ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣಿತಾ ಸುಭಾಷ್ ಮಗಳಿಗೆ ಕೃಷ್ಣನ ವೇಷ ತೊಡಿಸಿ ಪಟ್ಟ ಸಂಭ್ರಮ ನೋಡಿ, ವಿಡಿಯೋ ವೈರಲ್.
ನಟಿ ಪ್ರಣಿತಾ ಸುಭಾಷ್ ಎರಡನೆಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಚೆಗಷ್ಟೇ ಅವರು ಬೇಬಿ ಬಂಪ್ ಷೋ ವಿಡಿಯೋ ಶೂಟ್ ಮಾಡಿಸಿಕೊಂಡು ಈ ವಿಷಯ ತಿಳಿಸಿದ್ದರು. ಸದ್ಯ ನಟಿಯ ‘ರಾಮನ ಅವತಾರ’ ಈ ವರ್ಷ ರಿಲೀಸ್ ಆಗಿದೆ. ಆ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅಂದಹಾಗೆ ನಟಿ, 2021ರ ಮೇ 30ರಂದು ಉದ್ಯಮಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸಿಂಪಲ್ ಆಗಿ ಈ ಮದುವೆ ನೆರವೇರಿತ್ತು. ಪ್ರಣಿತಾ ಜೂನ್ 2022ರಲ್ಲಿ ಮಗಳಿಗೆ ಜನ್ಮ ನೀಡಿದರು. ಈಕೆಯ ಹೆಸರನ್ನು ಅರ್ನಾ ಎಂದು ಇಟ್ಟಿದ್ದಾರೆ. ಮಗಳಿಗೆ ಎರಡು ವರ್ಷವಾಗಿರುವ ಬೆನ್ನಲ್ಲೇ ಮತ್ತೊಮ್ಮೆ ಗುಡ್ ನ್ಯೂಟ್ ಕೊಟ್ಟಿದ್ದರು. ‘ಎರಡನೇ ರೌಂಡ್. ಈಗ ಪ್ಯಾಂಟ್ಗಳು ಫಿಟ್ ಆಗಲ್ಲ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಅವರು ರೆಸಾರ್ಟ್‌ನಲ್ಲಿ ಒಂದರಲ್ಲಿ ಸೀಮಂತ ಕೂಡ ಮಾಡಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಿಂದ ಆಚರಿಸಲಾಗಿದೆ. ಕೃಷ್ಣಾಷ್ಟಮಿ ಎಂದರೆ ಅಮ್ಮಂದಿರಗಂತೂ ಖುಷಿಯೋ ಖುಷಿ. ತಮ್ಮ ಪುಟ್ಟ ಕಂದಮ್ಮಗಳಿಗೆ ಕೃಷ್ಣನ ವೇಷ ತೊಡಿಸಿ ಪಾಲಕರು ಅದರಲ್ಲಿಯೂ ಹೆಚ್ಚಾಗಿ ಅಮ್ಮಂದಿರುವ ಖುಷಿ ಪಡುವ ರೀತಿಯೇ ನೋಡಲು ಚೆಂದ. ಸೆಲೆಬ್ರಿಟಿಯಾದರೇನು, ಅಮ್ಮನ ಹೃದಯ ಎಂದಿಗೂ ಅಮ್ಮನೇ. ಅದೇ ರೀತಿ ತಮ್ಮ ಎರಡು ವರ್ಷದ ಪುಟಾಣಿ ಅರ್ನಾಗೆ ಪ್ರಣಿತಾ ಅವರು ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ್ದಾರೆ. ಆದರೆ ಇಲ್ಲಿ ಬೆಣ್ಣೆಯ ಬದಲು ಮೊಬೈಲ್ ಹೈಲೈಟ್ ಆಗಿರೋ ಕಾರಣ ಅಭಿಮಾನಿಗಳು ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಇಷ್ಟು ಚಿಕ್ಕ ಪುಟಾಣಿಗೆ ಮೊಬೈಲ್ ಕೊಡಬೇಡಿ ಎಂದು ನಟಿಗೆ ಕಿವಿಮಾತು ಹೇಳುತ್ತಿದ್ದಾರೆ.
ತುಂಬು ಗರ್ಭಿಣಿ ನೇಹಾಗೆ ಸಿಹಿಕಹಿ ಚಂದ್ರು ಸ್ಪೆಷಲ್ ದಡ್ ಬಡ್ ದೋಸೆ! ಫಟಾಫಟ್ ದೋಸೆ ನೀವೂ ಮಾಡಿ ನೋಡಿ...
ಬೆಣ್ಣೆ ಕೃಷ್ಣ ಅಲ್ಲ ಈತ ಮೊಬೈಲ್ ಕೃಷ್ಣ ಎನ್ನುತ್ತಿದ್ದಾರೆ. ಇನ್ನು ಪ್ರಣಿತಾ ಅವರ ಸಿನಿ ಜರ್ನಿ ಕುರಿತು ಹೇಳುವುದಾದರೆ, ಬಹುಭಾಷಾ ನಟಿ ಈಕೆ. ಪೊರ್ಕಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ನಟಿ, ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ನಟಿಸಿದ್ದಾರೆ. ಸದ್ಯ ಸಿನಿಮಾಗಳಿಗೆ ಬ್ರೇಕ್ ನೀಡಿ, ಕುಟುಂಬದತ್ತ ಗಮನ ನೀಡಿದ್ದಾರೆ. ಅಂದಹಾಗೆ, 2020ರಿಂದ ಈಚೆಗೆ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಕಳೆದ ಐರ್ಷಗಳಿಂದ ಈಚೆಗೆ ಅವರು ನಟಿಸಿರುವುದು 4 ಸಿನಿಮಾಗಳಲ್ಲಿ ಮಾತ್ರ.
ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕಿಂತ ಮುಂಚಿತವಾಗಿ ಮಾಡೆಲಿಂಗ್ನಲ್ಲಿ ಇವರು ಮಿಂಚಿದ್ದರು. 2010ರ ಕನ್ನಡ ಚಿತ್ರವಾದ ಪೋರ್ಕಿ, ತೆಲುಗು ಚಲನಚಿತ್ರ ಪೊಕಿರಿ ಚಿತ್ರದ ರಿಮೇಕ್ನಲ್ಲಿ ನಟಿಯಾಗಿ ಅಭಿನಯಿಸಿದರು ಮತ್ತು ಅದೇ ವರ್ಷದಲ್ಲಿ ತೆಲುಗು ಚಲನಚಿತ್ರವಾದ ಎಮ್ ಪಿಲ್ಲೋ ಎಮ್ ಪಿಲ್ಲಡೊದಲ್ಲಿ ಅಭಿನಯಿಸಿದರು. ಯಶಸ್ವಿ ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. 2012ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಮಾನಾಂತರ ಚಿತ್ರ ಭೀಮಾ ತೀರದಲ್ಲಿ ಅವರು ಅಭಿನಯಿಸಿದರು, ಇದಕ್ಕಾಗಿ ಅವರು ಅತ್ಯುತ್ತಮ ಕನ್ನಡ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ಮತ್ತು ಅತ್ಯುತ್ತಮ ಕನ್ನಡ ನಟಿಗಾಗಿ ಸೀಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.
ಮಗಳು ಸಾರಾ ಅಲಿಗೆ ಸೆಕ್ಸ್ ಬಗ್ಗೆ ಹೀಗೆ ಪ್ರಶ್ನೆ ಕೇಳೋದಾ ನಟಿ ಕರೀನಾ ಕಪೂರ್? ನೆಟ್ಟಿಗರು ಗರಂ