ಶ್ರೀಮುರಳಿ 'ಬಘೀರ' ಮೇಲೆ ಸೈಲೆಂಟ್ ಅಟ್ಯಾಕ್? ಯಾಕಿನ್ನೂ ಪ್ರಮೋಶನ್ ಶುರುವಾಗಿಲ್ಲ?

By Shriram Bhat  |  First Published Oct 16, 2024, 3:33 PM IST

ಅಕ್ಟೋಬರ್​ 31ಕ್ಕೆ ಬಘೀರ ಬೆಳ್ಳಿ ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡೋದು ಫಿಕ್ಸ್. ಆದ್ರೆ ಬಘೀರನ ಒಂದೇ ಒಂದು ಟೀಸರ್ ಹೊರತು ಪಡಿಸಿ ಮತ್ತಿನ್ನೇನನ್ನೂ ಕೊಟ್ಟಿಲ್ಲ ಬಘೀರ ಟೀಮ್. ಸಿನಿಮಾದ ಪ್ರಮೋಷನ್​ ಮಾಡುತ್ತಿಲ್ಲ ಯಾಕೆ ಅಂತ ಕೇಳುತ್ತಿದ್ದಾರೆ ಶ್ರೀಮುರಳಿ ಫ್ಯಾನ್ಸ್.


ಹೊಂಬಾಳೆ ಫಿಲ್ಮ್ ಬ್ಯಾನರ್​​ (Hombale Films) ಸಿನಿಮಾಗಳು ಅಂದ್ರೆ ಬಣ್ಣದ ಜಗತ್ತು ಬೆರಗು ಕಣ್ಣಿನಿಂದ ಕಾಯುತ್ತೆ. ಕ್ವಾಲಿಟಿ ಸಿನಿಮಾ ಕೊಟ್ಟು ಪ್ರೇಕ್ಷಕರ ಮನ ಗೆಲ್ಲೋ ಹೊಂಬಾಳೆ ಪ್ರೊಡಕ್ಷನ್ ಈಗ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಜೊತೆ ಬಘೀರ ಸಿನಿಮಾ ಮಾಡಿದೆ. ಈ ಬಘೀರ ಅಕ್ಟೋಬರ್​ 31ಕ್ಕೆ ತೆರೆಗೆ ಬರೋದು ಫಿಕ್ಸ್ ಆಗಿದೆ. ಆದ್ರೆ ಸಿನಿಮಾ ಪ್ರಮೋಷನ್​ ಬಗ್ಗೆ ಹೊಂಬಾಳೆ ಕಿಂಚಿತ್ತು ತಲೆ ಕೆಡಿಸಿಕೊಂಡಿಲ್ಲ. ಹಾಗಾದ್ರೆ ಬಘೀರನ ಪ್ರಮೋಷನ್​​ ಯಾಕಾಗ್ತಿಲ್ಲ..? ಹೊಂಬಾಳೆ ಈ ವಿಷಯದಲ್ಲಿ ಸೈಲೆಂಟ್ ಆಗಿರೋದೇಕೆ..? ಜೆಸ್ಟ್ ಹ್ಯಾವ್ ಲುಕ್.. 

ರೋರಿಂಗ್ ಸ್ಟಾರ್ ಶ್ರೀಮುರಳಿ ಸ್ಯಾಂಡಲ್​ವುಡ್​​ನ ನಯಾ ಬ್ರ್ಯಾಂಡ್ ಆಗಿದ್ದಾರೆ. ಅದು ಉಗ್ರಂ ಸಿನಿಮಾ ಮೂಲಕ. ಉಗ್ರಂ ಬಂದ ಮೇಲೆ ಶ್ರೀಮುರಳಿ ರೇಂಜ್ ಬದಲಾಗಿದೆ. ಬಂದ ಸಿನಿಮಾಗಳು ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿವೆ. ಈಗ ಶ್ರೀಮುರಳಿ ಬಘೀರನಾಗಿ ಬಾಕ್ಸಾಫೀಸ್​ ದೋಚೋ ಐಡಿಯಾ ಹಾಕಿದ್ದಾರೆ. ಆದ್ರೆ  ಬಘೀರ ರಿಲೀಸ್​ಗೆ ಎರಡು ವಾರ ಭಾಕಿ ಇದೆ. ಸಿನಿಮಾ ಪ್ರಮೋಷನ್ ಮಾತ್ರ ಸೈಲೆಂಟ್​ ಆಗಿದೆ. 

Tap to resize

Latest Videos

undefined

 

'ಬಘೀರ' ಫುಲ್ ಸೈಲೆಂಟ್.. ಶ್ರೀಮುರಳಿ ಫ್ಯಾನ್ಸ್ ಗರಂ.., ರಿಲೀಸ್​ಗೆ ಎರಡೇ ವಾರ, ಆದ್ರೂ ಬಘೀರನಿಗಿಲ್ಲ ಪ್ರಮೋಷನ್ ಯಾಕೆ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ. ಅಕ್ಟೋಬರ್​ 31ಕ್ಕೆ ಬಘೀರ ಬೆಳ್ಳಿ ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡೋದು ಫಿಕ್ಸ್. ಆದ್ರೆ ಬಘೀರನ ಒಂದೇ ಒಂದು ಟೀಸರ್ ಹೊರತು ಪಡಿಸಿ ಮತ್ತಿನ್ನೇನನ್ನೂ ಕೊಟ್ಟಿಲ್ಲ ಬಘೀರ ಟೀಮ್. ಶ್ರೀಮುರಳಿ ಸಿನಿಮಾ ಅಂದ್ರೆ ಫ್ಯಾನ್ಸ್ ಬ್ಯಾಂಗ್ ಬ್ಯಾಂಗ್ ಎತ್ತುತ್ತಿರುತ್ತಾರೆ. 

ಆದ್ರೆ ಬಘೀರನ ವಿಷಯದಲ್ಲಿ ಮಾತ್ರ ನಿರ್ಮಾಣ ಸಂಸ್ಥೆ ತೋರುತ್ತಿರೋ ಧೋರಣೆ ನೋಡಿ ಫುಲ್ ಗರಂ ಆಗಿದ್ದಾರೆ. ಇಂತಹ ದೊಡ್ಡ ಸ್ಟಾರ್​ ಸಿನಿಮಾದ ಪ್ರಮೋಷನ್​ ಮಾಡುತ್ತಿಲ್ಲ ಯಾಕೆ ಅಂತ ಕೇಳುತ್ತಿದ್ದಾರೆ. ಬಘೀರನ ನಿರ್ಲಕ್ಷ್ಯ ಮಾಡುತ್ತಿದೆಯಾ ಹೊಂಬಾಳೆ ಸಂಸ್ಥೆ..? 
ಬಘೀರ ಹೊಂಬಾಳೆ ಪ್ರೊಡಕ್ಷನ್​​ ನಿರ್ಮಾಣದ ಸಿನಿಮಾ. ಹೊಂಬಾಳೆ ಬ್ಯಾನರ್​ನಲ್ಲಿ ಬರೋ ಸಿನಿಮಾ ಅಂದ್ರೆ ಕ್ರೇಜ್ ಹೇಗಿರುತ್ತೆ ಅಂತ ಈ ಹಿಂದೆ ಬಂದ ಸಿನಿಮಾಗಳೇ ಸಾಕ್ಷಿ. 

ಯಶ್​, ಪುನೀತ್​​, ಜಗ್ಗೇಶ್, ಪ್ರಭಾಸ್​​​​, ಪಹಾದ್​ ಫಾಸಿಲ್​​​​, ಕೀರ್ತಿ ಸುರೇಶ್​ರ ಸಿನಿಮಾಗಳಷ್ಟೇ ಅಲ್ಲ. ಕನ್ನಡಕ್ಕೆ ಹೊಸ ಹೀರೋ ಯುವ ರಾಜ್​ಕುಮಾರ್​ರ ಸಿನಿಮಾವನ್ನೂ ದೊಡ್ಡ ಮಟ್ಟಕ್ಕೆ ಪ್ರಮೋಟ್ ಮಾಡಿತ್ತು ಹೊಂಬಾಳೆ. ಆದ್ರೆ ಬಘೀರನ ಪ್ರಮೋಷನ್​ ವಿಷಯದಲ್ಲಿ ಮಾತ್ರ ಹೊಂಬಾಳೆ ಬ್ಯಾನರ್ ಗಪ್​ ಚುಪ್ ಆಗಿದೆ. ಹೀಗಾಗಿ ಶ್ರೀಮುರಳಿ ಸಿನಿಮಾಗೆ ಯಾಕೀ ನಿರ್ಲಕ್ಷ್ಯ ಅಂತ ಫ್ಯಾನ್ಸ್ ಸಿಟ್ಟಾಗಿದ್ದಾರೆ.

ಮಾಲಾಶ್ರೀ ಮತ್ತು ಸುಧಾರಾಣಿ ಮಧ್ಯೆ ಅಂದು ಏನಾಗಿತ್ತು? ಸೀಕ್ರೆಟ್ ಬಿಚ್ಚಿಟ್ಟ 'ಮನ ಮೆಚ್ಚಿದ ಹುಡುಗಿ'..!
 
ನೀಲ್ ಕಥೆ ಮೇಲೆ ಹೊಂಬಾಳೆಗೆ ಕಡಿಮೆ ಆಯ್ತಾ ನಂಬಿಕೆ..?: ಬಘೀರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಡಾಕ್ಟರ್​ ಸೂರಿ. ಆದ್ರೆ ಈ ಕಥೆ ಕೊಟ್ಟಿದ್ದು, ಕರ್ನಾಟಕ ಪ್ರೈಡ್​​ ಪ್ರಶಾಂತ್ ನೀಲ್.. ಪ್ರಶಾಂತ್ ನೀಲ್​ ಸ್ಟೋರಿ ಅಂದ್ಮೇಲೆ ಈ ಸಿನಿಮಾಗಾಗಿ ಪ್ರೇಕ್ಷಕರು ಕಾಯೋದ್ರಲ್ಲಿ ಯಾವ್ದೇ ಡೌಟ್ ಇಲ್ಲ. ಆದ್ರೆ ಸಿನಿಮಾ ಬಗ್ಗೆ ಪ್ರಚಾರನೇ ಮಾಡುತ್ತಿಲ್ಲ. ಹಾಗಾದ್ರೆ ಹೊಂಬಾಳೆ ಬ್ಯಾನರ್​ರ ಫೇವರಿಟ್ ಡೈರೆಕ್ಟರ್​ ಪ್ರಶಾಂತ್ ನೀಲ್ ಕಥೆ ಮೇಲೆ ಹೊಂಬಾಳೆ ಬ್ಯಾನರ್​ಗೆ ನಂಬಿಕೆ ಇಲ್ಲವಾ..? ಪ್ರಶಾಂತ್ ನೀಲ್, ಶ್ರೀಮುರಳಿ ಹಾಗು ಹೊಂಬಾಳೆ ಬ್ಯಾನರ್​ ಮಧ್ಯೆ ಏನಾದ್ರು ಮುನಿಸು ಇದೆಯಾ ಅನ್ನೋ ಪ್ರಶ್ನೆ ಗಾಂಧಿನಗರದಲ್ಲಿ ಓಡಾಡುತ್ತಿದೆ!

click me!