ಪೆಪೆ ಫಿಲಂ ಸದ್ದು ಮಾಡ್ತಿದೆ. ಇದರ ಟ್ರೇಲರ್ ಲಾಂಚ್ ಇವೆಂಟ್‌ನಲ್ಲಿ ಹಾಜರಿದ್ದ ಕಿಚ್ಚ ಸುದೀಪ್, ಫಿಲಂ ಹೀರೋಯಿನ್‌ಗೆ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಿದರು. ಯಾರೀಕೆ?
ಪೆಪೆ ಫಿಲಂ ಟ್ರೇಲರ್ ಸಾಕಷ್ಟು ಸದ್ದು ಮಾಡಿದೆ. ಇದರ ನಾಯಕ ನಟ ವಿನಯ್ ರಾಜ್ಕುಮಾರ್ ಕೂಡ ಚಿತ್ರದ ಗೆಲುವಿನ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದಾರೆ. ಇನ್ನೆರಡು ವರ್ಷ ಜನ ಈ ಫಿಲಂ ಬಗ್ಗೆ ಮಾತಾಡಿಕೊಳ್ತಾರೆ ಎಂದು ಹೇಳಿದ್ದಾರೆ. ಇದರ ಟ್ರೇಲರ್ ಲಾಂಚ್ ಇವೆಂಟ್ ಇತ್ತೀಚೆಗೆ ನಡೆಯಿತು. ಕನ್ನಡಿಗರ ಪ್ರೀತಿಯ ನಟ ಕಿಚ್ಚ ಸುದೀಪ್ ಇದಕ್ಕೆ ಆಗಮಿಸಿದ್ದರು. ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಪೆಪೆ ಫಿಲಂ ಹೀರೋಯಿನ್ ಅನ್ನು ಸ್ಟೇಜ್ ಮೇಲೆ ಕರೆಯಲಾಯಿತು. ಆಕೆ ಕೆಳಗೆ ವಿಐಪಿ ಗೆಸ್ಟ್‌ಗಳ ಎದುರಿನಿಂದ ಹಾದು ಹೋಗ್ತಾ ಇದ್ದಾಗ ಕಿಚ್ಚ ಸುದೀಪ್ ತಾವು ಕುಳಿತಿದ್ದ ಸೀಟಿನಿಂದಲೂ ತುಸು ಮುಂದೆ ಜರುಗಿ ಎರಡೂ ಕೈ ಜೋಡಿಸಿ ಆ ಹೀರೋಯಿನ್‌ಗೆ ನಮಸ್ಕಾರ ಹೇಳಿದರು. ಕಿಚ್ಚ ಸುದೀಪ್ ವಿನಯಕ್ಕೆ ಹೇಗೆ ಸ್ಪಂದಿಸಬೇಕು ಎಂದು ಗೊತ್ತಾಗದೆ ಆ ಹೀರೋಯಿನ್ ತಬ್ಬಿಬ್ಬಾದರು. ಕಿಚ್ಚ ಸುದೀಪ್ ಇಷ್ಟೆಲ್ಲಾ ಗೌರವ ಕೊಡೋ ಈಕೆ ಯಾರಪ್ಪಾ ಎಂದು ಎಲ್ರೂ ಬಿಟ್ಟ ಬಾಯಿ ಬಿಟ್ಟು ನೋಡ್ತಾ ಇದ್ರು.
ಈಕೆ ಕಾಜಲ್ ಕುಂದರ್. ಕನ್ನಡ ಚಿತ್ರರಂಗಕ್ಕೆ ಬಹುತೇಕ ಹೊಸಬಳು. ಹಾಗಂತ ಇಲ್ಲಿ ಪಾತ್ರ ಮಾಡಿಯೇ ಇಲ್ಲ ಎಂದಲ್ಲ. ಹಿಂದಿ ಕಿರುತೆರೆ ಸೇರಿ ಕನ್ನ ಡ, ತುಳು ಸಿನಿಮಾದಲ್ಲಿ ಮಿಂಚಿದ್ದಾಳೆ. ಕನ್ನಡದ ಕರಾವಳಿ
ಮೂಲದ ನಟಿ. ಕನ್ನ ಡದಲ್ಲಿ ‘ಮಾಯಾಕನ್ನಡಿ’, ‘ಬಾಂಡ್ ರವಿ’, ‘ಕೆಟಿಎಂ’ ಚಿತ್ರಗಳಲ್ಲಿ ನಟಿಸಿದ್ದಳು. ಶ್ರೀಲೇಶ್ ನಾಯರ್ ನಿರ್ದೇಶನದ ಹಾಗೂ ವಿನಯ್ ರಾಜ್‌ಕುಮಾರ್ ಹೀರೋ ಆಗಿರುವ ‘ಪೆಪೆ’ ಸಿನಿಮಾ ಈಕೆಯ ಮಹತ್ವಾಕಾಂಕ್ಷೆಯ ಮೂವಿ.
ಈ ಹಿಂದಿನ ಚಿತ್ರಗಳಿಗಿಂತ ಪೆಪೆ ಚಿತ್ರದ ಪಾತ್ರ ವಿಭಿನ್ನವಂತೆ. ಈ ಸಿನಿಮಾದಲ್ಲಿ ಈಕೆ ಸಿಂಧೂ ಎಂಬ ಶಿಕ್ಷಕಿಯ ಪಾತ್ರ. ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಬೋಲ್ಡ್ ಆದ ಪಾತ್ರ. ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಯಾರಿಗೂ ಹೆದರದೆ ನೇರವಾಗಿ ಖಂಡಿಸುವ ಮನೋಭಾವದ ಪಾತ್ರವಂತೆ. ಮಾಸ್ ಸಬ್ಜೆಕ್ಟ್‌ನ ಸಿನಿಮಾದಲ್ಲಿ ಈಕೆ ಕ್ಯೂಟ್ ಎಲಿಮೆಂಟ್. ಆಡಿಷನ್ ಮೂಲಕ ‘ಪೆಪೆ’ಗೆ ನಾಯಕಿಯಾಗಿ ಬಂದವಳು. ಆರಂಭದಿಂದಲೂ ಈ ಪಾತ್ರಕ್ಕೆ ಹಲವು ರೀತಿಯಲ್ಲಿ ಸಿದ್ಧತೆ ನಡೆಸಿದ್ದಾಳಂತೆ. ಗ್ರಾಮೀಣ ಸೊಗಡಿನ ಪಾತ್ರ. ಅದಕ್ಕೆ ಬೇಕಾದಂತೆ ಪಾತ್ರ ನಿರ್ವಹಣೆ ಮಾಡಿದ್ದಾಳಂತೆ.
ನಟಿಯೂ ಅಲ್ಲ, ಮಾಡೆಲ್ ಅಲ್ವೆ ಅಲ್ಲ ಆದ್ರೂ ಇಂಟರ್ನೆಟ್ ಪೂರ್ತಿ ಸ್ಟಾರ್ ನಟಿ ಮಗಳದ್ದೆ ಸದ್ದು…
ಸ್ವತಃ ಕಾಜಲ್ ಹೇಳುವಂತೆ ಈಕೆಯ ಪಾತ್ರ ಕುಟುಂಬ ಆಧಾರಿತ. ಅಲ್ಲಿ ಸಾಕಷ್ಟು ಸಂಭಾಷಣೆ ಬರುತ್ತವೆ. ಅಲ್ಲದೇ ನಾನಾ ಬಗೆಯ ಭಾವನೆಗಳನ್ನು ಪಾತ್ರದ ಮೂಲಕ ತೋರಿಸಬೇಕಿತ್ತು. ಇದಕ್ಕೆ ಅಗತ್ಯವಾದ ತರಬೇತಿ ಬೇಕಿತ್ತು. ಆ ಕಾರಣಕ್ಕಾಗಿ ಶೂಟಿಂಗ್ ಫ್ರೀ ಟೈಮ್‌ನಲ್ಲಿ ಸಾಕಷ್ಟು ರಿಹರ್ಸಲ್ ಮಾಡಿದ್ದಳು. ಹಿರಿಯ ಕಲಾವಿದರಿಂದ ಸಂಧ್ಯಾ ಅರಿಕೆರೆ, ಶಶಿಧರ್ ಭಟ್ ಸಾಕಷ್ಟು ತರಬೇತಿ ನೀಡಿದ್ದರು. ಸಂಭಾಷಣೆ, ಭಾವನೆಗಳು ಬರಲು ಸಾಕಷ್ಟು ಬಾರಿ ರಿಹರ್ಸಲ್ ಆಗಿತ್ತು. ಗ್ರಾಮೀಣ ಸೊಗಡಿನ ಚಿತ್ರ ಇದಾಗಿರುವುದರಿಂದ ಅದಕ್ಕೆ ತಕ್ಕಂತೆ ಸಂಭಾಷಣೆ ಬರಬೇಕಿತ್ತು. ಆ ಕಾರಣಕ್ಕಾಗಿ ಡಬ್ಬಿಂಗ್ ಮಾಡಿಲ್ಲ. ಈ ಸಿನಿಮಾದ ಪಾತ್ರದ ಮೂಲಕವೇ ಮೊದಲ ಬಾರಿಗೆ ರಕ್ತವನ್ನು ನೋಡಿದ್ದಾರಂತೆ ಕಾಜಲ್. ಬಹುತೇಕ ಶೂಟಿಂಗ್ ಕೊಡಗಿನಲ್ಲಿ ನಡೆಸಲಾಗಿದೆ. ಚಳಿಗಾಲ ಹಾಗೂ ಮಳೆಯ ನಡುವಿನ ದೃಶ್ಯಗಳು ತುಂಬಾ ಸವಾಲಾಗಿದ್ದವಂತೆ.
ನಟ ಶಶಿಕುಮಾರ್ ಮುಖ ಗುರುತೇ ಸಿಗದಷ್ಟು ಬದಲಾವಣೆ; ಆ ಆಕ್ಸಿಡೆಂಟ್ ನಂತರ ಏನಾಯ್ತು?
‘ಪೆಪೆ’ ಜತೆಗೆ ಕಾಜಲ್ ಕುಂದರ್ ನಟಿಸಿರುವ ಇನ್ನೊಂದು ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರಂತೆ. ಅದು ಪೋಸ್ಟ್ ಪೊಡಕ್ಷನ್ ಹಂತದಲ್ಲಿದೆ. ಇದರ ಜತೆಗೆ ಇನ್ನೂ ಕೆಲವು ಸ್ಕ್ರಿಪ್ಟ್ ಕೇಳಿರುವ ಕಾಜಲ್, ಇನ್ನೂ ಯಾವುದನ್ನೂ ಫೈನಲ್ ಮಾಡಿಲ್ಲ. ಕನ್ನಡದಲ್ಲಿ ಬಿಜಿ ಇರುವುದರಿಂದ ಬೇರೆ ಭಾಷೆಗಳ ಸಿನಿಮಾಗಳ ಬಗ್ಗೆ ಅಷ್ಟೇನೂ ಒಲವು ತೋರಿಸಿಲ್ಲ. ಆದರೆ ಒಳ್ಳೆಯ ಅವಕಾಶಗಳು ಬಂದರೆ ನಟಿಸುವೆ ಎನ್ನುತ್ತಾಳೆ. ‘ಪೆಪೆ’ ಸಿನಿಮಾದ ಟೀಸರ್, ಸಾಂಗ್‌ಗೆ ನಟರಾದ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಹಾಗೂ ರಾಘವೇಂದ್ರ ರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಕಾಜಲ್ ಭೇಟಿಯಾಗಿದ್ದ ರಾಘವೇಂದ್ರ ರಾಜ್‌ಕುಮಾರ್, ಕಾಜಲ್ ನಟನೆಗೆ ಮೆಚ್ಚುಗೆ ವ್ಯ ಕ್ತಪಡಿಸಿದ್ದಾರೆ. ಹೀರೋ ವಿನಯ್ ರಾಜ್‌ಕುಮಾರ್ ಚಿತ್ರದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿರುವುದು ತುಂಬಾ ಇಷ್ಟ ಎನ್ನುತ್ತಾಳೆ ಕಾಜಲ್.