ತಮಿಳು ಚಿತ್ರರಂಗದಿಂದ ನಟ ವಿಷ್ಣುವರ್ಧನ್ ದೂರ ಉಳಿಯಲು ಯಾರು ಕಾರಣ? ಸೀಕ್ರೆಟ್ ರಿವೀಲ್..!

By Shriram BhatFirst Published Oct 16, 2024, 6:57 PM IST
Highlights

'ನಾಗರಹಾವು' ಬಳಿಕ ಕನ್ನಡ ನಟ ವಿಷ್ಣುವರ್ಧನ್ ಖ್ಯಾತಿ ಇಡೀ ಭಾರತಕ್ಕೇ ಹಬ್ಬಿತ್ತು. ಅಂದು ಅಷ್ಟೊಂದು ಹ್ಯಾಂಡ್‌ಸಮ್ ಆಗಿದ್ದ ನಟರು ಇಡೀ ಭಾರತದ ಚಿತ್ರರಂಗದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ತಮಿಳು ಚಿತ್ರರಂಗದಿಂದ ವಿಷ್ಣುವರ್ಧನ್ ಅವರಿಗೆ ಕರೆ ಬಂದಿತ್ತು. ಆದರೆ, ನಟ ವಿಷ್ಣುವರ್ಧನ್..

ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು' ಬಳಿಕ ಕನ್ನಡ ನಟ ವಿಷ್ಣುವರ್ಧನ್ ಖ್ಯಾತಿ ಇಡೀ ಭಾರತಕ್ಕೇ ಹಬ್ಬಿತ್ತು. ಅಂದು ಅಷ್ಟೊಂದು ಹ್ಯಾಂಡ್‌ಸಮ್ ಆಗಿದ್ದ ನಟರು ಇಡೀ ಭಾರತದ ಚಿತ್ರರಂಗದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಸೇರಿದಂತೆ ಹಲವರಿಂದ ತಮಿಳು ಚಿತ್ರದಲ್ಲಿ ಹೀರೋ ಆಗಲಿ ವಿಷ್ಣುವರ್ಧನ್ ಅವರಿಗೆ ಕರೆ ಬಂದಿತ್ತು. ಆದರೆ, ನಟ ವಿಷ್ಣುವರ್ಧನ್ ಅವರಿಗೆ ಕನ್ನಡ ಬಿಟ್ಟು ತಮಿಳಿಗೆ ಹೋಗಲು ಇಷ್ಟವಿರಲಿಲ್ಲ ಎನ್ನಲಾಗಿದೆ. 

ತಮಿಳು ಚಿತ್ರರಂಗದಿಂದ ಕರೆ ಬಂದಾಗ ವಿಷ್ಣುವರ್ಧನ್ ಮೊದಲು ಮನಸ್ಸು ಮಾಡಲಿಲ್ಲ. ಆದರೆ, ಮತ್ತೆ ಮತ್ತೆ ಕರೆ ಬಂದಾಗ ಅವರು ತಮಗೆ ಅಂದು ಆತ್ಮೀಯರಾಗಿದ್ದ ಪುಟ್ಟಣ್ಣ ಕಣಗಾಲ್ ಹಾಗೂ ಸಿದ್ಧಲಿಂಗಯ್ಯ ಅವರನ್ನು ಕೇಳಿದ್ದರಂತೆ. ಆಗ ಪುಟ್ಟಣ್ಣ ಹಾಗೂ ಸಿದ್ದಲಿಂಗಯ್ಯ ಅವರುಗಳು 'ನೀನು ಕನ್ನಡದಲ್ಲಿಯೇ ಇರು. ನಿನಗೆ ಇಲ್ಲಿಯೇ ಬೇಕಾದಷ್ಟು ಅವಕಾಶಗಳು ಇವೆ ಅಂದಿದ್ದರಂತೆ. ಅವರಿಬ್ಬರ ಮಾತಿಗೆ ಮನ್ನಣೆ ಕೊಟ್ಟು ವಿಷ್ಣುವರ್ಧನ್ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದರೂ ಇಲ್ಲಿಯೇ ಉಳಿದುಕೊಂಡರು ಎನ್ನಲಾಗಿದೆ. 

Latest Videos

ಅಂಬರೀಷ್-ವಿಷ್ಣುವರ್ಧನ್ ಸಂಬಂಧ: ಬೇಡವೆಂದರೂ ರಟ್ಟಾಯ್ತು ಮುಚ್ಚಿಟ್ಟ ಗುಟ್ಟು!

ನಾಗರಹಾವು ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡುವಾಗ ನಟಿ ಜಯಲಲಿತಾ ಅವರನ್ನು ಹೀರೋಯಿನ್ ಆಗಲು ಕೇಳಿದ್ದರು. ಆಗ ಜಯಲಲಿತಾ ಅವರು ಕನ್ನಡದ ನಟ ವಿಷ್ಣುವರ್ಧನ್ ಅವರು ಇಲ್ಲಿಯೂ ಹೀರೋ ಆದರೆ ಮಾತ್ರ ನಾನು ನಾಯಕಿಯಾಗಿ ಅಭಿನಯಿಸುತ್ತೇನೆ ಎಂದಿದ್ದರಂತೆ. ಆದರೆ, ವಿಷ್ಣು ತಮಿಳಿಗೆ ಹೋಗಲಿಲ್ಲ, ತಾವು ಹೇಳಿದಂತೆ ನಟಿ ಜಯಲಲಿತಾ ನಾಗರಹಾವು ತಮಿಳು ರಿಮೇಕ್ ಮಾಡಲಿಲ್ಲ..! ಒಟ್ಟಿನಲ್ಲಿ, ವಿಷ್ಣುವರ್ಧನ್ ಹಾಗೂ ಜಯಲಲಿತಾ ಇಬ್ಬರೂ ತಮ್ಮತಮ್ಮ ಮಾತುಗಳಿಗೆ ಬದ್ಧರಾಗಿದ್ದರು. 

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿ ನಾಯಕ ರಾಮಾಚಾರಿ ಪಾತ್ರಧಾರಿ ವಿಷ್ಣುವರ್ಧನ್ ಎದುರು ನಾಯಕಿಯಾಗಿ ನಟಿ ಆರತಿ ಮಿಂಚಿದ್ದರು. ಚಿತ್ರದುರ್ಗದ ಒನಕೆ ಓಬವ್ವನ ಪಾತ್ರದಲ್ಲಿ ನಟ ಜಯಂತಿ ನಟಿಸಿ ತುಂಬಾ ಖ್ಯಾತಿ ಪಡೆದರು. ನಾಗರಹಾವು ಸೂಪರ್ ಹಿಟ್ ದಾಖಲಿಸಿದ ಕಾರಣಕ್ಕೆ ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೊಸ ಸ್ಟಾರ್ ನಟರಾಗಿ ಬೆಳಕಿಗೆ ಬಂದರು. 

ಶ್ರೀಮುರಳಿ 'ಬಘೀರ' ಮೇಲೆ ಸೈಲೆಂಟ್ ಅಟ್ಯಾಕ್? ಯಾಕಿನ್ನೂ ಪ್ರಮೋಶನ್ ಶುರುವಾಗಿಲ್ಲ?

ಸಾಹಸಸಿಂಹ, ಅಭಿನಯ ಭಾರ್ಗವ ಹಾಗೂ ದಾದಾ ಹೀಗೆ ಹಲವು ಹೆಸರುಗಳ ಮೂಲಕ ನಟ ವಿಷ್ಣುವರ್ಧನ್ ಅವರನ್ನು ಕನ್ನಡದ ಸಿನಿಪ್ರೇಕ್ಷಕರು ಪ್ರೀತಿ-ಗೌರವದಿಂದ ಕರೆಯುತ್ತಾರೆ. ಬರೋಬ್ಬರಿ 200 ಸಿನಿಮಾಗಳಲ್ಲಿ ನಾಯಕರಾಗಿ ಅಭಿನಯಿಸಿರುವ ನಟ ವಿಷ್ಣುವರ್ಧನ್ ಅವರು ಡಾಕ್ಟರೇಟ್ ಗೌರವಕ್ಕೆ ಸಹ ಪಾತ್ರರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೇರು ನಟರೆಂದು ಗುರುತಿಸಿಕೊಂಡಿರುವ ನಟ ವಿಷ್ಣುವರ್ಧನ್ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ, ಅವರನ್ನು ಕನ್ನಡ ಸಿನಿಪ್ರೇಕ್ಷರು ಎಂದೂ ಮರೆಯಲಾಗದು. 

click me!