ನಾನು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಕ್ಯಾನ್ಸರ್ ಕೂಡ ಬಂದಿಲ್ಲ; ಎರಡನೇ ಮದುವೆ ಬಗ್ಗೆ ನಟಿ ಪ್ರೇಮಾ ಹೇಳಿಕೆ

Published : Apr 14, 2023, 03:52 PM IST
ನಾನು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಕ್ಯಾನ್ಸರ್ ಕೂಡ ಬಂದಿಲ್ಲ; ಎರಡನೇ ಮದುವೆ ಬಗ್ಗೆ ನಟಿ ಪ್ರೇಮಾ ಹೇಳಿಕೆ

ಸಾರಾಂಶ

ನಟಿ ಪ್ರೇಮಾ ಕ್ಯಾನ್ಸರ್‌ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗಿದ್ದು ನಿಜವೇ? ಎರಡನೇ ಮದುವೆ ಮನಸ್ಸು ಮಾಡಿರುವುದು ಯಾಕೆ?

ಕೆಲವು ತಿಂಗಳುಗಳ ಹಿಂದೆ ನಟಿ ಪ್ರೇಮಾ ಮತ್ತೊಮ್ಮೆ ಮದುವೆ ಮಾಡಿಕೊಳ್ಳಲು ರೆಡಿಯಾಗಿದ್ದಾರೆ ಹೀಗಾಗಿ ದೈವ ಪೂಜೆ ಮಾಡಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿತ್ತು. ಪ್ರೇಮಾ ಎರಡನೇ ಮದುವೆ ಮಾಡಿಕೊಳ್ಳಲು ಮನಸ್ಸಿ ಮಾಡಿದ್ದು ಯಾಕೆ? ಹಾಗೆ ಹೀಗೆ ಅಂತ ಒಂದಿಷ್ಟು ಗಾಸಿಪ್‌ಗಳು ಕೇಳಿ ಬಂದಿತ್ತು. ಈಗ ಸ್ವತಃ ಪ್ರೇಮಾ ಕ್ಲಾರಿಟಿ ಕೊಟ್ಟಿದ್ದಾರೆ.

'ನನ್ನ ವೈಯಕ್ತಿಕ ಜೀವನದ ನಿರ್ಧಾರವಿದು. ಮದುವೆ ಆಗಬೇಕು ಎನ್ನುವುದನ್ನು ನಾನು ನಿರ್ಧರಿಸಬೇಕು. ಜೀವನ ಅಂದ್ಮೇಲೆ ಮದುವೆ ಇರಬೇಕು ಹೀಗಾಗಿ ಒಂದೊಳ್ಳೆ ಹುಡುಗ ಸಿಕ್ಕರೆ ಖಂಡಿತ ಮದುವೆ ಅಗುತ್ತೀನಿ ಅದರಲ್ಲಿ ತಪ್ಪೇನು ಇಲ್ಲ. 70 ವರ್ಷದವರು ಮದುವೆ ಆಗುತ್ತಿದ್ದಾರೆ ಈ ಕಾಲದಲ್ಲಿ. ತಪ್ಪೇನಿದೆ? ಇದು ನನ್ನ ಜೀವನ ನನ್ನ ಜೀವನ ಹೇಗಿರಬೇಕು ಅನ್ನೋದು ನನಗೆ ಗೊತ್ತು' ಎಂದು ಪ್ರೇಮಾ ತೆಲುಗು ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಡಿವೋರ್ಟ್‌ ಬಗ್ಗೆ:

'ವೈಯಕ್ತಿಕ ಜೀವನ ಬೇರೆ ವೃತ್ತಿ ಬದುಕು ಬೇರೆ. ಈ ಎರಡನ್ನು ನಾನು ಒಟ್ಟು ಮಾಡಿ ನೋಡುವುದಿಲ್ಲ.  ನನಗೆ ಇಷ್ಟವಾಗದಿದ್ದರೆ ನೇರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇನ್ನು ನನ್ನ ಜೀವನ. ಇದು ನನ್ನ ಒಂದೇ ಒಂದು ಜೀವನ. ಹೀಗಾಗಿ ಪೋಷಕರ ಕೊತೆ ಚರ್ಚಿಸಿದೆ.ಅವರು ಕೂಡ ಒಪ್ಪಿಕೊಂಡರು ನಾನು ಈ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದೆ' ಎಂದು ಪ್ರೇಮಾ ಹೇಳಿದ್ದಾರೆ.

ಅಭಿನೇತ್ರಿ ಪ್ರೇಮಾ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ; ಉಪೇಂದ್ರಯಿಂದ ಸ್ಪೆಷಲ್ ವಿಶ್

ಕ್ಯಾನ್ಸರ್‌ ಇತ್ತಾ?:

' ನಿಜ ಹೇಳಬೇಕು ಅಂದ್ರೆ ನಾನು ಡಿಪ್ರೆಷನ್‌ಗೆ ಜಾರಿದ್ದೆ. ನಾನು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಕೆಲವು ದಿನಗಳು ಉಳಿದುಕೊಂಡಿದ್ದೆ. ಅಲ್ಲಿ ನನ್ನ ಸ್ನೇಹಿತರು ಇದ್ದಾರೆ ಆ ಸಮಯದಲ್ಲಿ ಇಲ್ಲಿ ಅಂತಹ ವದಂತಿಗಳನ್ನು ಸೃಷ್ಟಿಸಿ ಹಬ್ಬಿಸಿದರು. ನಾನು ಕ್ಯಾನ್ಸರ್ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದೇನೆ ಅಂತೆಲ್ಲಾ ಹೇಳಿದ್ದಾರೆ. ದೇವರ ದಯೇಯಿಂದ ನನಗೆ ಯಾವ ಸಮಸ್ಯೆ ಇಲ್ಲ ಕ್ಯಾನ್ಸರ್‌ ಎನ್ನುವುದು ದೊಡ್ಡ ಸುಳ್ಳು ವದಂತೆ. ಸುಮ್ಮನೆ ಹಬ್ಬಿಸಿದ್ದಾರೆ' ಎಂದಿದ್ದಾರೆ ಪ್ರೇಮಾ. 

ಹುಡುಗ ನೋಡಿದ್ದೇನೆ, ಮದುವೆ ಮಾಡಿಸು ಎಂದು ಕೊರಗಜ್ಜನಿಗೆ ಪ್ರಾರ್ಥಿಸಿದ ನಟಿ ಪ್ರೇಮಾ

ಆತ್ಮಹತ್ಯೆ ಮಾಡಿಕೊಳ್ಳಬೇಡಿ:

'ನನಗೆ ನನ್ನ ಜೀವನ ಬೇಕು. ಆತ್ಮಹತ್ಯೆ ಮಾಡಿಕೊಳ್ಳುವವರಿಗೆಲ್ಲಾ ನಾನು ಹೇಳುತ್ತೀನಿ ಹೀಗೆ ಮಾಡಬಾರದು ಅಂತ. ನಾನು ಅತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಿಲ್ಲ ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದೆ. ಅಂತಹ ಸಮಯ ಬರುತ್ತೆ ಆಗ ನಾವು ಎದುರಿಸಬೇಕು ಹೇಗೆ ಎದುರಿಸುತ್ತೀರಾ ಅನ್ನೋದು ಮುಖ್ಯವಾಗುತ್ತದೆ. ನಾವು ಸವಾಲುಗಳಾಗಿ ಎದುರಿಸಿದೆ. ನಿನಗೆ ಇಷ್ಟವಿಲ್ಲದಿದ್ದರೆ ಪ್ರಪಂಚ ತುಂಬಾ ದೊಡ್ಡದಾಗಿದೆ ಬೇರೆ ಕೆಲಸ ಮಾಡಿದ ಆ ಸಮಸ್ಯೆಯಿಂದ ಹೊರ ಬನ್ನಿ ಇದೇ ಜೀವನ' ಎಂದು ಪ್ರೇಮಾ ಸಲಹೆ ಕೊಟ್ಟಿದ್ದಾರೆ.

'ಜೀವನ ಅಂದ್ರೆ ಮದುವೆ ಒಂಧೇ ಅಲ್ಲ ಅದು ಬಿಟ್ಟು ನಮಗೆ ಜೀವನ ಇದೆ. ನನಗೆ ಶಕ್ತಿಯಿದೆ. ನಾನೇ ವೈಕ್ತಿಕವಾಗಿ ಕೋರ್ಟ್‌ಗೆ ಹೋಗಿದ್ದೆ. ನಾನು ನಿರ್ಧಾರ ತೆಗೆದುಕೊಂಡಿರುವುದು ಹೀಗಾಗಿ ನಾನು ಹೋಗ್ತೀನಿ ಅಂದೆ. ಅಮ್ಮ ಅಪ್ಪನೂ ಬರ್ತೀನಿ ಅಂದ್ರು ಅದಿಕ್ಕೆ ಬೇಡ ನಾನೇ ಹೋಗ್ತೀನಿ ಎಂದು ಕೋರ್ಟ್‌ಗೆ ಹೋಗಿದ್ದೀನಿ ಅದನ್ನು ಮುಗಿಸಿ ನನ್ನ ಕೆಲಸಗಳಿಗೆ ವಾಪಸ್‌ ಆಗಿದ್ದೆ. ಆರಂಭದಲ್ಲಿ ನಾನು ತುಂಬಾ ಎಮೋಷನಲ್ ಅಗಿದ್ದೆ ಆದರೆ ಈಗ ತುಂಬಾ ಧೈರ್ಯ ಬಂದಿದೆ' ಎಂದು ರಮ್ಯಾ ಹೇಳಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?