ರಶ್ಮಿಕಾ ಮಂದಣ್ಣ ತಲೆಗೆ ಹೊಸ ಕಿರೀಟ, ಪಂಚ್ ಕೊಡೋಕೆ ರೆಡಿಯಾದ ನ್ಯಾಷನಲ್ ಕ್ರಶ್‌!

By Shriram Bhat  |  First Published Oct 16, 2024, 12:48 PM IST

ಇತ್ತೀಚಿಗೆ ನಾನಾ ರೂಪಗಳಲ್ಲಿ ಸೈಬರ್ ಅಪರಾಧಗಳು ನಡೀತಾ ಇವೆ. ದಿನೇ ದಿನೇ ಆನ್​ಲೈನ್ ವಂಚನೆಗಳು ಹೆಚ್ಚಾಗ್ತಾ ಇವೆ. ನಟಿ ರಶ್ಮಿಕಾ ಮಂದಣ್ಣ ಈ ಹಿಂದೆ ಸೈಬರ್ ಕ್ರೈಂಗೆ ಬಲಿಪಶು ಆಗಿದ್ರು. ಈಗೇನಾಗಿದೆ ನೋಡಿ.. 


ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಡೀಪ್​ಫೇಕ್ ವಿಡಿಯೋವೊಂದು (Deep Fake Video) ವೈರಲ್ ಆಗಿ ಬಿರುಗಾಳಿ ಎಬ್ಬಿಸಿತ್ತು. ಖುದ್ದು ರಶ್ಮಿಕಾ ಈ ಘಟನೆಯಿಂದ ಅಪ್​ಸೆಟ್ ಆಗಿದ್ರು. ಆದ್ರೆ ಈಗ ಸೈಬರ್ ಕ್ರೈಂಗಳ ವಿರುದ್ದ ರಶ್ಮಿಕಾ ಸಮರ ಸಾರೋಕೆ ಮುಂದಾಗಿದ್ದಾರೆ. ಅದ್ಹೇಗೆ ಅಂತೀರಾ..ನ್ಯಾಷನಲ್​ ಕ್ರಶ್ ರಶ್ಮಿಕಾ ಈಗ ಸೈಬರ್ ಸೇಫ್ಟಿ ಪ್ರಮೋಷನ್​​ಗೆ ನ್ಯಾಷನಲ್ ಅಂಬಾಸಿಡರ್.
 
ನ್ಯಾಷನಲ್ ಕ್ರಶ್ (National Crush) ಇನ್ಮುಂದೆ ನ್ಯಾಷನಲ್ ಅಂಬಾಸಿಡರ್..! ಸೈಬರ್ ಕ್ರೈಂ ಕುರಿತ ಜಾಗೃತಿಗೆ ರಶ್ಮಿಕಾ ರಾಯಭಾರಿ: ಯೆಸ್ ನ್ಯಾಷನಲ್ ಕ್ರಶ್ ರಶ್ಮಿಕಾ ನ್ಯಾಷನಲ್ ಲೆವೆಲ್​ನಲ್ಲಿ ದೊಡ್ಡದೊಂದು ಜಾಗೃತಿಯ ಕೆಲಸ ಮಾಡೋಕೆ ಸಜ್ಜಾಗಿದ್ದಾರೆ. ಕೇಂದ್ರದ ಗೃಹ ಸಚಿವಾಲಯ ಆರಂಭಿಸಿರೋ ಸೈಬರ್ ಅಪರಾಧಗಳ ಸಮನ್ವಯ ಕೇಂದ್ರಕ್ಕೆ  ನ್ಯಾಷನಲ್ ಅಂಬಾಸಿಡರ್ ಆಗಿ ರಶ್ಮಿಕಾನ ನೇಮಿಸಲಾಗಿದೆ. 

Tap to resize

Latest Videos

undefined

 

ಅಸಲಿಗೆ ಇತ್ತೀಚಿಗೆ ನಾನಾ ರೂಪಗಳಲ್ಲಿ ಸೈಬರ್ ಅಪರಾಧಗಳು ನಡೀತಾ ಇವೆ. ದಿನೇ ದಿನೇ ಆನ್​ಲೈನ್ ವಂಚನೆಗಳು ಹೆಚ್ಚಾಗ್ತಾ ಇವೆ. ಅಷ್ಟೆಲ್ಲಾ ಯಾಕೆ ಖುದ್ದು ರಶ್ಮಿಕಾ ಮಂದಣ್ಣ ಈ ಹಿಂದೆ ಸೈಬರ್ ಕ್ರೈಂಗೆ ಬಲಿಪಶು ಆಗಿದ್ರು. ಕಳೆದ ವರ್ಷ ರಶ್ಮಿಕಾರ ಡೀಪ್ ಫೇಕ್ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು. 

ಖುದ್ದು ರಶ್ಮಿಕಾ ಇದರ ಬಗ್ಗೆ ಅಪ್​ಸೆಟ್ ಆಗಿದ್ರು. ಈ ರೀತಿ ಯಾವ ಹೆಣ್ಣುಮಕ್ಕಳಿಗೂ ಆಗಬಾರದು ಅಂತ ಪೋಸ್ಟ್ ಮಾಡಿದ್ರು. ಮತ್ತೀಗ ಖುದ್ದು ರಶ್ಮಿಕಾ ಸೈಬರ್ ಕ್ರೈಂ ಕುರಿತ ಜಾಗೃತಿ ಅಭಿಯಾನಕ್ಕೆ ರಾಯಭಾರಿಯಾಗಿದ್ದಾರೆ. ಈ ವಿಚಾರವನನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿರೋ ರಶ್ಮಿಕಾ ಆನ್ ಲೈನ್ ಜಗತ್ತಿನ ರಕ್ಷಣೆಗೆ ಇದು ಸೂಕ್ತ ಸಮಯ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ಪೋಸ್ಟ್ : ಕೆಲವು ವರ್ಷಗಳ ಹಿಂದೆ ನನ್ನ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಗೊತ್ತೇ ಇದೆ. ಅದು ಸೈಬರ್ ಕ್ರೈಂ. ಅದರ ನಂತರ ನಾನು ಸೈಬರ್ ಅಪರಾಧಗಳ ವಿರುದ್ಧ ಹೋರಾಡಬೇಕು ಅಂತ ಯೋಚಿಸಿದೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದುಕೊಂಡಿದ್ದೆ. ಆ ನಿಮಿತ್ತ ಕಾರ್ಯಯೋಜನೆ ರೂಪಿಸಿದ್ದೆ.. ಇದೇ ವೇಳೆ ನಾನು ಕೇಂದ್ರ ಸರ್ಕಾರದ ಜೊತೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿದ್ದೇನೆ ಎಂದು ಹೇಳಲು ಸಂತೋಷವಾಗಿದೆ. 

ಹೀಗ್ ಆಗಿತ್ತಾ ದೇವ್ರೇ..; ಕಿರಿಕ್ ಪಾರ್ಟಿ ಟೈಮ್‌ನಲ್ಲಿ ನಡೆದ ಸೀಕ್ರೆಟ್ ಘಟನೆ ಹಂಚಿಕೊಂಡ ರಿಷಬ್ ಶೆಟ್ಟಿ!

ಸೈಬರ್ ಕ್ರಿಮಿನಲ್‌ಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಎಚ್ಚರವಾಗಿರುವುದು ಮಾತ್ರವಲ್ಲದೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಮತ್ತು ಸೈಬರ್ ಅಪರಾಧಗಳ ವಿರುದ್ಧ ಕೆಲಸ ಮಾಡಬೇಕು. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿ ನಾನು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸೈಬರ್ ಅಪರಾಧಗಳಿಂದ ದೇಶವನ್ನು ರಕ್ಷಿಸಬೇಕಿದೆ. 

ಯೆಸ್, ತನಗೆ ಸಿಕ್ಕಿರೋ ಹೊಸ ಜವಾಬ್ದಾರಿಯನ್ನ ಸೂಕ್ತವಾಗಿ ನಿರ್ವಹಿಸುತ್ತೀನಿ ಎಂದಿರೋ ರಶ್ಮಿಕಾ, ಸೈಬರ್ ಅಪರಾಧಗಳ ವಿರುದ್ದ ಎಲ್ಲರೂ ಎಚ್ಚೆತ್ತುಕೊಳ್ಳಿ ಅಂದಿದ್ದಾರೆ. ಒಟ್ನಲ್ಲಿ ಸೈಬರ್ ಅಪರಾಧಕ್ಕೆ ಬಲಿಪಶುವಾಗಿರೋ ನಟಿಯೇ ಈಗ ಅದರ ವಿರುದ್ದ ಹೋರಾಟಕ್ಕೆ ರಾಯಭಾರಿಯಾಗಿರೋದು ಸ್ಪೆಷಲ್. ಇನ್ಮುಂದೆ ಆನ್​ಲೈನ್​ನಲ್ಲಿ ಕಿರಿಕ್ ಮಾಡೋರಿಗೆ ನಮ್ಮ ಕಿರಿಕ್ ಬ್ಯೂಟಿ ಪಂಚ್ ಕೊಡಲಿದ್ದಾರೆ. 

ತಮಗೆ ಸಿಕ್ಕಿರುವ ಈ ಅವಕಾಶದ ಮೂಲಕ ಕನ್ನಡತಿ, ಕಿರಿಕ್ ಖ್ಯಾತಿಯ ಬೆಡಗಿ ರಶ್ಮಿಕಾ ಯಾವೆಲ್ಲ ರೀತಿಯಲ್ಲಿ ಶೋಷಿಸುವವರಿಗೆ ಪಂಚ್ ಹಾಗು ನೊಂದವರಿಗೆ ಸಹಾಯಹಸ್ತ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ! ಒಟ್ಟಿನಲ್ಲಿ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಹೆಗಲಿಗೆ ಈಗ ಹೊಸ ಜವಾಬ್ದಾರಿ ಬಂದು ಕುಳಿತಿದೆ, ಮುಂದೇನು ಎಂಬುದನ್ನು ಕುತೂಹಲದ ಕಣ್ಣಿಂದ ಕಾಯಲಾಗುತ್ತಿದೆ. 

click me!