
ಕನ್ನಡದ ಸ್ಟಾರ್ ನಟ ದರ್ಶನ್ (Darshan Thoogudeepa) ಅವರು ಸದ್ಯ ಬೇಲ್ ಮೇಲೆ ಆಚೆ ಇರೋದು ಗೊತ್ತೇ ಇದೆ. ತನಿಖೆ ಮುಂದುವರಿಯುತ್ತಿದ್ದು, ಸದ್ಯ ನಟ ದರ್ಶನ್ ಕೋರ್ಟ್ ಆದೇಶದಂತೆ ನಡೆಯಬೇಕಾದ ಅನಿವಾರ್ಯತೆಯಲ್ಲಿ ಇರೋದು ಗೊತ್ತೇ ಇದೆ. ವೃತ್ತಿ-ಪ್ರವೃತ್ತಿಗೆ ಸಂಬಂಧಿಸಿದಂತೆ ಮನೆಯಿಂದ ಆಚೆ ಹೋಗಿ ಏನಾದ್ರೂ ಮಾಡಬೇಕು ಅಂದ್ರೆ, ಅವರು ಕೋರ್ಟ್ ಫರ್ಮಿಶನ್ ತೆಗೆದುಕೊಳ್ಳಲೇಬೇಕು. ಈ ಹಂತದಲ್ಲಿ 'ಡೆವಿಲ್' ಸಿನಿಮಾ (Devil) ಶೂಟಿಂಗ್ ಕಥೆ ಏನಾಗಬಹುದು ಎಂಬುದನ್ನು ಎಲ್ಲರೂ ಸಹಜವಾಗಿ ಯೋಚಿಸುತ್ತಿದ್ದಾರೆ.
ಸದ್ಯ ನಟ ದರ್ಶನ್ ಆಪ್ತರು ಹೇಳೋ ಪ್ರಕಾರ, 'ಡೆವಿಲ್ ಶೂಟಿಂಗ್ ನಡೆಯೋದಿಲ್ಲ. ಕಾರಣ, ನಟ ದರ್ಶನ್ ಬೆಂಗಳೂರು, ಮೈಸೂರು ಬಿಟ್ಟು ಬೇರೆ ಎಲ್ಲೇ ಹೋಗಬೇಕಾದ್ರೂ ಕೋರ್ಟ್ ಪರ್ಮಿಶನ್ ತೆಗೆದುಕೊಳ್ಳಬೇಕು. ಅದರಲ್ಲೂ ವಿದೇಶಗಳಿಗೆ ಹೋಗಬೇಕು ಎಂದರೆ ಮತ್ತೆ ಅದೊಂದು ಹೊಸ ಸಮಸ್ಯೆ. ಸದ್ಯ ಆಗಿರುವ ಶೂಟಿಂಗ್ ಭಾಗಗಳಿಗೆ ಡಬ್ಬಿಂಗ್ ಮಾಡುತ್ತಿರುವ ನಟ ದರ್ಶನ್ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕಿದೆ. ಬೆನ್ನುನೋವಿನ ಸಮಸ್ಯೆ ಕಡಿಮೆಯಾಗು ಶೂಟಿಂಗ್‌ನಲ್ಲಿ ಅವರು ಭಾಗಿಯಾಗಲು ಸ್ವಲ್ಪ ಕಾಲಾವಕಾಶ ಬೇಕು.
ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ
ಎಲ್ಲಕ್ಕಿಂತ ಹೆಚ್ಚಾಗಿ, ನಟ ದರ್ಶನ್ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದು ಆಕ್ಷನ್ ಸಿನಿಮಾಗಳನ್ನೇ ಆಗಿದೆ. ಹೀಗಾಗಿ ಸಹಜವಾಗಿಯೇ ಅವರಿಗೆ ಬಾಡಿ ಫಿಟ್‌ನೆಸ್ ಅತೀ ಅವಶ್ಯಕ. ಜೊತೆಗೆ, ಶೂಟಿಂಗ್‌ನಲ್ಲಿ ಭಾಗಿಯಾಗಬೇಕು ಎಂದರೆ ಕೋರ್ಟ್, ಕಾನೂನುಗಳ ಕಟ್ಟಳೆ ಇದ್ದಾಗ ಕಷ್ಟ. ಹೀಗಾಗಿ ಸದ್ಯ ನಟ ದರ್ಶನ್ ತಮ್ಮ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುವುದನ್ನು ಮುಂದೂಡಲಿದ್ದಾರೆ. ಜೊತೆಗೆ, ಕೊಲೆ ಕೇಸ್ ಆರೋಪಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಮೇಲಷ್ಟೇ ದರ್ಶನ್ ಅವರು ತಮ್ಮ ಮಿಕ್ಕೆಲ್ಲಾ ಆಕ್ಟಿವಿಟಿಗೆ ಗಮನ ಕೊಡಲಿದ್ದಾರೆ.
ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಯಾವುದೇ ಒಂದು ತಾರ್ಕಿಕ ಅಂತ್ಯ ದೊರಕಿಲ್ಲ. ಹೀಗಾಗಿ ನಟ ಭವಿಷ್ಯದ ಬಗ್ಗೆ, ಅವರ ಸಿನಿಮಾ ಸೇರಿದಂತೆ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ಏನೂ ಹೇಳಲು ಸಾಧ್ಯವಿಲ್ಲ. ಜೊತೆಗೆ, ಕೇಸ್ ಇನ್ನೂ ತನಿಖೆ ಹಂತದಲ್ಲಿ ಇರುವ ಕಾರಣಕ್ಕೆ, ಸ್ವತಃ ನಟ ದರ್ಶನ್ ಸೇರಿದಂತೆ ಯಾರೇ ಆಗಲಿ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲು ಅಸಾಧ್ಯ. ಸದ್ಯ 'ಕಾಲಾಯ ತಸ್ಮೈ ನಮಃ' ಎಂಬ ಮಂತ್ರವೇ ಸೂಕ್ತ ಎನ್ನಬಹುದು.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಮುಂದೆಯೇ ಪಿಬಿ ಶ್ರೀನಿವಾಸ್‌ಗೆ ಅವಮಾನ, ಎಸ್‌ಪಿಬಿ ಮಾಡಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.