ಯಶ್ ನಟನೆಯ ಕೆಜಿಎಫ್-3 ಚಿತ್ರದ ಶೂಟಿಂಗ್ ಯಾವಾಗ ಶುರು? ಈ ಕುರಿತು ನಟಿ ರವೀನಾ ಟಂಡನ್ಗೆ ಕೇಳಿದ ಪ್ರಶ್ನೆಗೆ ಹೇಳಿದ್ದೇನು?
ಸ್ಯಾಂಡಲ್ವುಡ್ನಲ್ಲಿ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ ಚಿತ್ರವೆಂದರೆ ಅದು ಕೆಜಿಎಫ್ ಮತ್ತು ಕೆಜಿಎಫ್-2. ಇದೀಗ ಯಶ್ ಅಭಿಮಾನಿಗಳು ಕೆಜಿಎಫ್-3 ನಿರೀಕ್ಷೆಯಲ್ಲಿದ್ದಾರೆ. 2018 ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ವಿಶ್ವಾದ್ಯಂತ 250 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, 2022ರಲ್ಲಿ ಬಿಡುಗಡೆಯಾದ ಚಾಪ್ಟರ್-2 1500 ಕೋಟಿ ರೂಪಾಯಿ ಗಳಿಸಿದೆ. ಎರಡು ವರ್ಷಗಳ ಅಂತರದಲ್ಲಿ ಚಾಪ್ಟರ್-2 ಬಂದಿದೆ. ಆದ್ದರಿಂದ ಇದಾಗಲೇ ಮತ್ತೆರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಚಾಪ್ಟರ್-3 ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಅಷ್ಟಕ್ಕೂ ಕೆಜಿಎಫ್-3 ಸಿನಿಮಾದ ಘೋಷಣೆ ಬಹಳ ಹಿಂದೆಯೇ ನಡೆದಿದೆ. ಸಿಂಪಲ್ ಪೂಜೆಯೊಂದಿಗೆ ಸ್ಕ್ರಿಪ್ಟ್ ಕೆಲಸ ಕೂಡ ಶುರು ಆಗಿದೆ. ಆದರ ಮಧ್ಯೆ ಸಲಾರ್ ಸಿನಿಮಾ ರಿಲೀಸ್ ಆಗಿದ್ದು, ದೊಡ್ಡಮಟ್ಟದಲ್ಲಿ ಸಕ್ಸಸ್ ಕಂಡಿದೆ.
ಆದ್ದರಿಂದ ಕೆಜಿಎಫ್-3 ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಸಹಜವಾಗಿದೆ. ಅಷ್ಟಕ್ಕೂ ಪ್ರಶಾಂತ್ ನೀಲ್ ಸಿನಿಮಾಗಳು ಎಂದರೆ ಅದು ದೊಡ್ಡ ಮಟ್ಟದಲ್ಲಿಯೇ ಹೆಸರು ಮಾಡುವಂಥದ್ದು, ಜೊತೆಗೆ ಬಿಗ್ ಬಜೆಟ್ ಕೂಡ. ಅದಕ್ಕೆ ಉದಾಹರಣೆ ಎಂದರೆ, ಉಗ್ರಂ. ಬಹು ದೊಡ್ಡ ಬಜೆಟ್ನಲ್ಲಿ ನಿರ್ಮಿಸಲಾಗಿದ್ದ ಉಗ್ರಂ ಬ್ಲಾಕ್ಬಸ್ಟರ್ ಎಂದು ಸಾಬೀತಾಗಿತ್ತು. ಅದರ ಬಳಿಕ ತೆರೆ ಕಂಡ ಕೆಜಿಎಫ್-1 ಮತ್ತು 2 ಕೂಡ ಬ್ಲಾಕ್ಬಸ್ಟರ್ ಆಗಿತ್ತು. ಇತ್ತೀಚೆಗೆ ಟಿವಿಯಲ್ಲಿಯೂ ಈ ಸಿನಿಮಾ ಪ್ರಸಾರ ಕಂಡಿದೆ. ಅದಕ್ಕಾಗಿಯೇ ಕೆಜಿಎಫ್-3 ನಿರೀಕ್ಷೆ ಹೆಚ್ಚಾಗಿದೆ.
20 ವಯಸ್ಸಿಗೆ ನಟನೆ ಸಾಕು ಅಂದ್ರು ಅಮ್ಮ... ಮದುವೆ ಮಾಡಿದ್ರು... ಆದ್ರೆ... ನೋವಿನ ದಿನಗಳ ನೆನೆದ ಸುಧಾರಾಣಿ
ಹಿಂದೊಮ್ಮೆ ಪ್ರಶಾಂತ್ ನೀಲ್ ಅವರು, ಕೆಜಿಎಫ್-3 ಮತ್ತು ಸಲಾರ್-2 ಕುರಿತು ಮಾತನಾಡಿದ್ದರು. ಅವರು ಆ ಸಮಯದಲ್ಲಿ ಕೊಟ್ಟ ಹಿಂಟ್ನಂತೆ ಕೆಜಿಎಫ್-3 ಸಿನಿಮಾ ಸ್ಕ್ರಿಪ್ಟ್ ಬರೆದಾಗಿದೆ. ಆದರೆ, ಪಾರ್ಟ್-3 ಯ ಕಥೆಯನ್ನ ಪಾರ್ಟ್-2 ಕಥೆಗೆ ಕನೆಕ್ಟ್ ಮಾಡೋ ಕೆಲಸ ಬಾಕಿ ಇದೆ. ಆದರೆ ಇದೀಗ ಯಶ್ ಟಾಕ್ಸಿಕ್ ಸಿನಿಮಾದ ಕೆಲಸದಲ್ಲಿಯೇ ಬ್ಯುಸಿ ಇದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ತಮ್ಮದೇ ಇತರ ಪ್ರೊಜೆಕ್ಟ್‌ಗಳಲ್ಲಿ ಫುಲ್ ಬ್ಯುಸಿ ಇದ್ದಾರೆ. ಹಾಗಾಗಿಯೇ ಕೆಜಿಎಫ್-3 ಸದ್ಯಕ್ಕೆ ಇಲ್ಲ ಅಂದಿದ್ದರು.
ಇದೀಗ ಕೆಜಿಎಫ್-2ನಲ್ಲಿ ನಟಿಸಿರೋ ಬಾಲಿವುಡ್ ನಟಿ ರವೀನಾ ಟಂಡನ್ ಅವರಿಗೆ ಕೆಜಿಎಫ್-3 ಕುರಿತು ಪ್ರಶ್ನೆ ಕೇಳಲಾಗಿತ್ತು. ಅಷ್ಟಕ್ಕೂ ಕೆಜಿಎಫ್ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ಮಂದಿಗೂ ಹುಚ್ಚೆಬ್ಬಿಸಿದೆ. ಇದೇ ಕಾರಣಕ್ಕೆ ಈ ಚಿತ್ರಕ್ಕಾಗಿ ಅವರೂ ಕಾತರದಿಂದ ಕಾಯುತ್ತಿದ್ದಾರೆ. ರವೀನಾ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗಿದೆ. ಕೆಜಿಎಫ್-3 ಯಾವಾಗ ಎಂದು ಹೇಳಬಹುದಾ ಎನ್ನುವ ಪ್ರಶ್ನೆಗೆ ನಟಿ, ಇಲ್ಲ, ಈಗಲೇ ಏನೂ ಹೇಳುವುದಿಲ್ಲ ಎನ್ನುತ್ತಲೇ ಅಲ್ಲಿಂದ ತೆರಳಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸುಶಾಂತ್ ಸಿಂಗ್ ನಿಗೂಢವಾಗಿ ಸತ್ತ 'ಭೂತ ಬಂಗ್ಲೆ'ಯಲ್ಲೇ ನೆಲೆಸಿರೋ ನಟಿ ಅದಾ ಶರ್ಮಾ ಅನುಭವ ಕೇಳಿ...