ಪೇರೆಂಟಿಂಗ್ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದೇನು? ಇಂದಿನ ಕಾಲಕ್ಕೆ ಈ ಅಡ್ವೈಸ್‌ ಸೂಕ್ತವೇ?

By Shriram Bhat  |  First Published May 9, 2024, 12:22 PM IST

ನಟ ವಿಜಯರಾಘವೇಂದ್ರ ಅವರು ಈಗ ಸಿಂಗಲ್ ಪೇರೆಂಟ್. ಅವರೇ ಮಗನಿಗೆ ಅಪ್ಪಅಮ್ಮ ಎರಡೂ ಆಗಿ ನೋಡಿಕೊಳ್ಳಬೇಕು. ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಕಳೆದ ವರ್ಷ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. 


ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ (Vijay Raghavendra) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಪೇರೆಂಟಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ. 'ಇವತ್ತಿನ ಮಕ್ಕಳನ್ನು ಹ್ಯಾಂಡಲ್‌ ಮಾಡೋದು ಅಷ್ಟು ಸುಲಭವಲ್ಲ. ಯಾಕಂದ್ರೆ, ಇವತ್ತು ಸೋಷಿಯಲ್ ಮೀಡಿಯಾ ಹಾಗೂ ಇಂಟರ್‌ನೆಟ್ ಮೂಲಕ ಬಹಳಷ್ಟು ಮಾಹಿತಿಗಳು ಪ್ರತಿಯೊಬ್ಬರ ಕೈನಲ್ಲೇ ಇರುವ ಮೊಬೈಲ್‌ ಮೂಲಕ ಸಿಗ್ತಾನೇ ಇರ್ತಾವೆ. ಮೊದಲಿನಂತೆ ಕನ್ವೆನ್ಷನಲ್ ವೇ ದಲ್ಲಿ ಹ್ಯಾಂಡಲ್‌ ಮಾಡೋದು ಬೆಟರ್ ಅಂತ ನಾನು ಎಲ್ಲ ಪೇರೆಂಟ್ಸ್‌ಗೆ ಹೇಳೋಕೆ ಇಷ್ಟ ಪಡ್ತೀನಿ. 

ನಾನು ನಿನ್ನಪ್ಪ, ನಾನು ನಿನ್ನ ಅಮ್ಮ, ಹೇಳ್ತಾ ಇದೀನಿ ಕೇಳು, ನಿನ್ನ ಒಳ್ಳೇದಕ್ಕೇ ಹೇಳ್ತಾ ಇದೀನಿ.. ಅನ್ನೋ ರೀತಿನೇ ಸರಿ. ಆದರೆ, ಹೇಳೋದಕ್ಕೆ ಒಂದು ಸರಿಯಾದ ವೇ ಇದೆ, ಹಾಗೇ ಹೇಳ್ಬೇಕು. ಮಕ್ಕಳಿಗಾಗಿಯೇ ಇರಿ, ಅವರ ಬಗ್ಗೆಯೇ ಎಲ್ಲ ಕಾಳಜಿ ಇರಲಿ, ಅವರಿಗಾಗಿ ನೀವು ಸಾಕಷ್ಟು ಸಮಯ ಕೊಡಿ, ಅವರಿಗೆ ಬೇಕಾಗಿರುವುದು ನಿಮ್ಮ ಜತೆಗೆ ಅವರು ಇರಬೇಕಾದ ಸಮಯ. ಯಾವಾಗ ಅವರಿಗೆ ನೀವು ಸಮಯ ಕೊಡಲ್ಲ, ಅವರಿಗೆ ನಿಮ್ಮ ಅಗತ್ಯವಿದ್ದಾಗ ನೀವು ಅವರಿಗೆ ನಿಮ್ಮ ಸಮಯ ಕೊಡಲ್ಲ, ಆಗ ಅವ್ರು ಬೇರೆ ಕಡೆ ಹೋಗ್ತಾರೆ' ಎಂದಿದ್ದಾರೆ ನಟ ವಿಜಯರಾಘವೇಂದ್ರ. 

Tap to resize

Latest Videos

ನಾಲ್ಕು ತಾಸಿಗಿಂತ ಹೆಚ್ಚಿನ ನಿದ್ದೆ ಟೈಂ ವೇಸ್ಟ್ ಅಂದ್ರು ಸಿಹಿಕಹಿ ಚಂದ್ರು; ನೆಟ್ಟಿಗರಿಂದ ಶುರುವಾಯ್ತು ಪಾಠ!

ಬಹುತೇಕರಿಗೆ ತಿಳಿದಿರುವಂತೆ, ನಟ ವಿಜಯರಾಘವೇಂದ್ರ ಅವರು ಈಗ ಸಿಂಗಲ್ ಪೇರೆಂಟ್. ಅವರೇ ಮಗನಿಗೆ ಅಪ್ಪಅಮ್ಮ ಎರಡೂ ಆಗಿ ನೋಡಿಕೊಳ್ಳಬೇಕು. ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಕಳೆದ ವರ್ಷ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಹೀಗಾಗಿ ನಟ ವಿಜಯ್ ರಾಘವೇಂದ್ರ ಅವರೀಗ ಒಬ್ಬಂಟಿ ಪೋಷಕರು. ಹೀಗಾಗಿಯೇ ಅವರಿಗೆ ಅಂಥ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ಕೊಟ್ಟ ಉತ್ತರ ಕೂಡ ಮಾರ್ಮಿಕವಾಗಿದೆ ಎನ್ನಬಹುದು. ನಟ ವಿಜಯರಾಘವೇಂದ್ರ ಕೊಟ್ಟ ಉತ್ತರಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು; ನಟ ರಾಮಕೃಷ್ಣ

ಇನ್ನು, ನಟ ವಿಜಯರಾಘವಂದ್ರ ಪತ್ನಿ ಸ್ಪಂದನಾ ಅವರು ತಮ್ಮ ಸ್ನೇಹಿತೆಯರೊಟ್ಟಿಗೆ ಬ್ಯಾಂಕಾಕ್ (Bangkok)ಹೋಗಿದ್ದಾಗ ಅವರಿಗೆ ಹೃದಯ ಸ್ತಂಭನವಾಗಿ ಅವರು ಅಸು ನೀಗಿದ್ದಾರೆ. 7 ಆಗಷ್ಟ್ 2023ರಂದು (7 August 2023) ಥೈಲ್ಯಾಂಡ್‌ನ (Thailand)ಬ್ಯಾಂಕಾಕ್‌ನಲ್ಲಿದ್ದಾಗ ಈ ದುರಂಥ ಸಂಭವಿಸಿದ್ದು ಅವರು ಪತಿ ವಿಜಯರಾಘವೇಂದ್ರ ಹಾಗೂ ಮಗನನ್ನು ಅಗಲಿದ್ದಾರೆ. ತುಂಬಾ ಅನ್ಯೋನ್ಯವಾಗಿದ್ದ ನಟ ವಿಜಯ್ ರಾಘವೇಂದ್ರ ಹಾಗು ಪತ್ನಿ ಸ್ಪಂದನಾರ ಬಾಳಿನಲ್ಲಿ ಇಂಥ ದುರಂಥ ಸಂಭವಿಸಿದ್ದಕ್ಕೆ ಇಡೀ ಕರುನಾಡು ಮರುಗಿದೆ. 

click me!