ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!

ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!

Published : Apr 22, 2026, 12:22 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್​ನಿಧಾನ ಗತಿಯಲ್ಲಿ ಸಾಗ್ತಾ ಇದ್ದು, ತಾನು ಹೊರಗೆ ಬರೋದು ಯಾವಾಗ ಅಂತ ದರ್ಶನ್​ಗೆ ಚಿಂತೆ ಕಾಡ್ತಾ ಇದೆ. ಅಷ್ಟೇ ಅಲ್ಲ ಕುಲಕರ್ಣಿ ರೀತಿ ಕಠಿಣ ಶಿಕ್ಷೆಯಾದ್ರೆ ಏನ್ ಗತಿ ಅನ್ನೋ ಭಯವೂ ಕಾಡ್ತಾ ಇದೆ. 

ಇತ್ತೀಚಿಗೆ ಶಾಸಕ ವಿನಯ್ ಕುಲಕರ್ಣಿಗೆ ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಪರಪ್ಪನ ಅಗ್ರಹಾರದ ಕ್ವಾರಂಟೈನ್‌ ಸೆಲ್‌ ನಲ್ಲಿ ಕುಲಕರ್ಣಿ ಅಂಡ್ ಗ್ಯಾಂಗ್​ನ ಇರಿಸಲಾಗಿದ್ದು, ಇದರ ಪಕ್ಕದಲ್ಲೇ ದರ್ಶನ್ ಸೆಲ್ ಕೂಡ ಇದೆ. ಅಚ್ಚರಿ ಅಂದ್ರೆ ವಿನಯ್ ಕುಲಕರ್ಣಿ ಪಾಲಿಗೆ ದರ್ಶನ್ ಅತ್ಯಾಪ್ತ ಆಗಿದ್ದವರು. ಒಬ್ಬರು ಅಪರಾಧಿ ಆದ್ರೆ ಇನ್ನೊಬ್ರು ಆರೋಪಿಯಾಗಿ ಜೈಲ್​ನಲ್ಲಿ ಮುಖಾಮುಖಿ ಆಗಿದ್ದಾರೆ.

ಕ್ವಾರಂಟೈನ್‌ ಸೆಲ್​ನಲ್ಲಿ ಕುಲಕರ್ಣಿ.. ಪಕ್ಕದಲ್ಲಿ ದರ್ಶನ್; ಜೈಲಿನಲ್ಲಿ ಮುಖಾಮುಖಿ ಆದ ದರ್ಶನ್ & ಕುಲಕರ್ಣಿ..!
ಇತ್ತೀಚಿಗೆ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಗಿತ್ತು. ಕುಲಕರ್ಣಿ ಮತ್ತು ಇತರ 16 ಜನ ಅಪರಾಧಿಗಳನ್ನ ಪರಪ್ಪನ ಅಗ್ರಗಾರಕ್ಕೆ ತರಲಾಗಿದೆ. ದರ್ಶನ್ ಇರುವ ಸೆಲ್​ ಪಕ್ಕದ ಕ್ವಾರಂಟೈನ್‌ ಸೆಲ್​ನಲ್ಲಿ  ಅವರನ್ನ ಇರಿಸಲಾಗಿದೆ.

ದರ್ಶನ್ ಮತ್ತು ಕುಲಕರ್ಣಿ ಆಪ್ತರಾಗಿದ್ದವರು. ದರ್ಶನ್ ರೀತಿಯೇ ವಿನಯ್ ಕುಲಕರ್ಣಿ ಕೂಡ ಫಾರ್ಮ್ ಹೌಸ್ ಮಾಡಿ, ಹಲವು ಪ್ರಾಣಿಗಳನ್ನ ಸಾಕಿಕೊಂಡಿದ್ರು. ಕುಲಕರ್ಣಿ ಫಾರ್ಮ್​ಗೆ ಹಿಂದೊಮ್ಮೆ ದರ್ಶನ್ ವಿಸಿಟ್ ಮಾಡಿದ್ರು. ಆಗ ಖುದ್ದು ಕುಲಕರ್ಣಿ ನಾನು ದರ್ಶನ್ ಸ್ಹೇಹಿತರು ಅಂತ ಹೇಳಿಕೊಂಡಿದ್ರು.

ಈಗ ನೋಡಿದ್ರೆ ಈ ಸ್ನೇಹಿತರು ಜೈಲಿನಲ್ಲಿ ಮುಖಾಮುಖಿ ಆಗೋ ಸ್ಥಿತಿ ಬಂದುಬಿಟ್ಟಿದೆ. ಒಬ್ರು ಅಪರಾಧಿಯಾದ್ರೆ, ಇನ್ನೊಬ್ರು ಆರೋಪಿ. ದೋಸ್ತಿಗಳು ಜೈಲಿನಲ್ಲಿ ಅಕ್ಕ ಪಕ್ಕದ ಸೆಲ್​ನಲ್ಲಿ ಕಳೆಯುವ ಸ್ಥಿತಿ ಬಂದಿದೆ.

ಕುಲಕರ್ಣಿಗೆ ಶಿಕ್ಷೆ.. ದರ್ಶನ್​ಗೆ ಹೆಚ್ಚಾಯ್ತು ಢವ ಢವ..!
ಹೌದು ವಿನಯ್ ಕುಲಕರ್ಣಿ, ಆಡಳಿತ ಪಕ್ಷದಲ್ಲಿ ಶಾಸಕರಾಗಿದ್ದು ಕೂಡ ಕಾನೂನಿನ ಎದುರು ತಪ್ಪಿಸಿಕೊಳ್ಳೋದಕ್ಕೆ ಆಗಲಿಲ್ಲ. ಯೊಗೇಶ್ ಗೌಡ ಕೊಲೆ ಆರೋಪದಲ್ಲಿ ವಿನಯ್ ಌಂಡ್ ಗ್ಯಾಂಗ್​ಗೆ ಜೀವಾವಧಿ ಶಿಕ್ಷೆಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ಘೋಷಣೆ ಮಾಡಿದೆ.

ಕುಲಕರ್ಣಿಯಂತೆ ದರ್ಶನ್ ಮೇಲೂ ಕೊಲೆ ಆರೋಪ ಇದೆ. ಸೇಮ್ ಯೋಗೇಶ್ ಗೌಡ ಕೇಸ್​ನಲ್ಲಿ ಆದಂತೆ ರೇಣುಕಾಸ್ವಾಮಿ ಕೊಲೆ ಬಳಿಕ , ಬೇರೆಯವರನ್ನ ಠಾಣೆಗೆ ಸರೆಂಡರ್ ಮಾಡಿಸಲಾಗಿತ್ತು. ಆದ್ರೆ ಪೊಲೀಸರು ಅದರ ಹಿಂದಿನ ಸೂತ್ರಧಾರಿಗಳನ್ನ ಹಿಡಿದು ಜೈಲಿಗಟ್ಟಿದ್ರು.

ಜೈಲು ಸೇರಿ 5 ತಿಂಗಳಲ್ಲಿ ದರ್ಶನ್​ಗೆ ಹೈಕೋರ್ಟ್ ಬೇಲ್ ಕೊಟ್ಟಿತ್ತು. ಆದ್ರೆ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಅಪೀಲ್ ಮಾಡಿ, ಬೇಲ್​ನ ರದ್ದು ಮಾಡಿಸ್ತು. ಇದೀಗ 7 ತಿಂಗಳಿಂದ ದರ್ಶನ್ ಪರಪ್ಪನ ಅಗ್ರಹಾರ ವಾಸಿ ಆಗಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್​​ ನಿಧಾನ ಗತಿಯಲ್ಲಿ ಸಾಗ್ತಾ ಇದ್ದು, ತಾನು ಹೊರಗೆ ಬರೋದು ಯಾವಾಗ ಅಂತ ದರ್ಶನ್​ಗೆ ಚಿಂತೆ ಕಾಡ್ತಾ ಇದೆ. ಅಷ್ಟೇ ಅಲ್ಲ ಕುಲಕರ್ಣಿ ರೀತಿ ಕಠಿಣ ಶಿಕ್ಷೆಯಾದ್ರೆ ಏನ್ ಗತಿ ಅನ್ನೋ ಭಯವೂ ಕಾಡ್ತಾ ಇದೆ. ಒಟ್ನಲ್ಲಿ ಪಕ್ಕದ ಸೆಲ್​ನಲ್ಲಿರೋ ಪಕ್ಕಾ ಸ್ನೇಹಿತನಿಂದ ದರ್ಶನ್ ಆತಂಕ ಹೆಚ್ಚಾಗಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
Read more