ದರ್ಶನ್​ ಬಂಧನ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!

By Govindaraj SFirst Published Jun 12, 2024, 10:45 AM IST
Highlights

ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಫ್ರೊಫೈಲ್​ ಫೋಟೋನ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ಈ ನಡೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. 
 

ಬೆಂಗಳೂರು (ಜೂ.12): ಕೊಲೆ ಪ್ರಕರಣದಲ್ಲಿ ಬಂಧನದ ಬೆನ್ನಲ್ಲೇ ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೌನ ವಹಿಸಿದ್ದಾರೆ. ಈ ಘಟನೆ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ. ಹೀಗಿರುವಾಗಲೇ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಫ್ರೊಫೈಲ್​ ಫೋಟೋನ ಡಿಲೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ನಟ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ. ಈ ನಡೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. 

ಪವಿತ್ರಾ ವಿಚಾರದಲ್ಲಿ ದರ್ಶನ್ ಆಗಾಗ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾನೇ ಇರುತ್ತಾರೆ. ಈ ಬಾರಿಯೂ ಪವಿತ್ರಾ ವಿಚಾರವಾಗಿಯೇ ಘನಘೋರ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಯವರಿಗೆ ಸಹಜವಾಗಿಯೇ ಪವಿತ್ರಾ ಗೌಡ ಮೇಲೆ ಕೆಟ್ಟ ಕೋಪ ಬಂದಿರುತ್ತದೆ. ಆದರೂ ತಾಳ್ಮೆ ವಹಿಸಿಕೊಂಡು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯರು ಇನ್‌ಸ್ಟಾದಲ್ಲಿ ಪವಿತ್ರಾ ಗೌಡ ಪತಿ ಹಾಗೂ ಮಗಳ ಬಗ್ಗೆ ಫೋಟೋಗಳನ್ನು ಶೇರ್ ಮಾಡಿ ಮಾತಿನ ದಾಳಿ ನಡೆಸಿದ್ದರು. ಆ ಬಳಿಕ ದರ್ಶನ್ ಅಭಿಮಾನಿಗಳಲ್ಲೇ ಎರಡು ಬಣವಾಯ್ತು. 

Latest Videos

ಪ್ರೇಮ-ರಹಸ್ಯ: ನಟ ದರ್ಶನ್‌ ವಿವಾದಿತ ಜೀವನದ ಪ್ರಮುಖ ಪಾತ್ರಧಾರಿ ಪವಿತ್ರಾ ಗೌಡ!

ದರ್ಶನ್ ವಿಜಯಲಕ್ಷ್ಮಿ ದಂಪತಿ ಇಷ್ಟಪಡುವ ಫ್ಯಾನ್ಸ್, ದರ್ಶನ್‌ರ ಎರಡೂ ಸಂಸಾರವನ್ನು ಇಷ್ಟಪಡುವ ಫ್ಯಾನ್ಸ್. ಇನ್ನು ದರ್ಶನ್ ಅಭಿಮಾನಿಯೇ ಆಗಿದ್ದ ರೇಣುಕಾಸ್ವಾಮಿಯವರು ವಿಜಯಲಕ್ಷ್ಮಿ ದರ್ಶನ್‌ರನ್ನು ಇಷ್ಟಪಡುತ್ತಿದ್ದರು. ಹೀಗಾಗಿ ಪವಿತ್ರಾ ಗೌಡ ಪೋಸ್ಟ್‌ಗೆ ಬೇಸರದಿಂದ ಕಾಮೆಂಟ್ ಮಾಡುತ್ತಿದ್ದರು. ಇದೀಗ ದರ್ಶನ್ ಅವರು ಪವಿತ್ರಾಗಾಗಿ ಕೊಲೆ ಮಾಡಿದರು ಎನ್ನುವ ಆರೋಪ ಹೊತ್ತಿರೋದು ವಿಜಯಲಕ್ಷ್ಮಿ ಅವರಿಗೆ ಸಾಕಷ್ಟು ಶಾಕಿಂಗ್ ಎನಿಸಿದೆ. ಜೊತೆಗೆ ಬೇಸರ ಕೂಡ ಮೂಡಿಸಿದೆ. ಇನ್​ಸ್ಟಾಗ್ರಾಮ್​ನಲ್ಲಿ ದರ್ಶನ್ ಸೇರಿ ಎಲ್ಲರನ್ನೂ ವಿಜಯಲಕ್ಷ್ಮಿ ಅನ್​ಫಾಲೋ ಮಾಡಿದ್ದಾರೆ. 

ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್‌ ಸಿಟ್ಟಿಗೇಳಲು ಇದೇ ಕಾರಣವಂತೆ!

ಈ ಮೊದಲು ಅವರು ದರ್ಶನ್​ನ ಫಾಲೋ ಮಾಡುತ್ತಿದ್ದರು. ಇನ್ನು, ಇನ್​ಸ್ಟಾಗ್ರಾಮ್ ಡಿಪಿಯನ್ನು ಕೂಡ ತೆಗೆದು ಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ದರ್ಶನ್ ಜೈಲು ಸೇರಿದ ದುಃಖದಲ್ಲೇ ಈ ರೀತಿ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯು ತನ್ನ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದನೆಂದು ಸಿಟ್ಟಿಗೆದ್ದು ದರ್ಶನ್ ಹಾಗೂ ಗ್ಯಾಂಗ್ ಆತನನ್ನು ಕಿಡ್ನಾಪ್ ಮಾಡಿ ಬೆಂಗಳೂರಿನಲ್ಲಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದೆ. ಬಳಿಕ ಮೃತದೇಹವನ್ನು ಮೋರಿಗೆ ಎಸೆಯಲಾಗಿದೆ. ಪ್ರಕರಣ ಸಂಬಂಧ ಇದೀಗ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದು, 6 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

click me!