ಕನ್ನಡ ಖ್ಯಾತ ನಿರ್ಮಾಪಕ ಕೆ. ಪ್ರಭಾಕರ್ ಹೃದಯಾಘಾತದಿಂದ ನಿಧನ

By Gowthami K  |  First Published Aug 27, 2024, 6:27 PM IST

ಸ್ಯಾಂಡಲ್‌ವುಡ್‌ನ ಹೆಸರಾಂತ ನಿರ್ದೇಶಕ ಮತ್ತು ನಿರ್ಮಾಪಕ ಕೆ. ಪ್ರಭಾಕರ್ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.


ಬೆಂಗಳೂರು (ಆ.27): ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕೆ ಪ್ರಭಾಕರ್ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಕೆ ಪ್ರಭಾಕರ್​ ಅವರನ್ನು ಅಪೋಲೋ ಆಸ್ಪತ್ರೆ ಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಲಿಸದೆ ಇಂದು ನಿಧನರಾಗಿದ್ದಾರೆ.

ಕನ್ನಡಕ್ಕೆ ಸೂಪರ್​ ಹಿಟ್ ಸಿನಿಮಾಗಳನ್ನ ಕೊಟ್ಟ ನಿರ್ಮಾಪಕರಾಗಿರುವ ಪ್ರಭಾಕರ್ ಅವರು ವಿಷ್ಣುವರ್ಧನ್​, ಉಪೇಂದ್ರ, ಅಂಬರೀಶ್, ಶಶಿಕುಮಾರ್​ ಅವರ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.  ಅವಳೇ ನನ್ನ ಗೆಳತಿ, ಮುದ್ದಿನ ಮಾವ, ತುಂಬಿದ ಮನೆ, ಸೋಲಿಲ್ಲದ ಸರದಾರ, ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿದವರಲ್ಲಿ ಕೆ.ಪ್ರಭಾಕರ್ ಕೂಡ ಒಬ್ಬರು.  ಶಿವರಾಜ್ ಕುಮಾರ್ ಮತ್ತು ರಾಧಿಕಾ ಕುಮಾರಸ್ವಾಮಿ ನಟನೆಯ 'ಅಣ್ಣ - ತಂಗಿ' ಚಿತ್ರಕ್ಕೂ ಇವರೇ ನಿರ್ಮಾಪಕರಾಗಿದ್ದರು. ಇದಲ್ಲದೆ ಗ್ಯಾಂಗ್ ಲೀಡರ್‌, ಸೇರಿದಂತೆ ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ತೆಲುಗು ಚಿತ್ರರಂಗದಲ್ಲೂ ಕೂಡ ಹಲವು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Latest Videos

ನಿರ್ಮಾಪಕ, ನಿರ್ದೇಶಕ ಕೆ. ಪ್ರಭಾಕರ್​​​​ ಗೆ 64  ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಎನ್​​ಆರ್​​​​​​ ಕಾಲೋನಿಯಲ್ಲಿ ಕೆ ಪ್ರಭಾಕರ್​ ನಿವಾಸವಿದ್ದು, ಮುಂದಿನ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿ ಮಾಹಿತಿ ತಿಳಿದುಬಂದಿಲ್ಲ.

click me!