ಆಸ್ಪತ್ರೆ ಮಂಚದ ಮೇಲೆ ಮಲಗಿರೋ ದರ್ಶನ್ ಫೋಟೋ ಅಸಲಿಯತ್ತೇನು? ಮುಂದೇನು?

By Shriram Bhat  |  First Published Dec 2, 2024, 1:16 PM IST

ಕಾಟೇರ ಸಿನಿಮಾ ದರ್ಶನ್ ವೃತ್ತಿ ಬದುಕಲ್ಲೇ ಬೆಸ್ಟ್ ಸಿನಿಮಾ ಅಂದ್ರೆ ತಪ್ಪಾಗಲ್ಲ. 1970ರ ದಶಕದ ಗ್ರಾಮೀಣ ಬದುಕಿನ ಈ ಕಥೆಯಲ್ಲಿ ದರ್ಶನ್ ಪ್ರಬುದ್ಧವಾಗಿ ನಟಿಸಿದ್ರು. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಫಸ್ಟ್ ಕ್ಲಾಸ್.. ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಅಪ್ಪಟ ಕನ್ನಡ ಮಣ್ಣಿನ ಈ ಕಥೆ ಗೆದ್ದು ಬೀಗಿತ್ತು...


ಕಳೆದ ವರ್ಷದ ಕೊನೆಗೆ ದರ್ಶನ್ (Darshan) ನಟನೆಯ ಕಾಟೇರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡ ಸಿನಿರಂಗದಲ್ಲೇ ಅತಿದೊಡ್ಡ ಯಶಸ್ಸು ಕಂಡ ಕಾಟೇರ ದರ್ಶನ್​ ಪಾಲಿಗೆ ವರ್ಷಾರಂಭದಲ್ಲೇ ಗೆಲುವಿನ ಸಿಹಿಯನ್ನ ನೀಡಿತ್ತು. ಆದ್ರೆ ಖುಷಿಯಿಂದ ವರ್ಷಾರಂಭ ಮಾಡಿದ ದರ್ಶನ್​ಗೆ ಆ ಬಳಿಕ ಬೆನ್ನು ಬಿದ್ದಿದ್ದೆಲ್ಲಾ ಬರೀ ವಿವಾದಗಳೇ. ಅದ್ರಲ್ಲೂ ವರ್ಷಾಂತ್ಯದ ವೇಳೆ ದರ್ಶನ್​ ಜೈಲಿನಲ್ಲಿ ಕೊಳೆಯುವ ಸ್ಥಿತಿ ಬಂದಿದೆ. 2024ರಲ್ಲಿ ಶುಭಾರಂಭ ಮಾಡಿದ್ದ ದಾಸನಿಗೆ ವರ್ಷಾಂತ್ಯದ ಹೊತ್ತಿಗೆ ವೃತ್ತಿ ಬದುಕೇ ಅಂತ್ಯವಾಗುವಂತೆ ಆಗಿದೆ.

ಕಳೆದ ಜೂನ್​ನಲ್ಲಿ ದರ್ಶನ್ ಮರ್ಡರ್ ಕೇಸ್​​ನಲ್ಲಿ ಅರೆಸ್ಟ್ ಆದ್ರು. ಗೆಳತಿ ಪವಿತ್ರಾಗೆ ಅಶ್ಲೀಲ ಮೆಸೆಜ್ ಮಾಡ್ತಿದ್ದ ರೇಣುಕಾಸ್ವಾಮಿಯನ್ನ ದರ್ಶನ್ ಮತ್ತು ಟೀಮ್ ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ಜೈಲು ಸೀರಿದ್ರು. ಸದ್ಯ ಮೆಡಿಕಲ್ ಬೇಲ್ ಮೇಲೆ ಆಸ್ಪತ್ರೆಯಲ್ಲಿರೋ ನಟ, ಇನ್ನೆರಡು ವಾರದಲ್ಲಿ ಜೈಲಿಗೆ ಮರಳಬೇಕಿದೆ. ಒಟ್ಟಾರೆ ಖುಷಿ ಖುಷಿಯಿಂದ ವರ್ಷಾರಂಭ ಮಾಡಿದ್ದ ದರ್ಶನ್​ಗೆ ವರ್ಷಾಂತ್ಯ ಮಾತ್ರ ದುರಂತಮಯವಾಗಿದೆ. 

Latest Videos

undefined

ಸದ್ಯ ಬೇಲ್ ಮೇಲೆ ಜೈಲ್ ಹೊರಗಿರುವ ದರ್ಶನ್‌ ಮುಂದಿನ ಕಥೆ ಏನು? ವಿಡಿಯೋದಲ್ಲೇನೋ ಇದೆ ನೋಡಿ!

ಯೆಸ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ದರ್ಶನ್ ಫುಲ್ ಸಂತಸದ ಮೂಡ್​​ನಲ್ಲಿದ್ರು. ಕ್ರಾಂತಿ ಸಿನಿಮಾ ಸೋಲಿನ ಬಳಿಕ ಕಾಟೇರ ಚಿತ್ರವನ್ನ ಗೆಲ್ಲಿಸಲೇಬೇಕು ಅಂತ ಪಣ ತೊಟ್ಟಿದ್ದ ದರ್ಶನ್ ಮಾಧ್ಯಮಗಳ ಕ್ಷಮೆ ಕೇಳಿ ರಾಜಿ ಮಾಡಿಕೊಂಡಿದ್ರು. ಮಂಡ್ಯದಲ್ಲೊಂದು, ಹುಬ್ಬಳ್ಳಿಯಲ್ಲೊಂದು ಇವೆಂಟ್ ಮಾಡಿ ಭರ್ಜರಿ ಪ್ರಚಾರ ಮಾಡಿದ್ರು. ಸೋ ಡಿಸೆಂಬರ್ 29ಕ್ಕೆ ತೆರೆಗೆ ಬಂದಿದ್ದ ಕಾಟೇರ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು.

ಕಾಟೇರ ಸಿನಿಮಾ ದರ್ಶನ್ ವೃತ್ತಿ ಬದುಕಲ್ಲೇ ಬೆಸ್ಟ್ ಸಿನಿಮಾ ಅಂದ್ರೆ ತಪ್ಪಾಗಲ್ಲ. 1970ರ ದಶಕದ ಗ್ರಾಮೀಣ ಬದುಕಿನ ಈ ಕಥೆಯಲ್ಲಿ ದರ್ಶನ್ ಪ್ರಬುದ್ದವಾಗಿ ನಟಿಸಿದ್ರು. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಫಸ್ಟ್ ಕ್ಲಾಸ್.. ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಅಪ್ಪಟ ಕನ್ನಡ ಮಣ್ಣಿನ ಈ ಕಥೆ ಗೆದ್ದು ಬೀಗಿತ್ತು. ಕೆಜಿಎಫ್, ಕಾಂತಾರ ಚಿತ್ರಗಳನ್ನ ಬಿಟ್ರೆ ಅತಿಹೆಚ್ಚು  ಬಾಕ್ಸ್ ಆಫೀಸ್ ಗಳಿಕೆ ಮಾಡಿದ ಸಿನಿಮಾ ಕಾಟೇರ. ಕೆಜಿಎಫ್, ಕಾಂತಾರ ಪ್ಯಾನ್ ಇಂಡಿಯಾ ಚಿತ್ರಗಳಾದ್ರೆ ಜಸ್ಟ್ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾದ ಕಾಟೇರ ಬಾಕ್ಸ್ ಆಫೀಸ್ ಪಂಡಿತರನ್ನೇ ಬೆಚ್ಚಿಬೀಳುವಂತೆ ಕಲೆಕ್ಷನ್ ಮಾಡಿತ್ತು.

ವೈರಲ್ ವಿಡಿಯೋದಲ್ಲಿ ಕಿಚ್ಚ ಸುದೀಪ್ ಮಾತು ಕೇಳಿ ಫ್ಯಾನ್ಸ್ ಏನ್ ಅಂತಿದಾರೆ?

ಸೋ ದರ್ಶನ್ ಪಾಲಿಗೆ ಈ ವರ್ಷಾರಂಭವೇ ಖುಷಿ ಖುಷಿಯಿಂದ ಶುರುವಾಗಿತ್ತು. ತನ್ನ ವೃತ್ತಿ ಬದುಕಿನಲ್ಲೇ ಅತಿದೊಡ್ಡ ಯಸಸ್ಸು ಕಂಡ ಕಾಟೇರ ದರ್ಶನ್ ಮೊಗದಲ್ಲಿ ಸಂತಸ ತಂದಿತ್ತು. ಅದೇ ಖುಷಿಯಲ್ಲಿ ಸಕ್ಸಸ್ ಪಾರ್ಟಿ ಮಾಡಿದ್ರು ದರ್ಶನ್. ಹೌದು, ಕಾಟೇರ ಸಿನಿಮಾ ದೊಡ್ಡ ಸಕ್ಸಸ್ ಕಂಡ ಬೆನ್ನಲ್ಲೇ ಚಿತ್ರತಂಡ ಸಕ್ಸಸ್ ಮೀಟ್ ಅರೇಂಜ್ ಮಾಡಿತ್ತು. ಆವತ್ತು ತಂಡದ ಸದಸ್ಯರ ಜೊತೆಗೆ ಜೆಟ್ ಲ್ಯಾಗ್ ಪಬ್​ನಲ್ಲಿ ಖುಷಿ ಖುಷಿಯಾಗಿ ಪಾರ್ಟಿ ಮಾಡಿದ್ರು ದರ್ಶನ್. ಆದ್ರೆ ಅವಧಿ ಮೀರಿ ಪಾರ್ಟಿ ಮಾಡಿದ್ದವರಿಗೆ ಕೇಸ್ ಜಡಿದು ಬಿಸಿ ಮುಟ್ಟಿಸಿದ್ರು ಪೊಲೀಸರು.

ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ ವಿವರಣೆ ಕೊಡುವಂತೆ ನೋಟೀಸ್ ನೀಡಲಾಗಿತ್ತು. ತನ್ನ ಟೀಮ್ ಕಟ್ಟಿಕೊಂಡು ಸುಬ್ರಮಣ್ಯಪುರಂ ಪೊಲೀಸ್ ಠಾಣೆಗೆ ಬಂದಿದ್ರು. ಜನವರಿ ತಿಂಗಳಲ್ಲಿ ಅದ್ಯಾವ್ ಮುಹೂರ್ತದಲ್ಲಿ ಠಾಣೆ ಮೆಟ್ಟಿಲು ಹತ್ತಿದ್ರೋ ಇಡೀ ವರ್ಷ, ಸ್ಟೇಶನ್, ಕೋರ್ಟ್, ಜೈಲು ಅಂತ ಅಲೆಯುವಂತೆ ಆಗಿಬಿಡ್ತು. ಬಳಿಕ ದರ್ಶನ್‌ ಪಾಲಿಗೆ ಬಂದಿದ್ದೇ ಈ ರೇಣುಕಾಸ್ವಾಮಿ ಮರ್ಡರ್ ಆರೋಪ. 

ಜೀವನಕ್ಕೆ ಅಂತ್ಯ ಕೊಟ್ಟ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದಾದ ಫೋಟೋಸ್!

ಸದ್ಯ ಅನಾರೋಗ್ಯದ ನಿಮಿತ್ತ ಬೇಲ್ ಪಡೆದು ಆಚೆ ಇರುವ ನಟ ದರ್ಶನ್ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಸೆಲ್ಫೀ ಫೋಟೋದಂತೆ ಕಾಣುವ ಇದರ ಹಿಂದಿನ ಅಸಲಿಯತ್ತೇನು? ಇದು ಅವರೇ ತೆಗೆದುಕೊಂಡಿದ್ದಾ ಅಥವಾ ಇನ್ಯಾರೋ? ಆದರೆ, ನಟ ದರ್ಶನ್ ಆಸ್ಪತ್ರೆಯಲ್ಲಿ ಇರುವ ಫೋಟೋ 'ದರ್ಶನ'ವಾಗಿ ಸಹಜವಾಗಿ ಅವರ ಫ್ಯಾನ್ಸ್‌ಗಳು ಧನ್ಯತಾ ಭಾವ ಅನುಭವಿಸುತ್ತಿದ್ದರೆ ಮಿಕ್ಕವರು ಕಣ್ ಕಣ್ ಬಿಡುತ್ತಿದ್ದಾರೆ. ಮುಂದೇನು ನಟ ದರ್ಶನ್ ಭವಿಷ್ಯ ಎಂಬುದನ್ನು ಯಾರಿಂದಲೂ ಅಸಾಧ್ಯ ಎಂಬಂತಾಗಿದೆ. 

click me!