A 15 ಆರೋಪಿ ಕಾರ್ತಿಕ್‌ಗೆ ಜಾಮೀನು ಸಿಕ್ಕರೂ ಹೊರ ಬರವಂತಿಲ್ಲ; ದರ್ಶನ್‌ನಿಂದ ಎದುರಾದ ಸಂಕಷ್ಟ ಒಂದೆರಡಲ್ಲ ಎಂದು ಬೇಸರ

Published : Oct 01, 2024, 05:56 PM IST
A 15 ಆರೋಪಿ ಕಾರ್ತಿಕ್‌ಗೆ ಜಾಮೀನು ಸಿಕ್ಕರೂ ಹೊರ ಬರವಂತಿಲ್ಲ; ದರ್ಶನ್‌ನಿಂದ ಎದುರಾದ ಸಂಕಷ್ಟ ಒಂದೆರಡಲ್ಲ ಎಂದು ಬೇಸರ

ಸಾರಾಂಶ

 ಅಕ್ಟೋಬರ್ 4ಕ್ಕೆ ದರ್ಶನ್ ಜಾಮೀನು ಅರ್ಜಿ ಮುಂದೂಡಿಕೆ. ಕಾರ್ತಿಕ್‌ಗೆ ಜಾಮೀನು ಸಿಕ್ಕರೂ ಬರಲು ಆಗುತ್ತಿಲ್ಲ.....

ಬಳ್ಳಾರಿ ಜೈಲು ಸೆಲೆಬ್ರಿಟಿ ಆಗಿರೋ ನಟ ದರ್ಶನ್​​ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ದಾಸನ ನ್ಯಾಯಾಂಗ ಬಂಧನ ಅವಧಿ ಮತ್ತೆ ಕಂಟಿನ್ಯೂ ಆಗಿದೆ. ಆ ಕಡೆ ದರ್ಶನ್​ ನಂಬಿ ಕೊಲೆ ಆರೋಪದಲ್ಲಿ ಭಾಗಿ ಆಗಿ ಬೇಲ್​ ಸಿಕ್ಕಿರೋ ಆರೋಪಿಗಳ ಜಾಮೀನು ಅರ್ಜಿಗೆ ಶ್ಯೂರಿಟಿ ಹಾಕೋರು ಯಾರು ಇಲ್ಲದಂತಾಗಿದೆ. ಹಾಗಾದ್ರೆ ದರ್ಶನ್ ಬೇಲ್​ ಕಥೆ ಏನಾಯ್ತು. ಜಾಮೀನು ಸಿಕ್ಕಿದ್ರೂ ಜೈಲಿನಿಂದ ಹೊರ ಬರಲಾಗದೇ ಒದ್ದಾಡ್ತಿರೋ ಆರೋಪಿಗಳ ಕತೆ ಏನಾಗಿದೆ. ಇಲ್ಲಿದೆ ನೋಡಿ ಎಕ್ಸ್​ಕ್ಲ್ಯೂಸೀವ್ ವಿಷಯ..

ನಟ ದರ್ಶನ್‌ಗೆ ಜೈಲು ವಾಸ ಸಾಕಪ್ಪೋ ಸಾಕು ಅನ್ನೋ ಹಾಗಾಗಿದೆ. ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ 34 ದಿನ ಆಗಿದೆ. ಅಲ್ಲಿನ ವ್ಯವಸ್ಥೆ ದಾಸನನ್ನ ಹಿಂಡಿ ಹಿಪ್ಪೆ ಮಾಡುತ್ತಿದ್ದೆ. ಆ ಕಡೆ ದಚ್ಚು ಬೇಲ್ ಅರ್ಜಿ ಇಂದು ಮತ್ತೆ ವಿಚಾರಣೆಗೆ ಬಂದಿದ್ದು, ದಾಸನಿಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ ಆಗಿದೆ.ಒಂದು ಕಡೆ ದಾಸನ ಜಾಮೀನು ಅರ್ಜಿ ವಿಚಾರಣೆ  ಅಕ್ಟೋಬರ್​ 4ರ ವರೆಗೆ ವಿಸ್ತರಣೆ ಆಗಿದೆ. ಆದ್ರೆ ವಾದ-ಪ್ರತಿವಾದ ಇಂದೇ ಮುಗಿಯುವ ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್​ಗೆ ಶಾಕ್ ಆಗಿದೆ. ಯಾಕಂದ್ರೆ ವಾದ-ಪ್ರತಿವಾದ ಮುಗಿದರೆ ಜಾಮೀನು ಸಿಗುತ್ತೆ ಅನ್ನೋ ವಿಶ್ವಾಸದಲ್ಲಿ ದರ್ಶನ್ ಇದ್ದರು. ಕಳೆದ ವಾರ ಜೈಲಿಗೆ ಭೇಟಿ ನೀಡಿದ್ದಾಗ ಜಾಮೀನು ಸಿಗುವ ಬಗ್ಗೆ ದರ್ಶನ್ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಮತ್ತೆ ದರ್ಶನ್ ಜಾಮೀನಿಗೆ ಇನ್ನೂ ನಾಲ್ಕು ದಿನ ಕಾಯಲೇ ಬೇಕಿದೆ. 

ಬಿಗ್​ಬಾಸ್ ಮನೆ ಸೇರಿದ ದರ್ಶನ್​ ಆಪ್ತರು; ಒಂಟಿ ಮನೆಯಲ್ಲೂ ಇರುತ್ತಾ ದಾಸನ ಕಥೆ ವ್ಯಥೆ?

ಜಾಮೀನು ಅರ್ಜಿ ವಿಚಾರಣೆ ಜೊತೆಗೆ ಇನ್ನೊಂದು ಟೆನ್ಷನ್ ಕಾಡ್ತಿದೆ. ಜಾಮೀನು ಸಿಕ್ಕಿದೆಯೋ ಇಲ್ವೋ ಅನ್ನೋ ಆತಂಕದ ಮಧ್ಯೆ ಇದ್ದ ದರ್ಶನ್​​ಗೆ ಬಳ್ಳಾರಿ ಜೈಲು ಅಕ್ಷರಸಹ ನರಕ ಆಗಿದೆ. ಹೀಗಾಗಿ ಬಳ್ಳಾರಿ ಜೈಲಿನ ಸಹವಾಸ ಸಾಕಪ್ಪ ಸಾಕು ಎನ್ನುತ್ತಿದ್ದಾರಂತೆ ದರ್ಶನ್. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ರಾತ್ರಿಯೀಡಿ ಟೆನ್ಷನ್‌ನಲ್ಲಿ ನಿದ್ದೆಯೇ ಮಾಡುತ್ತಿಲ್ಲವಂತೆ ದರ್ಶನ್. ಮತ್ತೊಂದ್ ಕಡೆ ನಟ ದರ್ಶನ್​ ಜೊತೆ ಕೊಲೆ ಕೇಸ್​ನಲ್ಲಿ ಆರೋಪಿ ಆಗಿರೋ  ಎ 15 ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆಗೆ ಜೈಲಿನಿಂದ ಹೊರ ಬರೋದೇ ದೊಡ್ಡ ಚಾಲೇಂಜ್ ಆಗಿದೆ. ಬೇಲ್ ಸಿಕ್ಕರೂ ಕಾರ್ತಿಕ್​ಗೆ ಜೈಲಿನಿಂದ ಹೊರ ಬರಲಾಗುತ್ತಿಲ್ಲ. ಯಾಕಂದ್ರೆ ಕಾರ್ತಿಕ್ ಬೇಲ್‌ಗೆ ಬಾಂಡ್ ಹಾಗೂ ಶೂರಿಟಿ ಕೊಡೋರು ಯಾರೂ ಇಲ್ಲ.
ಯಾರೊಬ್ಬರು ನಮಗೆ ಸಹಾಯ ಮಾಡಲು ಮುಂದೆ ಬಂದಿಲ್ಲ ಅಂತ ಕಾರ್ತಿಕ್ ಸಹೋದರಿ ರಾಜೇಶ್ವರಿ ಬೇಸರಗೊಂಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?