ಅವಕಾಶ ಸುಲಭವಾಗಿ ಸಿಕ್ಕಿಲ್ಲ; ಟೀಕಿಸಿದವರಿಗೆ ಎಷ್ಟು ಸಲ ರಿಜೆಕ್ಟ್‌ ಆಗಿದ್ದೀನಿ ಎಂದು ಮುಖಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ!

By Vaishnavi Chandrashekar  |  First Published Aug 13, 2024, 1:38 PM IST

ಮೊದಲ ಸಿನಿಮಾನೇ ಸೂಪರ್ ಹಿಟ್ ಅಗುವ ಮುನ್ನ ರಶ್ಮಿಕಾ ಮಂದಣ್ಣ ಎಷ್ಟು ಸಲ ರಿಜೆಕ್ಟ್‌ ಆಗಿದ್ರು ಗೊತ್ತಾ?


ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್‌ ಇಂಡಿಯಾ ಸ್ಟಾರ್. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಪ್ರತಿಯೊಂದು ಭಾಷೆಯ ಸ್ಟಾರ್ ನಟ-ನಟಿಯರು ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಹೀಗಾಗಿ ಸಿನಿಮಾ ಹಿಟ್ ಆಗಲಿ ಫ್ಲಾಪ್ ಆಗಲಿ ಸಂಭಾವನೆ ಮಾತ್ರ ಡಿಮ್ಯಾಂಡ್‌ಗೆ ತಕ್ಕಂತೆ ಪಡೆಯುತ್ತಾರೆ. ಪೊಗರು ಸಿನಿಮಾ ಆದ್ಮೇಲೆ ಕನ್ನಡ ಸಿನಿಮಾದಿಂದ ದೂರ ಉಳಿದುಬಿಟ್ಟ ರಶ್ಮಿಕಾ ಮಂದಣ್ಣ ಯಾವತ್ತೂ ಕಿರಿಕ್ ಪಾರ್ಟಿ ತಂಡಕ್ಕೆ ಕೃತಜ್ಞತೆ ಹೇಳಬೇಕು ಅಂತಾರೆ ಫ್ಯಾನ್ಸ್..... 

ಹೌದು! ಕಾಲೇಜಿನಲ್ಲಿ ಇದ್ದಾಗ ಸಣ್ಣ ಪುಟ್ಟ ಮಾಡಲಿಂಗ್ ಮಾಡಿಕೊಂಡು ಬೆಂಗಳೂರು ಟೈಮ್ಸ್‌ ಫ್ರೆಶ್ ಫೇಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಅವಕಾಶ ಹುಡುಕಿಕೊಂಡು ಸಾಕಷ್ಟು ಆಡಿಷನ್ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಸುಮಾರು 20 ರಿಂದ 30 ಸಲ ಆಡಿಷನ್ ಕೊಟ್ಟು ರಿಜೆಕ್ಟ್‌ ಆದ ಮೇಲೆ ಕಿರಿಕ್ ಪಾರ್ಟಿ ಸಿಕ್ಕಿದ್ದು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಕೈಗೆ ಕಿರಿಕ್ ಪಾರ್ಟಿ ಸುಲಭವಾಗಿ ಸಿಕ್ಕಿದ ಕಾರಣ ಈಗೆ ನಾಯಕಿಯಾಗಿ ಮಿಂಚುತ್ತಿರುವುದು ಎಂದು ಅನೇಕರು ಆರೋಪ ಮಾಡಿದ್ದರು ಆದರೆ ರಶ್ಮಿಕಾ ಇತ್ತೀಚಿಗೆ ಸ್ಪಷ್ಟನೆ ಕೊಟ್ಟರು.

Tap to resize

Latest Videos

ಮೆಟ್ಟಿಲು ಮೇಲೆ ಕುಳಿತು ಹಾಟ್ ಆಗಿ ಸ್ವಾಗತಿಸಿದ ಮಾಡಿದ ರಾಗಿಣಿ ದ್ವಿವೇದಿ; ಲಂಗಾ ಕೆಳಗೆ ಬಿಡಮ್ಮ ಎಂದ ನೆಟ್ಟಿಗರು!

' ನಾನು ಆಡಿಷನ್‌ಗಳಲ್ಲಿ ರಿಜೆಕ್ಟ್‌ ಆಗಿದ್ದೀನಿ ಆಗ ಅಳುತ್ತಾ ಮನೆ ಸೇರುತ್ತಿದ್ದೆ. ನಾನು ಸಿನಿಮಾ ಒಂದಕ್ಕೆ ನಿರಂತರವಾಗಿ ಆಡಿಷನ್ ಕೊಟ್ಟು ಆಯ್ಕೆ ಆಗಿದ್ದೆ. ಸುಮಾರು 2 ರಿಂದ 3 ತಿಂಗಳು ಸಿನಿಮಾ ತಂಡ ತರಬೇತಿ ನೀಡಿದ್ದರು. ತರಬೇತಿ ಪಡೆದ ನಂತರ ಸಿನಿಂಅ ಕ್ಯಾನ್ಸಲ್ ಆಯ್ತು. ಸಿನಿಮಾದಿಂದ ಸಿನಿಮಾಗೆ ಉತ್ತಮ ಆಗಬೇಕು ಎನ್ನುವ ಆಸೆ ನಮ್ಮ ಕೈಯಲ್ಲೇ ಇರುತ್ತದೆ. ನಾನು ನನ್ನ ಸಿನಿಮಾಗಳನ್ನು ನೋಡಿದಾಗ ನಾನು ಇನ್ನೂ ಉತ್ತಮವಾಗಿ ನಟಿಸಬಹುದು ಎಂದನಿಸುತ್ತದೆ' ಎಂದು ರಶ್ಮಿಕಾ ಖಾಸಗಿ ಸಂದರ್ಶನದಲ್ಲಿ ಹೇಳಿದ್ದರು. 

ಪಕ್ಕದಲ್ಲೇ ಹೆಂಡತಿ ಇದ್ರೂ ಮಾಜಿ ಗರ್ಲ್‌ಫ್ರೆಂಡ್‌ನ ಪ್ರಗ್ನೆಂಟ್ ಮಾಡಿದ ಸುಶಾಂತ್; ಆರಾಧನಾ ಸಂಕಷ್ಟದಲ್ಲಿ!

ಇನ್ನು ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಜೋಡಿಯಾಗಿ ನಟಿಸಿರುವ ಪುಷ್ಪ 1 ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ. ಇದಾದ ಮೇಲೆ ವಿಕ್ಕಿ ಕೌಶಲ್‌ ಜೊತೆ ನಟಿಸಿರುವ 'ಛವಾ' ಸಿನಿಮಾ ಕೂಡ ರಿಲೀಸ್‌ಗೆ ಸಜ್ಜಾಗಿದೆ. ಇದಾದ ಮೇಲೆ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಿರುವ 'ಸಿಕಂದರ್‌' ಸಿನಿಮಾ 2025ರಲ್ಲಿ ರಿಲೀಸ್ ಅಗಲಿದೆ. 

click me!