ಮಗಳು ಮನೆಗೆ ಕಾಲಿಟ್ಟ ವರ್ಷವೇ 3 ಸಿನಿಮಾ ರಿಲೀಸ್. ಅವಕಾಶ ಕಡಿಮೆ ಆಗುತ್ತದೆ ಎನ್ನುವವರಿಗೆ ಉತ್ತರ ಕೊಟ್ಟ ಮಿಲನಾ ನಾಗರಾಜ್.
ಕನ್ನಡ ಚಿತ್ರರಂಗ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ತಮ್ಮ ಬಾಳಿನ 'ಪರಿ'ಯನ್ನು ಕೆಲವು ತಿಂಗಳ ಹಿಂದೆ ಬರ ಮಾಡಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮಿಲನಾ ಕೆಲಸ ಮುಖ್ಯ ಎಂದು ಪ್ರಮೋಷನ್‌ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಿದ್ರೆ ಮದ್ವೆ ಆಗಿ ಮಗು ಆದ್ಮೇಲೆ ಸಿನಿಮಾ ಆಫರ್ ಕಡಿಮೆ ಆಗುತ್ತಾ? ಮಗಳು ಬಂದ ಮೇಲೆ ಜೀವನ ಎಷ್ಟು ಬದಲಾಗಿದೆ, ತಮ್ಮ ಸಾಕು ನಾಯಿ ಎಷ್ಟು ಹೊಂದಿಕೊಂಡಿದೆ ಎಂದು ಮಿಲನಾ ಹಂಚಿಕೊಂಡಿದ್ದಾರೆ.
ಆಫರ್ ಕಡಿಮೆ ಆಗಿದ್ಯಾ?
undefined
'ಬಹುಷ ನನ್ನ ಸಿನಿಮಾ ಜರ್ನಿಯಲ್ಲಿ 3 ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗಿರುವುದು ಅಂದ್ರೆ ಇದೇ ವರ್ಷ. ಮದುವೆ ಆದ ಮೇಲೆ 5 ಸಿನಿಮಾಗಳು ಅಲ್ಲ ಜಾಸ್ತಿನೇ ಮಾಡಿದ್ದೀನಿ ಆದರೆ ಅದರ ಬಗ್ಗೆ ಕಾಮೆಂಟ್ ಮಾಡಲು ನಾನು ಇಷ್ಟ ಪಡುವುದಿಲ್ಲ. ಆದರೆ ಮದುವೆ ಆಗಿರುವುದರಿಂದ ನನಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಿಲನಾ ಮಾತನಾಡಿದ್ದಾರೆ.
ಅದ್ಧೂರಿಯಾಗಿ ನಡೆಯಿತು ಚಂದನಾ- ಪ್ರತ್ಯಕ್ಷ್ ರಿಸೆಪ್ಶನ್ ; ಲೆಹೆಂಗಾದಲ್ಲಿ ಮಿಂಚಿದ ಚಿನ್ನು ಮರಿ
ಮಗಳು ಪರಿ:
'ಮಗುವಿಗೆ ಪ ಅಕ್ಷರ ಬಂದಿತ್ತು ಆಗ ನಾನು ಇನ್ನೂ ಆಸ್ಪತ್ರೆಯಲ್ಲಿ ಇದ್ದ ಕಾರಣ ಕೃಷ್ಣ ಯೋಚನೆ ಮಾಡಿ ಪರಿ ಎಂದು ಆಯ್ಕೆ ಮಾಡಿದ್ದರು. ಪರಿ ಹೆಸರಿನ ಅರ್ಥ ಏಂಜಲ್ ಎಂದು. ತಂದೆ ತಾಯಂದಿರಿಗೆ ಮಕ್ಕಳು ಹಾಗೆ ಅನಿಸುತ್ತಾರೆ ಹೀಗಾಗಿ ಆಕೆ ನಮ್ಮ ಬಾಳಿಗೆ ಏಂಜಲ್ ಆಗಿ ಬಂದಿದ್ದಾಳೆ ಅದಿಕ್ಕೆ ಈ ಹೆಸರನ್ನು ಆಯ್ಕೆ ಮಾಡಿದ್ದು. ಉದ್ದ ಹೆಸರು ಇಡುವುದು ನನಗೆ ಅಷ್ಟು ಇಷ್ಟ ಆಗುವುದಿಲ್ಲ ಏಕೆಂದರೆ ಅದನ್ನು ನಾನು ಕರೆಯುವಾಗ ಆದಷ್ಟು ಶಾರ್ಟ್ ಮಾಡುತ್ತೀವಿ ಅದರಲ್ಲೂ ಪರಿ ಹೆಸರು ಕ್ಯೂಟ್ ಆಗಿದೆ ಅಂತ ಆಯ್ಕೆ ಮಾಡಿದ್ದು' ಎಂದು ಮಿಲನಾ ಹೇಳಿದ್ದಾರೆ.
ನಮ್ಮಿಬ್ಬರ ನಡುವೆ ಲವ್ ಆಗಿಲ್ಲ, ಕಂಕಣ ಭಾಗ್ಯ ಬರಲು ಸಾಧ್ಯವೇ ಇಲ್ಲ: ಧರ್ಮ ಕೀರ್ತಿರಾಜ್ ಸ್ಪಷ್ಟನೆ
ಸಾಕು ನಾಯಿ ರೋಮಿಯೋ - ಮಗಳು ಪರಿ:
'ನಾನು ಸಾಕಿರುವ ಮೊದಲ ಪ್ರಾಣಿನೇ ಈಗ ನಮ್ಮ ಮನೆಯಲ್ಲಿ ಇರುವ ರೋಮಿಯೋ, ಅವುಳು ಎಷ್ಟು ರೆಸ್ಪಾಂಡ್ ಮಾಡುತ್ತವೆ ಅನ್ನೋ ಐಡಿಯಾ ಕೂಡ ನನಗೆ ಇರಲಿಲ್ಲ. ಪ್ರಾಣಿಗಳು ಮಾತಿಲ್ಲದೆ ಮಾಡುವ ಕಮ್ಯೂನಿಕೇಷನ್ ಮನುಷ್ಯರು ಕೂಡ ಮಾಡುವುದಿಲ್ಲ ಅನಿಸುತ್ತದೆ. ಪ್ರಾಣಿಗಳನ್ನು ಸಾಕುವುದು ಒಂದು ಕಮಿಟ್ಮೆಂಟ್ ಇದ್ದ ಹಾಗೆ ಅವುಗಳನ್ನು ಸಾಕಲು ಆಗಲ್ಲ ಅಂದ್ರೆ ಕರೆದುಕೊಂಡು ಬರ್ಬಾರದು. ಪ್ರಾಣಿಗಳನ್ನು ಸಾಕದೇ ಇರುವವರು ನನ್ನ ಮಾತುಗಳನ್ನು ಕೇಳಿಸಿಕೊಂಡರೆ ಏನೋ ಓವರ್ ಅನಿಸಬಹುದು ಆದರೆ ನನಗೆ ರೋಮಿಯೋ ಮತ್ತು ಪರಿಯನ್ನು ಬೇಧಭಾವ ಮಾಡಲು ಸಾಧ್ಯವಿಲ್ಲ. ಪರಿ ಪುಟ್ಟ ಮಗು ಆಗಿರುವುದರಿಂದ ಹೆಚ್ಚಿನ ಸಮಯ ನೀಡಬೇಕು ಆದರೆ ನಾವು ಯಾವ ರೀತಿಯಲ್ಲೂ ಕಡಿಮೆ ಮಾಡಿಲ್ಲ. ಮಗು ಆದ ಮೇಲೆ ಮನೆಯಲ್ಲಿ ನಾಯಿ ಅಥವಾ ಬೆಕ್ಕುಗಳನ್ನು ಬೇರೆ ಮನೆಗೆ ಹಲವುರ ಕಳುಹಿಸುವುದನ್ನು ನಾನು ನೋಡಿದ್ದೀನಿ ಅದು ಬೇಸರ ಆಗುತ್ತದೆ ಏಕೆಂದರೆ ಅವುಗಳು ಬೇಗ ಮನಸ್ಸಿಗೆ ತೆಗೆದುಕೊಳ್ಳುತ್ತದೆ' ಎಂದಿದ್ದಾರೆ ಮಿಲನಾ ನಾಗರಾಜ್.