಲ್ಲಿ ಸೆಲೆಬ್ರಿಟೀಸ್ ಕ್ರಿಕೆಟ್ ಲೀಗ್ ಆರಂಭವಾಗಲಿದ್ದು ತಂಡ ಪ್ರೆಸ್‌ಮೀಟ್ ಹಮ್ಮಿಕೊಂಡಿದ್ದರು. ಕ್ರಿಕೆಟ್ ತಯಾರಿ, ಪ್ರಯಾಣ ಮತ್ತು ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿದ್ದ ಸುದೀಪ್‌ರನ್ನು ಪತ್ರಕರ್ತರೊಬ್ಬರು 2019ರ ರಾಜ್ಯ ಪ್ರಶಸ್ತಿಯನ್ನು ತಿರಸ್ಕಾರ ಮಾಡಿದ್ದು ಯಾಕೆ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಯನ್ನು ಮತ್ತೊಂದು ಸಮಯದಲ್ಲಿ ಕೇಳಿದ್ದರೆ ಸುದೀಪ್ ಉತ್ತರಿಸುತ್ತಿದ್ದರು ಅನಿಸುತ್ತದೆ, ಆದರೆ ಅಲ್ಲಿ ನಡೆಯುತ್ತಿದ್ದ ಕಾರ್ಯವೇ ಬೇರೆ ಕೇಳಿದ್ದೇ ಬೇರೆ ಆಗಿದ್ದ ಕಾರಣ ಖಡಕ್ ಉತ್ತರ ನೀಡಿದ್ದಾರೆ.
'ಸಿಸಿಎಲ್ ಕಪ್ ಅಲ್ವಲ್ಲ ಅಂತ ರಿಜೆಕ್ಟ್ ಮಾಡಿದ್ದೀನಿ. ಇದು ರಾಜ್ಯ ಪ್ರಶಸ್ತಿ ಕಾರ್ಯಕ್ರಮ ಅಂತ ಹೇಳಿದ್ದಾರಾ? ನಾನು ಒಂದು ಪತ್ರ ಬರೆದಿದ್ದೀನಿ ಆ ಪತ್ರವನ್ನು ಮತ್ತೊಂದು ಸಲ ಟ್ರಾನ್ಸ್‌ಲೇಟ್ ಮಾಡಿ ಓದುತ್ತೀನಿ. ಆ ಅವಾರ್ಡ್ ಬಗ್ಗೆ ಇಲ್ಲಿ ಬರಬಾರದು ಆ ಪ್ರಶ್ನೆ ಇಲ್ಲಿ ಕೇಳಬಾರದು ಏಕೆಂದರೆ ಅದು ನನ್ನ ವೈಯಕ್ತಿಕ. ಇದು ಆ ವೇದಿಕೆನಾ? ಪ್ರಶ್ನೆ ಕೇಳಿದ್ದು ಮತ್ತೊಬ್ಬರು ಅದಕ್ಕ ಉತ್ತರಿಸಿದ್ದೀನಿ ನಾನು ಅದರ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ...ಯಾಕೆ ಅದಿಕಪ್ರಸಂಗ ಮಾಡುತ್ತಿದ್ದೀರಾ? ನನ್ನ ವೈಯಕ್ತಿಕ ತುಂಬಾ ಬೆಲೆ ಬಾಳುವ ಪತ್ರ ಬರೆದು ಗೌರವ ಪೂರ್ವಕವಾಗಿ ಮಾತನಾಡಿದಾಗ ಗೌರವ ಪೂರ್ವಕವಾಗಿ ಅದು ಅಲ್ಲೇ ಇರಬೇಕು ಹೊರತು ನನ್ನನ್ನು ಅಗೌರವಿಸಿ ನೀವು ಪ್ರಶ್ನೆ ಕೇಳುವುದಕ್ಕೆ ಆಗಲ್ಲ. ನಾನು ನಿಮ್ಮನ್ನು ತುಂಬಾ ಗೌರವಿಸುತ್ತಿದ್ದೀನಿ. ನಾನು ಹೋಲಿಕೆ ಮಾಡಿಲ್ಲ. ಅದನ್ನು ಬಿಟ್ಟು ಬಿಡಿ ಅಷ್ಟೇ. ನಿಮಗೆ ಏನು ಉತ್ತರ ಬೇಕು ಅದನ್ನು ನಾನು ಹೇಳಬೇಕಾ? ನನಗೆ ಅನಿಸಿದ್ದು ನಾನು ಬರೆದಿದ್ದೀನಿ. ಅದು ಸಿಸಿಎಲ್ ಕಪ್ ಅಲ್ಲ ಅಂತ ಹೇಳಿದ್ದೀನಿ' ಎಂದು ಸುದೀಪ್ ಕೊಂಚ ಗರಂ ಆಗಿ ಉತ್ತರಿಸಿದ್ದಾರೆ.
ದೂರ ಆಗಿರೋದು ಕೂಡ ಒಂದು ಕಾರಣಕ್ಕೆ; ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಅನುಪಮಾ ಗೌಡ ಹೇಳಿಕೆ
ಸುದೀಪ್ ಬರೆದ ಪತ್ರ ಇಲ್ಲಿದೆ:
ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಗೌರವದ ವಿಷಯವಾಗಿದೆ. ಮತ್ತು ಈ ಗೌರವಕ್ಕಾಗಿ ತೀರ್ಪುಗಾರರಿಗೆ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದಾಗ್ಯೂ, ನಾನು ಹೇಳಬೇಕಾದ್ದಾದರೆ, ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸಲು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಇದು ನಾನು ಹೃದಯಪೂರ್ವಕವಾಗಿ ಪಾಲಿಸಲು ಉದ್ದೇಶಿಸಿರುವ ವೈಯಕ್ತಿಕ ಕಾರಣಗಳಿಗಾಗಿ ಇದೀಗ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಯನ್ನು ಪಡೆಯದಿರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.ತಮ್ಮ ಕಲೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡ ಅನೇಕ ಅರ್ಹ ನಟರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ನಾನು ಶ್ಲಾಘಿಸುತ್ತೇನೆ. ಆದರೆ, ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಕ್ಕಿಂತ, ಅರ್ಹ ಒಬ್ಬರು ಪ್ರಶಸ್ತಿ ಪಡೆಯುವುದನ್ನು ನೋಡುವುದು ನನಗೆ ಸಂತೋಷವನ್ನು ನೀಡುತ್ತದೆ. ಜನರನ್ನು ರಂಜಿಸುವ ನನ್ನ ಸಿನಿಮಾದ ಕೆಲಸ ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ಸಾಗುತ್ತಾ ಬಂದಿದೆ. ಮತ್ತು ತೀರ್ಪುಗಾರರ ಈ ಪ್ರಶಂಸೆಯು ತನ್ನನ್ನು ಸಿನಿಮಾದಲ್ಲಿ ಇನ್ನಷ್ಟು ಶ್ರೇಷ್ಠವಾಗಿಸಿಕೊಳ್ಳಲು ಶ್ರಮಿಸುವುದನ್ನು ಮುಂದುವರೆಸಲು ಗಮನಾರ್ಹ ಉತ್ತೇಜನ ನೀಡುತ್ತದೆ.2019ನೇ ಸಾಲಿನ ವಾರ್ಷಿಕ ಚಲಚಿತ್ರ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪ್ರತಿಯೊಬ್ಬ ತೀರ್ಪುಗಾರರ ಸದಸ್ಯರಿಗೂ ನಾನು ಕೃತಜ್ಞನಾಗಿದ್ದೇನೆ. ಏಕೆಂದರೆ ಈ ಮನ್ನಣೆಯು ಸ್ವತಃ ನನ್ನ ಪ್ರತಿಫಲವಾಗಿದೆ. ನನ್ನ ನಿರ್ಧಾರದಿಂದ ತೀರ್ಪುಗಾರರು ಮತ್ತು ರಾಜ್ಯ ಸರ್ಕಾರಕ್ಕೆ ನೋವುಂಟಾಗುವುದಾದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನೀವು ನನ್ನ ತೀರ್ಮಾನವನ್ನು ಗೌರವಿಸುತ್ತೀರಿ ಮತ್ತು ನಾನು ಆಯ್ಕೆ ಮಾಡಿದ ಹಾದಿಯಲ್ಲಿ ಸಾಗಲು ನನ್ನನ್ನು ಬೆಂಬಲಿಸುತ್ತೀರಿ ಎಂದು ನಂಬುತ್ತಿದ್ದೇನೆ.ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಕಿಚ್ಚ ಸುದೀಪ ಅವರು ಬರೆದುಕೊಂಡಿದ್ದಾರೆ.
ಜಾತ್ರೆ ಬಟ್ಟೆಗಳು ನಿಂಗೆ ಮಾತ್ರ ಸಿಗೋದಾ; ಸೋನು ಗೌಡ ಕಾಲೆಳೆದ ನೆಟ್ಟಿಗರು