ಲೈಫನ್ನ ಲಾರ್ಜನ್ ವಿಷನ್‌ನಲ್ಲಿ ನೋಡೋಕೆ ಹೋದಾಗ, ಆವಾಗ ಅನ್ನಿಸುತ್ತೆ.. ಇಲ್ಲಿದೀನಿ ಇನ್ನ ನಾನು ಸುಮ್ನೆ ಕಾಲ ಕಳ್ಕೊಂಡು.. ಅದನ್ನ ನಾನು ಅರ್ಥ ಮಾಡ್ಕೊಂಡಿದೀನಿ.. ಅರ್ಥ ಅಗ್ತಾ ಇದೆ ಅಂದ್ಕೊಂಡಿದೀನಿ..' ಅಂದಿದ್ದಾರೆ ನಟ ಸುದೀಪ್...
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಬ್ಯುಸಿ ಆಗಿದ್ದು ಗೊತ್ತೇ ಇದೆ. ಇದೀಗ, ಅವರ ನಟನೆಯ ಮುಂಬರುವ ಮ್ಯಾಕ್ಸ್ ಚಿತ್ರವು ಈ ತಿಂಗಳು 25ರಂದು (25 December 2024) ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ನಟ ಸುದೀಪ್ ಅವರು ಮಾತನಾಡಿರುವ ಹಳೆಯ ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅವು ಸಾಕಷ್ಟು ವ್ಯೂಸ್, ಲೈಕ್ಸ್ ಹಾಗೂ ಕಾಮೆಂಟ್ಸ್ ಪಡೆಯುತ್ತವೆ. ಕಾರಣ, ನಟ ಸುದೀಪ್ ವ್ಯಕ್ತಿತ್ವ ಅನ್ನಬಹುದು.
ಹೌದು, ನಟ ಸುದೀಪ್ ಅವರದು ಬಹಮುಖ ಪ್ರತಿಭೆ ವ್ಯಕ್ತಿತ್ವ. ಜೊತೆಗೆ, ಅವರು ತಮಗೆ ಜೀವನದಲ್ಲಿ ಆಗಿರುವ ಅನುಭವಗಳ ಮೂಲಕ ತಮ್ಮದೇ ಆದ ರೀತಿಯಲ್ಲಿ 'ಲೈಫ್ ಲೆಸನ್' ತರ ಮಾತನಾಡುತ್ತಿರುತ್ತಾರೆ. ಕೆಲವೊಮ್ಮೆ ಸಂದರ್ಶನಗಳಲ್ಲಿ ಪ್ರಶ್ನೆಗೆ ಉತ್ತರ ರೂಪದಲ್ಲಿ, ಇನ್ನೂ ಕೆಲವೊಮ್ಮೆ ಎಲ್ಲೋ ವೇದಿಕೆಗಳಲ್ಲಿ ಜೀವನ, ಜೀವನ ಪಾಠ, ತಮ್ಮ ಬಗ್ಗೆ, ಬೇರೆಯವರ ಬಗ್ಗೆ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಅಂತಹದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹುಚ್ಚ ಚಿತ್ರದಲ್ಲಿ ಶಿವಣ್ಣ ಯಾಕೆ ನಟಿಸಲಿಲ್ಲ? ಸುದೀಪ್ ಎಂಟ್ರಿ ಆಗಿದ್ದು ಯಾರಿಂದ?
ಅದರಲ್ಲಿ 'ಲೈಫ್ ಇಷ್ಟೆನಾ ಅಂತ ಯಾವತ್ತಾದ್ರೂ ಅನ್ನಿಸಿದ್ಯಾ?' ಅಂತ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಕೇಳಲಾಗಿದೆ. ಅದಕ್ಕವರು ಉತ್ತರಿಸಿದ್ದು, ಬಹಳಷ್ಟು ಮಾರ್ಮಿಕವಾಗಿದೆ ಎನ್ನಬಹುದು. ಹಾಗಿದ್ದರೆ ಸುದೀಪ್ ಉತ್ತರ ಏನಿತ್ತು? 'ಲೈಫ್ ಇಷ್ಟೆನಾ ಅನ್ನೋ ಪ್ರಶ್ನೆ ಯಾವತ್ತೂ ನನಗೆ ಬಂದಿಲ್ಲ. ಅದರ ಬದಲು ನಾವ್ಯಾಕೆ ಲೈಫನ್ನ ಇಷ್ಟೇ ಮಾಡ್ಕೊಂಡ್ಬಿಟ್ಟಿದೀವಿ ಅಂತ ಅನ್ನಿಸ್ತಿದೆ.. ಇದರ ಮಧ್ಯೆ ಕಳೆದೋದ್ವಾ ನಾವು? ಇನ್ನೂ ತುಂಬಾ ಇತ್ತಲ್ಲ ಮಾಡೋದಕ್ಕೆ ಅನ್ನಿಸಿದೆ.. ಇನ್ನೂ ಇದ್ಯಲ್ಲ, ಇಷ್ಟೊಂದು ಜನ ನಮ್ಮನ್ನ ಪ್ರೀತಿಸೋರು ಇದಾರಲ್ಲ! ಯಾಕೆ ಇಲ್ಲಿ ಕಾಲ ಕಳೀತಾ ಇದೀವಿ ನಾನು..'
ಲೈಫನ್ನ ಲಾರ್ಜನ್ ವಿಷನ್‌ನಲ್ಲಿ ನೋಡೋಕೆ ಹೋದಾಗ, ಆವಾಗ ಅನ್ನಿಸುತ್ತೆ.. ಇಲ್ಲಿದೀನಿ ಇನ್ನ ನಾನು ಸುಮ್ನೆ ಕಾಲ ಕಳ್ಕೊಂಡು.. ಅದನ್ನ ನಾನು ಅರ್ಥ ಮಾಡ್ಕೊಂಡಿದೀನಿ.. ಅರ್ಥ ಅಗ್ತಾ ಇದೆ ಅಂದ್ಕೊಂಡಿದೀನಿ..' ಅಂದಿದ್ದಾರೆ ನಟ ಸುದೀಪ್. ಸುದೀಪ್ ಈ ಮಾತುಗಳಿಗೆ ಹಲವು ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬಂದಿದ್ದು, ಕೆಲವರು 'ನೀವು ಟೈಮ್ ವೇಸ್ಟ್ ಮಾಡಿಲ್ಲ, ಜೀವನದಲ್ಲಿ ಬಹಳಷ್ಟು ಸಾಧಿಸಿದ್ದೀರಿ ಸರ್' ಎಂದಿದ್ದಾರೆ. ಇನ್ನೂ ಕೆಲವರು, 'ನಿಮಗೆ ತುಂಬಾ ದೂರದೃಷ್ಟಿ ಇದೆ ಸರ್' ಎಂದಿದ್ದಾರೆ.
ಜೀವನಕ್ಕೆ ಅಂತ್ಯ ಕೊಟ್ಟ ಶೋಭಿತಾ ಶಿವಣ್ಣ ಇನ್ನು ನೆನಪು ಮಾತ್ರ; ಇಲ್ಲಿವೆ ನಟಿಯ ಮುದ್ದಾದ ಫೋಟೋಸ್!
ಅಂದಹಾಗೆ, ನಟ ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ನಡೆಸಿಕೊಡುತ್ತಿದ್ದಾರೆ. ಅದು ಈಗಾಗಲೇ ಎಂಟು ವಾರಗಳನ್ನು ದಾಟಿ ಮುನ್ನಡೆಯುತ್ತಿದ್ದು, 'ಮುಂದಿನ ಸೀಸನ್ ನಾನು ಹೋಸ್ಟ್ ಮಾಡೋದಿಲ್ಲ, ಇದೇ ನನ್ನ ಲಾಸ್ಟ್ ಬಿಗ್ ಬಾಸ್ ಹೋಸ್ಟಿಂಗ್' ಎಂದಿದ್ದಾರೆ ಸುದೀಪ್. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರವು ಈ ವರ್ಷ, ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಮ್ಯಾಕ್ಸ್ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ ಅವರು ಕಿಚ್ಚ ಸುದೀಪ್ ಅವರಿಗೆ ನಾಯಕಿ.