'ಸಿಕಂದರ್' ಚಿತ್ರಕ್ಕೆ ಸಹಿ ಹಾಕಿದ ರಶ್ಮಿಕಾ ಮಂದಣ್ಣ; ಸಲ್ಮಾನ್ ಖಾನ್‌ಗೂ ನೀವೇ ಬೇಕಾ ಎಂದ ನೆಟ್ಟಿಗರು!

Published : May 09, 2024, 10:34 AM ISTUpdated : May 09, 2024, 10:46 AM IST
'ಸಿಕಂದರ್' ಚಿತ್ರಕ್ಕೆ ಸಹಿ ಹಾಕಿದ ರಶ್ಮಿಕಾ ಮಂದಣ್ಣ; ಸಲ್ಮಾನ್ ಖಾನ್‌ಗೂ ನೀವೇ ಬೇಕಾ ಎಂದ ನೆಟ್ಟಿಗರು!

ಸಾರಾಂಶ

2025ರಲ್ಲಿ ರಿಲೀಸ್ ಆಗಲಿದೆ ಸಲ್ಲು- ರಾಶ್‌ ಹೊಸ ಸಿನಿಮಾ. ಶೀರ್ಷಿಕೆ ಅನೌನ್ಸ್‌ ಮಾಡಿದ ನಟಿ....

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನ ಬೇಡಿಕೆಯ ನಟಿ. ಸೂಪರ್ ಸ್ಟಾರ್‌ಗಳ ಜೊತೆ ಸೂಪರ್ ಹಿಟ್‌ ಆಗುವಂತ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ ಬ್ಯಾಡ್‌ ಬಾಯ್‌ ಸಲ್ಮಾನ್ ಖಾನ್‌ಗೆ ಜೋಡಿಯಾಗಿದ್ದಾರೆ. 2025ರ ಈದ್‌ ಸಿನಿ ರಸಿಕರಿಗೆ ಹಬ್ಬವಾಗಿರಲಿದೆ.

ಹೌದು! 'ನಮ್ಮಲ್ಲರ ನೆಚ್ಚಿನ ನಟಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಖಾನ್ ಒಟ್ಟಿಗೆಯಾಗಿ ನಟಿಸುತ್ತಿರುವ ಶಿಕಂದರ್ ಸಿನಿಮಾ 2025ರ ಈದ್‌ಗೆ ರಿಲೀಸ್ ಆಗಲಿದೆ. ದೊಡ್ಡ ತೆರೆ ಮೇಲೆ ಈ ಕಾಂಬಿನೇಷನ್‌ ನೋಡಲು ಕಾಯುತ್ತಿದ್ದೀವಿ' ಎಂದು ನಾಡಿಯಾವಾಲಾ ಗ್ರಾಂಡ್‌ಸನ್‌ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಚಿತ್ರವನ್ನು ಏ ಆರ್‌ ಮುರುಗಾದಾಸ್‌ ನಿರ್ದೇಶನ ಮಾಡುತ್ತಿದ್ದಾರೆ. 

ಆಲಿಯಾ ಭಟ್ ನಟನೆಗೆ 'ಶಭಾಷ್' ಅಂದ್ಬಿಟ್ರು, 'ಗಂಗೂಬಾಯಿ ಕಥಿಯಾವಾಡಿ' ಬಗ್ಗೆ ರಶ್ಮಿಕಾ ಹೇಳಿದ್ದೇನು?

'ನೀವೆಲ್ಲರೂ ತುಂಬಾ ದಿನಗಳಿಂದ ಅಪ್‌ಡೇಟ್‌ ನೀಡಿ ಎಂದು ಕೇಳುತ್ತಿದ್ದೀರಿ, ಇಲ್ಲಿದೆ ನೋಡಿ....ಸರ್ಪ್ರೈಸ್. ಶಿಕಂದರ್‌ ಚಿತ್ರತಂಡದ ಜೊತೆ ಕೆಲಸ ಮಾಡಲು ತುಂಬಾನೇ ಖುಷಿಯಾಗುತ್ತಿದೆ' ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡಿದ್ದಾರೆ. 

2022ರಲ್ಲಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್‌ ಮಲ್ಹೋತ್ರಾ ಜೊತೆ 2023ರಲ್ಲಿ ಮಿಷನ್ ಮಜನು ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಗೆ ರಶ್ಮಿಕಾ ಮಾರ್ಕೆಟ್‌ ಹೆಚ್ಚಾಗಿತ್ತು...ಅದೇ ವರ್ಷ ರಣಬೀರ್‌ ಕಪೂರ್‌ ಜೊತೆ ನಟಿಸಿರುವ ಅನಿಮಲ್ ಸಿನಿಮಾ ರಿಲೀಸ್ ಆಯ್ತು. ಮೂರು ಹಿಂದಿ ಸಿನಿಮಾಗಳು ಹಿಟ್ ಆದ ಬೆನ್ನಲೆ ರಶ್ಮಿಕಾ ಚಾವಾ ಚಿತ್ರಕ್ಕೆ ಸಹಿ ಹಾಕಿ ಚಿತ್ರೀಕರಣ ಆರಂಭಿಸಿದ್ದರು. ಇದರ ನಡುವೆ ಶಿಕಂದರ್ ಸಿನಿಮಾ ಅನೌನ್ಸ್ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕನ್ನಡನಾಡಿನ ಸೊಸೆಯಾಗಿದ್ದ ಈ ಬಾಲಿವುಡ್ ನಟಿಗೆ, ಪಾಕಿಸ್ತಾನ ಸೊಸೆಯಾಗೋ ಆಸೆಯಂತೆ!
ಅಪ್ಪನ ಬರ್ತ್’ಡೇಗೆ ಸ್ಪೆಷಲ್ ವಿಶ್, ನಮ್ಮಿಬ್ಬರ ಜೋಡಿ ನೋಡಲು ರೆಡಿಯಾಗಿ ಎಂದ ರಿತನ್ಯಾ ವಿಜಯ್