
ಕರ್ನಾಟಕದ ಸಿನಿಮಾ ಪ್ರೇಮಿಗಳ ಮಾತ್ರವಲ್ಲ ಇಡೀ ದೇಶದ ಸಿನಿಮಾ ಪ್ರೇಮಿಗಳ ಕಣ್ಣು ರಿಷಬ್ ಶೆಟ್ಟಿಯವರ ಮೇಲೆ ಇದೆ. ಕಾಂತಾರ ಸಿನಿಮಾ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಗೆದ್ದ ಮೇಲೆ ಕಾಂತಾರ ಸಿನಿಮಾದ ಪ್ರೀಕ್ವೆಲ್ ಮಾಡಲು ರಿಷಬ್ ಶೆಟ್ಟಿ ಮುಂದಾಗಿದ್ದರು. ಇದೀಗ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಬಹುಪಾಲು ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಈ ಹಂತದಲ್ಲಿ ರಿಷಬ್ ಶೆಟ್ಟಿ ದಂಪತಿ ಅಮೆರಿಕಾ ದೇಶಕ್ಕೆ ಹೊರಟಿದ್ದಾರೆ.
ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರಗತಿ ಶೆಟ್ಟಿ ಅಮೆರಿಕಾ ಕಾಲಿಂಗ್ ಎಂದು ಬರೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕಾಂತಾರ 2 ಸಿನಿಮಾದ ಸ್ಕ್ರಿಪ್ಟ್ ಕೆಲಸದ ಬಹುಪಾಲು ಮುಗಿದಂತೆ ಇದೆ. ಆದರೆ ಈ ಸಿನಿಮಾ ಕುರಿತ ಯಾವುದೇ ಮಾಹಿತಿಯನ್ನು ನೀಡಲು ರಿಷಬ್ ಶೆಟ್ಟಿ ನಿರಾಕರಿಸುತ್ತಾರೆ.
ರಿಷಬ್ ಶೆಟ್ಟಿ 'ಕಾಂತಾರ 2' ಮುಹೂರ್ತಕ್ಕೆ ದಿನಾಂಕ ಫಿಕ್ಸ್: ಎಲ್ಲಿ, ಯಾವಾಗ? ಇಲ್ಲಿದೆ ಸಂಪೂರ್ಣ ವಿವರ
ಕಾಂತಾರ 2 ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಕಳರಿ ಮತ್ತು ಕುದುರೆ ಸವಾರಿ ಕಲಿಯುತ್ತಿದ್ದಾರೆ ಎಂಬ ಸುದ್ದಿ ಇದೀಗ ವೈರಲ್ ಆಗಿದೆ. ಆದರೆ ರಿಷಬ್ ಶೆಟ್ಟಿ ಕಳರಿ ಕಲಿಯುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಅವರ ತಂಡದ ಮುಂದೆ ಇಟ್ಟರೆ ಅದಕ್ಕೆ ಉತ್ತರ ದೊರೆತಿಲ್ಲ. ಕಾಂತಾರ 2 ಸಿನಿಮಾದ ಕುರಿತ ಯಾವುದೇ ಪ್ರಶ್ನೆಗೂ ರಿಷಬ್ ಶೆಟ್ಟಿ ಮತ್ತು ಅವರ ತಂಡ ಪ್ರತಿಕ್ರಿಯೆ ನೀಡುತ್ತಿಲ್ಲ.
ಒಂದು ಮೂಲದ ಪ್ರಕಾರ ಕಾಂತಾರ ಚಿತ್ರಕ್ಕೆ ಸೆಪ್ಟೆಂಬರ್ ಅಂತ್ಯದಲ್ಲಿ ಮುಹೂರ್ತ ಆಗಿದ್ದರಿಂದ ಕಾಂತಾರ 2 ಚಿತ್ರಕ್ಕೂ ಸೆಪ್ಟೆಂಬರ್ ಅಂತ್ಯದಲ್ಲಿ ಮುಹೂರ್ತ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಮಾಹಿತಿಯನ್ನು ರಿಷಬ್ ಶೆಟ್ಟಿ ತಂಡವಾಗಲಿ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ನವರಾಗಲೀ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈ ಮಧ್ಯೆ ರಿಷಬ್ ಶೆಟ್ಟಿ ಅಮೆರಿಕಾಗೆ ತೆರಳಿರುವುದು ಕುತೂಹಲ ಹುಟ್ಟಿಸಿದೆ.
ಜೋಯಿಡಾದಲ್ಲಿ ಕೊಂಕಣಿ ಕಲಿತ ರಿಷಬ್ ಶೆಟ್ಟಿ: ಕುಣಬಿ ಜನರ ಜತೆ ಭಾಷಾಭ್ಯಾಸ
ಈ ಹಿಂದೆ ಅವರ ಸ್ನೇಹಿತ ರಕ್ಷಿತ್ ಶೆಟ್ಟಿಯವರು ರಿಚರ್ಡ್ ಆ್ಯಂಟನಿ ಚಿತ್ರದ ಸ್ಕ್ರಿಪ್ಟ್ ಬರೆಯಲು ಅಮೆರಿಕಾಗೆ ತೆರಳುವುದಾಗಿ ತಿಳಿಸಿದ್ದರು. ಇದೀಗ ರಿಷಬ್ ಶೆಟ್ಟಿ ಕೂಡ ಅಲ್ಲಿಗೆ ತೆರಳಿದ್ದಾರೆ. ರಿಷಬ್ ಶೆಟ್ಟಿ ಪ್ರವಾಸಕ್ಕೆ ಹೋದರೂ ಸ್ಕ್ರಿಪ್ಟ್ ಬಗ್ಗೆ ಯೋಚಿಸುವಂತಹ ವ್ಯಕ್ತಿತ್ವ ಉಳ್ಳವರು. ಅವರು ಯಾವತ್ತೂ ರಜೆ ತೆಗೆದುಕೊಳ್ಳುವವರಲ್ಲ. ಅಲ್ಲದೇ ಪ್ರಗತಿ ಶೆಟ್ಟಿಯವರು ಕೂಡ ಅವರ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಾರೆ. ಈ ಇಬ್ಬರೂ ಅಮೆರಿಕಾಗೆ ತೆರಳಿರುವುದರಿಂದ ಅಭಿಮಾನಿಗಳಿಗೆ ಕುತೂಹಲ ಹುಟ್ಟಿಕೊಂಡಿದೆ.
ಕಾಂತಾರ 2 ಚಿತ್ರವು ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವುದರಿಂದ ಕತೆ ನಡೆಯುವ ಕಾಲವೂ ಎಂಭತ್ತರ ದಶಕದ ಕಾಲ ಆಗಿರುತ್ತದೆ. ಆದ್ದರಿಂದ ಕಾಂತಾರ 2 ಚಿತ್ರಕ್ಕೆ ಕಾಂತರ ಒಂದನ್ನೇ ಭಾಗಕ್ಕಿಂತ ಹೆಚ್ಚು ತಯಾರಿ ಸಿದ್ಧತೆ ಬೇಕಾಗುತ್ತದೆ. ಅಲ್ಲದೇ ಬಜೆಟ್ ಕೂಡ ತುಂಬಾ ಜಾಸ್ತಿಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಶುರುವಾಗುವುದು ತಡವಾಗುತ್ತಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.