Yash 19; ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಿರ್ದೇಶಕಿ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ; ಯಾರವರು?

Published : Apr 15, 2023, 11:00 AM IST
Yash 19; ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಿರ್ದೇಶಕಿ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ; ಯಾರವರು?

ಸಾರಾಂಶ

ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್  ಆಗಿದೆ. 

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಇನ್ನೂ ಕುತೂಹಲವಾಗಿಯೇ ಉಳಿದಿದೆ. ಕೆಜಿಎಫ್ 2 ರಿಲೀಸ್ ಆಗಿ ವರ್ಷವಾದರೂ ಯಶ್ ಮುಂದಿನ ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಕಾತರದಿಂದ ಕಾಯುತ್ತಿದ್ದಾರೆ. ರಾಕಿಭಾಯ್ ಯಾವಾಗ ಹೊಸ ಸಿನಿಮಾ ಘೋಷಣೆ ಮಾಡುತ್ತಾರೆ ಎಂದು ಅಭಿಮಾನಿಗಳು ಹೋದಲ್ಲಿ ಬಂದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಯಶ್ ಮಾತ್ರವಲ್ಲದೇ ಪತ್ನಿ ರಾಧಿಕಾ ಅವರನ್ನು ಅಭಿಮಾನಿಗಳು ಕಾಡಿಸುತ್ತಿದ್ದಾರೆ. ಸಿನಿಮಾ ಘೋಷಣೆ ಮಾಡದಿದ್ದರೇ ಮನೆ ಮುಂದೆ ಧರಣಿ ಕೂರುವುದಾಗಿಯೂ ಹೇಳಿದ್ದಾರೆ. ಆದರೂ ಯಶ್ ಮುಂದಿನ ಯಾವಾದು ಎಂದು ಬಹಿರಂಗವಾಗಿಲ್ಲ. ಇದೀಗ ಯಶ್ ಮುಂದಿನ ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ವೈರಲ್ ಆಗಿದೆ. ರಾಕಿಂಗ್ ಸ್ಟಾರ್ 19ನೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಲೇಡಿ ನಿರ್ದೇಶಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಲೇಡಿ ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಆದರೆ ಯಾರು ಎನ್ನುವುದು ಬಹಿರಂಗವಾಗಿರಲಿಲ್ಲ. ಸದ್ಯ ವೈರಲ್ ಆಗಿರುವ ಸುದ್ದಿಯ ಪ್ರಕಾರ ಆ ನಿರ್ದೇಶಕಿ ಮತ್ಯಾರು ಅಲ್ಲ ಮಲಯಾಳಂನ ಖ್ಯಾತ ನಿರ್ದೇಶಕಿ ಮತ್ತು ನಟಿ ಗೀತು ಮೋಹನದಾಸ್. 'ಯಶ್ ಮತ್ತು ಗೀತು ಮೋಹನದಾಸ್ ಕಳೆದ ಒಂದು ವರ್ಷಗಳಿಂದ ಚರ್ಚಿಸುತ್ತಿದ್ದಾರೆ. ಗೀತು ಅವರ ಸ್ಟ್ರಿಪ್ಟ್‌ಗೆ ಯಶ್ ಫಿದಾ ಆಗಿದ್ದು ಅವರ ಜೊತೆ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಭಾರತೀಯ ಸಿನಿಮಾರಂಗದ ದೊಡ್ ದೊಡ್ಡ ನಿರ್ದೇಶಕರು ಮತ್ತು ನಿರ್ದೇಶಕರ  ಜೊತೆ ಯಶ್ ಸಿನಿಮಾ ಮಾಡ್ತಾರೆ ಎಂದು ಅನೇಕರು ನಿರೀಕ್ಷಿಸಿದ್ದರು. ಹೀಗಿರುವಾಗ ಯಶ್ ಮಲಯಾಳಂ ಸಿನಿಮಾರಂಗದ ನಿರ್ದೇಶಕಿ ಜೊತೆೆ ಸಿನಿಮಾ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಯಶ್ ವಿಭಿನ್ನ  ಸ್ಕ್ರಿಪ್ಟ್ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ' ಎಂದು ಆಪ್ತ ಮೂಲಗಳು ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದೆ ಎಂದು ಪಿಂಕ್‌ವಿಲ್ಲಾ ವೆಬ್ ಸೈಟ್ ವರದಿ ಮಾಡಿವೆ. 

ಕೆಜಿಎಫ್ ಸ್ಟಾರ್ ಯಶ್ ಹಾಗೆ 'ರೈಸ್ ಅಪ್ ಬೇಬಿ...' ಅಂತಿರೋದೇಕೆ ಸಮಂತಾ: ಸ್ಯಾಮ್ ಹೊಸ ಪೋಸ್ಟ್ ವೈರಲ್

ಗೀತು ಮೋಹನದಾಸ್ ಅವರ ಸ್ಕ್ರಿಪ್ಟ್ ತುಂಬಾ ಪವರ್ ಫುಲ್ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯಶ್ ನಿರೀಕ್ಷೆಗಳು ಆಕಾಶದಷ್ಟಿದೆ. ಆದರೆ ಅವರು ಮನಸ್ಸಿನ ಮಾತನ್ನು ಕೇಳುತ್ತಾರೆ. ದೊಡ್ಡ ಬೆಜೆಟ್ ಮತ್ತು ಹೆಸರಿನ ಹಿಂದೆ ಬೀಳುವ ಬದಲು ಕಥೆಗೆ ಹೆಚ್ಚು ಒತ್ತುನೀಡುತ್ತಾರೆ ಮತ್ತು ಅದಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತಾರೆ. ಇನ್ನೂ 30 ದಿನಗಳಲ್ಲಿ ಗೀತು ಮೋಹನ್ ದಾಸ್ ಸಿನಿಮಾ ಘೋಷಣೆಯಾಗುವ ಸಾಧ್ಯತೆ ಇದೆ. ಸದ್ಯ ಸಿನಿಮಾ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ 15 ದಿನಗಳಲ್ಲಿ ಎಲ್ಲಾ ಸಿದ್ಧತೆಗಳು ಮುಗಿದು ದೊಡ್ಡ ಮಟ್ಟದಲ್ಲಿ ಅನೌನ್ಸ್ ಮಾಡಲಿದ್ದಾರೆ' ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. 

ಗೀತು ಮೋಹನದಾಸ್ ಬಗ್ಗೆ 

ಗೀತು ಮೋಹನದಾಸ್ ಲಯರ್ಸ್ ಡೈರಿ ಮತ್ತು ಮೂತುನ್ ಅಂಥ ಸಿನಿಮಾಗಳಿಗೆ ಪ್ರಸಿದ್ಧರಾಗಿದ್ದಾರೆ. ಲಯರ್ಸ್ ಡೈರಿ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಸೇರಿದಂತೆ ವಿಶ್ವದಾದ್ಯಂತ 6 ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಸದ್ಯ ಗೀತು ಅವರು ರಾಕಿಂಗ್ ಸ್ಟಾರ್ ಜೊತೆ ಮತ್ತೊಂದು ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾ ಮೂಲಕ ಬರ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಮುಂದಿನ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ. 

Yash 19: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಲೇಡಿ ನಿರ್ದೇಶಕಿ, ಇಂಟ್ರಸ್ಟಿಂಗ್ ವಿಚಾರ ವೈರಲ್

ಕೆಜಿಎಫ್-3

ಯಶ್ 19 ಸಿನಿಮಾ ಜೊತೆಗೆ ಕೆಜಿಎಫ್ - 3 ಕೂಡ ಸದ್ದು ಮಾಡುತ್ತಿದೆ. ಕೆಜಿಎಫ್-2ಗೆ 1 ವರ್ಷ ತುಂಬಿದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಪಾರ್ಟ್-3 ಸುಳಿವು ನೀಡಿದೆ. ಹಾಗಾಗಿ ಈ ಸಿನಿಮಾ ಕೂಡ ಸದ್ಯದಲ್ಲೇ ಸೆಟ್ಟೇರಿದರೂ ಅಚ್ಚರಿ ಇಲ್ಲ. ಯಶ್ 19ನೇ ಸಿನಿಮಾ ಮುಗಿಸಿ ಪಾರ್ಟ್-3ನಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ತನ್ನ ಕೈಯಲ್ಲಿರುವ ಪ್ರಾಜೆಕ್ಟ್ ಮುಗಿಸಿ ಪಾರ್ಟ್-3ಗೆ ತಯಾರಾಗಲಿದ್ದಾರೆ. ಆದರೆ ಇದಕ್ಕೆಲ್ಲದ್ದಕ್ಕೂ ಮೊದಲು ಯಶ್ 19ನೇ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ.  

  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!