ಸ್ಯಾಂಡಲ್ವುಡ್ ತಾರಾ ಜೋಡಿಯಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರಿದ್ದ ಜೀಪನ್ನು ಆನೆಯೊಂದು ಅಟ್ಟಾಡಿಸಿಕೊಂಡು ಬಂದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಸ್ಯಾಂಡಲ್ವುಡ್ ಸ್ಟಾರ್ ವಸಿಷ್ಠ ಸಿಂಹ (Vasishta simha) ಎರಡು ವರ್ಷಗಳ ಹಿಂದೆ ಭಾರಿ ಸುದ್ದಿ ಮಾಡಿದ್ದರು. ಇದಕ್ಕೆ ಕಾರಣ ಅವರು, ಸಿನಿ ರಂಗದಲ್ಲಿ ಯಾರೂ ಮಾಡದ ಸಾಹಸವೊಂದಕ್ಕೆ ಕೈ ಹಾಕಿದ್ದರು. ಅದೇನೆಂದರೆ, ಮೃಗಾಲಯದಲ್ಲಿನ ಸಿಂಹವೊಂದನ್ನು ದತ್ತು ಪಡೆದಿದ್ದರು. ಈ ಮೂಲಕ ಹೀಗೆ ಸಿಂಹವನ್ನು ದತ್ತು ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದ ಸಿಂಹವನ್ನು ದತ್ತು ಪಡೆದಿದ್ದರು. ಸ್ಯಾಂಡಲ್ವುಡ್ ನಟರು ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವುದು ಹೊಸ ವಿಷಯವೇನಲ್ಲವೇನಾದರೂ ಸಿಂಹ ದತ್ತು ಪಡೆದ ಮೊದಲಿಗ ಎಂಬ ಖ್ಯಾತಿ ವಸಿಷ್ಠ ಸಿಂಹ ಅವರ ಹೆಸರಿನಲ್ಲಿಯೇ ಈಗಾಗಲೇ ದರ್ಶನ್, ಶಿವರಾಜಕುಮಾರ್, ಇಂದ್ರಜಿತ್ ಲಂಕೇಶ್ ಸೇರಿದಂತೆ ಹಲವರು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇವರೆಲ್ಲಾ ಆನೆ, ಹುಲಿ ಸೇರಿದಂತೆ ಕೆಲವು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದಿರುತ್ತಾರೆ. ಶುಕ್ರವಾರ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಭೇಟಿ ಕೊಟ್ಟ ವಸಿಷ್ಠ ಎಂಟು ತಿಂಗಳ ಸಿಂಹದ ಮರಿಯನ್ನು (Lion) ದತ್ತು ಪಡೆದಿದ್ದಾರೆ. ಆದರೆ ವಶಿಷ್ಠ ಅವರು 2021ರಲ್ಲಿ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಸಿಂಹದ ಮರಿಯನ್ನು ದತ್ತು ಪಡೆದು ಅದಕ್ಕೆ ವಿಜಯನರಸಿಂಹ ಎಂಬ ಹೆಸರನ್ನು ಇಟ್ಟಿದ್ದಾರೆ. ಹೀಗೆ ಅವರು ವನ್ಯಪ್ರಾಣಿಗಳ ಮೇಲೆ ಪ್ರೀತಿ ಮರೆದಿದ್ದಾರೆ.
ಇಂಥ ವಸಿಷ್ಠ ಸಿಂಹ ಅವರು ಈ ವಿಷಯ ಇದೀಗ ಮತ್ತೆ ಚರ್ಚೆಗೆ ಬರಲು ಕಾರಣ, ಅವರನ್ನು ಆನೆಯೊಂದು ಅಟ್ಟಾಡಿಸಿಕೊಂಡು ಬಂದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸಲಿಗೆ ಈ ವಿಡಿಯೋವನ್ನು ಖುದ್ದು ವಸಿಷ್ಠ ಸಿಂಹ ಅವರೇ ಶೇರ್ ಮಾಡಿಕೊಂಡಿದ್ದಾರೆ. ಸಫಾರಿಗೆ ತೆರಳಿದ್ದ ವಸಿಷ್ಠ ಸಿಂಹ ಅವರು ಇದ್ದ ಜೀಪ್ ಅನ್ನು ಆನೆ ಅಟ್ಟಾಡಿಸಿಕೊಂಡು ಬಂದಿದೆ. ವಸಿಷ್ಠ ಅವರ ಜೊತೆ ಅವರ ಪತ್ನಿ ನಟಿ ಹರಿಪ್ರಿಯಾ (Hariprriya) ಕೂಡ ಜೊತೆಗಿದ್ದರು. ಇಬ್ಬರೂ ಜೀಪ್ ಮೇಲೆ ಹೋಗುವಾಗ ಆನೆ ಹಿಂಬದಿಯಿಂದ ದಾಳಿ ಮಾಡಿದ್ದು, ಈ ಜೋಡಿ ಸ್ವಲ್ಪದರಲ್ಲಿಯೇ ಪಾರಾಗಿದೆ.
ಮದ್ವೆ ಆದ್ಮೇಲೆ ದೇಹದ ಸರ್ಜರಿ ಮಾಡಿಸಿಕೊಂಡ್ರಾ ಹನ್ಸಿಕಾ?
ಅಷ್ಟಕ್ಕೂ ಈ ಘಟನೆ ನಡೆದಿರುವುದು ಸಿಂಹ ಮತ್ತು ಹರಿಪ್ರಿಯಾ ದಂಪತಿ ಕಬಿನಿ ಬಳಿ ಸಫಾರಿಗೆ ತೆರಳಿದ್ದ ಸಂದರ್ಭದಲ್ಲಿ. ಕಳೆದ ಶುಕ್ರವಾರ ಈ ಘಟನೆ ಸಂಭವಿಸಿದೆ. ದಂಪತಿ ಕಬಿನಿ ಫಾರೆಸ್ಟ್‌ನಲ್ಲಿ ಸಫಾರಿಗೆಂದು ತೆರಳಿದ್ದ ಸಂದರ್ಭದಲ್ಲಿ ಇವರ ಜೊತೆ ನುರಿತ ತಂಡವೂ ಇತ್ತು. ಸಫಾರಿ (Safari) ವೇಳೆ ಕಾಡಿನ ಮಣ್ಣಿನ ಹಾದಿಯಲ್ಲಿ ಇವರು ಇದ್ದ ಜೀಪ್ ಸಾಗುತ್ತಿತ್ತು. ಆಗ ಇದ್ದಕ್ಕಿದ್ದಂಗೆ ಎಲ್ಲಿಂದಲೋ ಘೀಳಿಡುತ್ತಾ ಬಂದ ಗಜರಾಜ ಜೀಪ್ ಹಿಂದೆ ಓಡೋಡಿ ಬಂದಿದೆ. ಮಾತ್ರವಲ್ಲದೇ ಜೀಪ್‌ನ್ನು ಅಟ್ಟಿಸಿಕೊಂಡು ಬಂದಿದೆ. ಆಗ ಜೀಪ್‌ನಲ್ಲಿದ್ದವರೂ ಹೆದರಿದ್ದಾರೆ. ಹರಿಪ್ರಿಯಾ ಓ ಮೈ ಗಾಡ್ ಎನ್ನುವುದು ವಿಡಿಯೋದಲ್ಲಿ ಕೇಳಬಹುದು. ಆದರೆ ಧೈರ್ಯಗುಂದದ ವಸಿಷ್ಠ ಅವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಪೋಸ್ಟ್ ಮಾಡಿಕೊಂಡಿದ್ದಾರೆ.
ಚೇಸ್ ಹೇಗಿದೆ ನೋಡಿ ಎಂಬ ಶೀರ್ಷಿಕೆ ಕೊಟ್ಟು ಇನ್ಸ್ಟಾಗ್ರಾಮ್ನಲ್ಲಿ (Instagram) ವಿಡಿಯೋ ಹಾಕಿದ್ದಾರೆ. ಇಬ್ಬರ ಅಭಿಮಾನಿಗಳ ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ. ಹಲವರು ತಮಾಷೆಯಾಗಿಯೂ ಕಮೆಂಟ್ ಮಾಡಿದ್ದಾರೆ. ಇಬ್ಬಿಬ್ಬಿರು ಸೆಲೆಬ್ರಿಟಿಗಳು ಒಟ್ಟಿಗೇ ಬಂದದ್ದನ್ನು ಆನೆ ನೋಡಲು ಬಂದಿರಬೇಕು ಎಂದರೆ, ಸಿಂಹ ದತ್ತು ಪಡೆದು ನಮ್ಮನ್ನು ಕಡೆಗಣಿಸಿದ್ದಕ್ಕೆ ಆನೆ ಸೇಡು ತೀರಿಸಿಕೊಂಡಿರಬೇಕು ಎಂದು ಕೆಲವರು ಕಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಹುಷಾರು ಎಂದರೆ, ಮತ್ತೆ ಕೆಲವರು ಸಿಂಹವನ್ನು ನೋಡಲು ಬಂದ ಕಂಡ ಆನೆ ಎಂದು ತಾವೇ ಕ್ಯಾಪ್ಷನ್ ಕೊಟ್ಟಿದ್ದಾರೆ. ಮತ್ತೆ ಕೆಲವರು ಈ ದಂಪತಿಗೆ ಕಾಲೆಳೆದಿದ್ದಾರೆ. ಮದುವೆ ಆದ ಬಳಿಕ ಜೋಡಿ ಪಾರ್ಟಿ ಕೊಟ್ಟಿಲ್ಲ, ಹಾಗಾಗಿ ನಿಮ್ಮನ್ನು ಚೇಸ್ ಮಾಡುತ್ತಿದೆ ಎಂದಿದ್ದಾರೆ. ಸಿಂಹ ನೋಡಿ ಆನೆಗೆ ಭಯ ಆಗಿರಬೇಕು ಎಂದಿದ್ದಾರೆ ಹಲವರು.
Adipurush ನೋಡಲು 5,500 ಕಿ.ಮೀ ಪ್ರಯಾಣಿಸಿದ ಲೇಡಿ ಫ್ಯಾನ್ ಹೀಗಂದ್ರು...
ಅಂದಹಾಗೆ, ವಸಿಷ್ಠ ಸಿಂಹ ಅವರು ಕಳೆದ ಜನವರಿ 26ರಂದು ಹರಿಪ್ರಿಯಾ ಅವರನ್ನು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಿದ್ದಾರೆ.